ಪಾಕ್‌ಗೆ ಭಾರತ ಮರೆಯಲಾಗದ ಪಾಠ ಕಲಿಸಿದ್ದು  ಹೇಗೆ?

Published : Jul 26, 2018, 11:55 AM ISTUpdated : Jul 26, 2018, 11:59 AM IST
ಪಾಕ್‌ಗೆ ಭಾರತ ಮರೆಯಲಾಗದ ಪಾಠ ಕಲಿಸಿದ್ದು  ಹೇಗೆ?

ಸಾರಾಂಶ

ಕಾರ್ಗಿಲ್ ವಿಜಯ ದಿನ ನಿಜಕ್ಕೂ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ದಿನ. ಇತಿಹಾಸವನ್ನು ಒಂದು ಕ್ಷಣ ಅವಲೋಕನ ಮಾಡಿದರೆ ಹಲವಾರು ಅಂಶಗಳು ಕಣ್ಣ ಮುಂದೆ ನಿಲ್ಲುತ್ತವೆ. ಅವುಗಲ್ಲದರ ಮೇಲೆ ಒಂದು ನೋಟ ಇಲ್ಲಿದೆ.

ಕಾರ್ಗಿಲ್ ವಿಜಯ ದಿವಸ್ ಘೋಷಣೆ: ಪಾಕಿಸ್ತಾನ 1999, ಮೇ 9 ರಂದು ಭಾರತದ ಗಡಿ ಭಾಗದಲ್ಲಿ ನುಸುಳಿ ಶೆಲ್‌ದಾಳಿ ಮಾಡಲು ಪ್ರಾರಂಭಿಸಿತು. ಭಾರತ ಸೇನೆಯೂ ಸನ್ನದ್ಧವಾಗಿ ಯೋಧರನ್ನು ಕಾರ್ಗಿಲ್ ಸೆಕ್ಟರ್‌ಗೆ ಕಳುಹಿಸಿತು. ಭಾರತ ಆಗ ಪ್ರಮುಖವಾಗಿ ನಡೆಸಿದ್ದು ವಾಯುಪಡೆಯ ದಾಳಿಯನ್ನು. ಈ ವೇಳೆ ಭಾರತದ ವಾಯುಸೇನೆಯ ಎರಡು ಫೈಟರ್ ಹಾಗೂ ಒಂದು ಹೆಲಿಕಾಪ್ಟರ್ ಕೂಡ ಪಾಕ್ ಸೇನೆ ಉಡಾಯಿಸಿತ್ತು. ಆದಾಗ್ಯು ಭಾರತ ಸೇನೆ 32000 ಅಡಿ ಎತ್ತರದ ಪ್ರದೇಶದಲ್ಲಿ ಭಾರತ ಮೊದಲ ಬಾರಿ ವಾಯುದಾಳಿ ನಡೆಸಿತ್ತು.

ಕಾರ್ಗಿಲ್ ದ್ರಾಸ್ ಸೆಕ್ಟರ್‌ನಲ್ಲಿರುವ ಟೈಗರ್‌ಹ ಹಿಲ್ ಪಾಕಿಸ್ತಾನದ ವಶದಲ್ಲಿರುವ ಅತ್ಯಂತ ಎತ್ತರದ ಪ್ರದೇಶ. ಅಲ್ಲಿ ನಡೆದ 11 ಗಂಟೆ ಯುದ್ಧ ಸೆರೆಯಾಗಿದೆ. ಅಂತಿಮ ವಾಗಿ ಜುಲೈ 26ರಂದು ಕಾರ್ಯಾಚರಣೆ ಮುಗಿದು ವಿಜಯ ದಿವಸವನ್ನು ಭಾರತ ಘೋಷಣೆ ಮಾಡಲಾಯಿತು.

ಪಾಕ್ ಕಿತಾಪತಿಯಿಂದ ಕಾರ್ಗಿಲ್ ಯುದ್ಧ:  ಪಾಕಿಸ್ತಾನ ಸೇನೆ ಮತ್ತು ಉಗ್ರರು ಭಾರತದ ಗಡಿಯೊಳಕ್ಕೆ ನುಸುಳಿ ಕಾರ್ಗಿಲ್ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದರು. ಮೊದಲಿಗೆ ಭಾರತದ ಒಳನುಸುಳಿದವರು ಮುಜಾಹಿದ್ದೀನ್ ಉಗ್ರ ಸಂಘಟನೆಯವರೆಂದೇ ಭಾರತ ಸೇನೆ ಭಾವಿಸಿತ್ತು. ಅನಂತರಪಾಕಿಸ್ತಾನ ಸೇನೆ ಭಾರತದ ಕೆಲ ಭಾಗಗಳನ್ನು ಆಕ್ರಮಿಸಿಕೊಂಡಿದೆ ಎಂದು ಭಾರತ ಅರಿಯಿತು. ಪಾಕ್‌ನ ಉಗ್ರರು ಮತ್ತು ಸೇನೆಯನ್ನು ಹೊಡೆದೋಡಿಸಲು ‘ಆಪರೇಷನ್ ವಿಜಯ್’ ಹೆಸರಿನಲ್ಲಿ ಭಾರತ ಯುದ್ಧಕ್ಕೆ ಸನ್ನದ್ಧವಾಯಿತು. ಮೇನಿಂದ ಜುಲೈವರೆಗೆ ಎರಡು ತಿಂಗಳುಗಳ ಕಾಲ ಯುದ್ಧ ನಡೆಯಿತು. ಅಂತಿಮವಾಗಿ 1999 ಜುಲೈ
26 ರಂದು ಭಾರತದ ವಿಜಯದೊಂದಿಗೆ ಯುದ್ಧ ಅಂತ್ಯವಾಯಿತು.

ಅಟಲ್ ಶಾಂತಿ ಮಂತ್ರಕ್ಕೆ ಬೆಲೆ ನೀಡದ ಪಾಕ್ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಶಾಂತಿ ಮಂತ್ರದ ಪ್ರಸ್ತಾಪವನ್ನು ದಿಕ್ಕರಿಸಿ ಪಾಕಿಸ್ತಾನದ ಜನರಲ್ ಪರ್ವೇಜ್ ಮುಷರಫ್ ಕಾರ್ಗಿಲ್ ಯುದ್ಧ ಪ್ರಾರಂಭಕ್ಕೆ ಕಾರಣಕರ್ತರಾದರು. ಅಂತಿಮವಾಗಿ ಭಾರತದ ವಿಜಯೋತ್ಸವದೊಂದಿಗೆ ಯುದ್ಧ ಅಂತ್ಯ ಕಂಡಿತು. 19 ವರ್ಷಗಳ ಹಿಂದೆ ‘ಆಪರೇಷನ್ ವಿಜಯ್’ ಹೆಸರಿನಲ್ಲಿ ಜುಲೈ26 ರಂದು ನಡೆದ ಯುದ್ಧ ಭಾರತದ ಇತಿಹಾಸದಲ್ಲಿ ಕಾರ್ಗಿಲ್ ವಿಜಯ ದಿವಸ್ ಎಂದೇ ಪ್ರತಿ ವರ್ಷ ಆಚರಣೆಯಾಗುತ್ತಿದೆ.

ಪಾಕ್ ಉಗ್ರರ ಒಳನುಸುಳುವಿಕೆ ಮಾಹಿತಿ ನೀಡಿದ್ದು ಸ್ಥಳೀಯರು ಪಾಕಿಸ್ತಾನ ತನ್ನ ಷಡ್ಯಂತರದ ಮೂಲಕ ಅಲ್ಲಿನ ಸ್ಥಳೀಯರನ್ನು ಬೆಟಾಲಿಕ್ ಸೆಕ್ಟರ್, ದ್ರಾಸ್ ಮತ್ತು ಕಾಸ್ಕಾರ್ ಸೆಕ್ಟರ್ ಮೂಲಕ ಭಾರತದ ಗಡಿಯೊಳಕ್ಕೆ ನುಸುಳುವಂತೆ ಕಳುಹಿಸಿತ್ತು. ಆದರೆ ಕಾಶ್ಮೀರದಲ್ಲಿರುವ ಸ್ಥಳೀಯರು ಭಾರತ ಸೇನೆಗೆ ವಿಷಯ ತಿಳಿಸಿದರು. ಆಗ ಭಾರತ ಸೇನೆ ಶೀಘ್ರವೇ ಪಾಕ್ ದುಷ್ಟತನಕ್ಕೆ ತಕ್ಕ ಪಾಠ ಕಲಿಪಾಕ್ ಕೋಟೆಯ ಬಂಕರ್ ಮೇಲೆ ಭಾರತ ಸೇನೆ ಕಣ್ಣು ಭಾರತಕ್ಕೆ ಯುದ್ಧ ಒಂದು ಅಚ್ಚರಿಯಾಗಿದ್ದರೂ,ಎತ್ತರದ ಪ್ರದೇಶ ಅನಾನುಕೂಲ ಇದ್ದರೂ ಶೆಲ್ ದಾಳಿ ಮುಖಾಂತರ ಭಾರತ ಸೇನೆ ಪಾಕಿಸ್ತಾನ ಬಂಕರ್‌ಗಳ ಮೇಲೆಯೇ ಕಣ್ಣಿಟ್ಟಿತ್ತು. ಪಾಕ್ ದಾಳಿಯನ್ನು ಹುಟ್ಟಡ ಗಿಸುವಲ್ಲಿ ಬೋಫೋರ್ಸ್‌ ಫಿರಂಗಿಗಳು ಭಾರತಕ್ಕೆ ನೆರವಾಗಿದ್ದವು.

ಜಮ್ಮು ಕಾಶ್ಮೀರದ ಕಾರ್ಗಿಲ್ ಮತ್ತು ಲಡಾಖ್‌ನಲ್ಲಿ ೧೯೯೯ರವರೆಗೂ ಪಾಕಿಸ್ತಾನದ ತೀವ್ರ ಉಪಟಳವಿತ್ತು. ಕಾಶ್ಮೀರ ಯುದ್ಧದ ನಂತರ ಗಡಿ ನಿಯಂತ್ರಣ ರೇಖೆಯ
ಆಚೆಗಿದ್ದ ಬಾಲ್ಟಿಸ್ತಾನದಲ್ಲಿ ಉಪಟಳ ನೀಡುತ್ತಿದ್ದ ಪಾಕಿಸ್ತಾನ ನಿಧಾನವಾಗಿ ಜಮ್ಮು ಕಾಶ್ಮೀರಕ್ಕೂಕಾಲಿಟ್ಟಿತ್ತು.

1971 ರಲ್ಲಿ ಭಾರತ-ಪಾಕ್ ನಡುವೆ ನಡೆದ ಬಾಂಗ್ಲಾದೇಶ ವಿಮೋಚನೆ ಯುದ್ಧದ ನಂತರ ಉಭಯ ದೇಶಗಳ ನಡುವೆ ನಡೆದ ಮೊದಲ ಯುದ್ಧ ಕಾರ್ಗಿಲ್.
ಥಿ ಆಗ ಭಾರತದ ಪ್ರಧಾನಿಯಾಗಿದ್ದವರು ಅಟಲ್ ಬಿಹಾರಿವಾಜಪೇಯಿ, ಪಾಕ್ ಪ್ರಧಾನಿ ನವಾಜ್ ಷರೀಫ್. ಕಾರ್ಗಿಲ್‌ಗೆ ನುಸುಳಿ ಆ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದ ಪಾಕ್ ಯೋಧರು ಮತ್ತುಉಗ್ರರನ್ನು ಹೊಡೆದೋಡಿಸಲು ಕಾರ್ಗಿಲ್ ಯುದ್ಧನಡೆಯಿತು.

1999 ಮೇ ತಿಂಗಳಿನಿಂದ ಜುಲೈವರೆಗೆ ಕಾರ್ಗಿಲ್ ಹಾಗೂ ಗಡಿ ನಿಯಂತ್ರಣ ರೇಖೆಯ ಗುಂಟ ಯುದ್ಧ ನಡೆಯಿತು.ಭಾರತ ಆಗ ಪ್ರಮುಖವಾಗಿ ನಡೆಸಿದ್ದು ವಾಯುಪಡೆಯ
ದಾಳಿಯನ್ನು. 32000 ಅಡಿ ಎತ್ತರದ ಪ್ರದೇಶದಲ್ಲಿಭಾರತ ಮೊದಲ ಬಾರಿ ವಾಯುದಾಳಿ ನಡೆಸಿತ್ತು.  ಜುಲೈ 14ರಂದು ವಾಜಪೇಯಿ ಕಾರ್ಗಿಲ್ ಯುದ್ಧದಲ್ಲಿ
ಭಾರತ ಗೆದ್ದಿದೆ ಎಂದು ಘೋಷಿಸಿದರು. ಆದರೆ, ಅಧಿಕೃತವಾಗಿ ಜುಲೈ 26ರಂದು ಕಾರ್ಯಾಚರಣೆಮುಗಿದು ವಿಜಯ ದಿವಸ ಆಚರಿಸಲಾಯಿತು.

ಯುದ್ಧದಲ್ಲಿ ಭಾರತ ಸುಮಾರು 500 ಯೋಧರನ್ನುಕಳೆದುಕೊಂಡಿತು. ಪಾಕಿಸ್ತಾನದ ಸುಮಾರು 3000 ಯೋಧರು ಹಾಗೂ ಉಗ್ರರು ಸಾವನ್ನಪ್ಪಿದ್ದರು. ಜಗತ್ತಿನಲ್ಲಿ ಎರಡು ಅಣ್ವಸ್ತ್ರ ದೇಶಗಳು ನಡೆಸಿದ ಅಪರೂಪದ ಯುದ್ಧವೆಂದು ಕಾರ್ಗಿಲ್ ಯುದ್ಧ. ಕಾರ್ಗಿಲ್ ಅತ್ಯಂತ ಎತ್ತರದ ಪ್ರದೇಶವಾಗಿರುವುದರಿಂದ ಇದು ಬಹಳ ಕಠಿಣ ಯುದ್ಧವಾಗಿತ್ತು. ಕಡಿದಾದ ಬೆಟ್ಟಗುಡ್ಡಗಳು ಹಾಗೂ ನೈಸರ್ಗಿಕ ಅಡ್ಡಿಗಳಿಂದಾಗಿ ಅತ್ಯಂತ ಅಪಾಯಕಾರಿ ಯುದ್ಧವೂ ಆಗಿತ್ತು.

ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಯುದ್ಧ: ಭಾರತ-ಪಾಕಿಸ್ತಾನ ನಡುವಿನ ಕಾರ್ಗಿಲ್ ಯುದ್ಧ ಆಧುನಿಕ ಭಾರತದ ಇತಿಹಾಸದಲ್ಲಿ ಮೈಲಿ ಗಲ್ಲು. ಭಾರತ ಇತಿಹಾಸದಲ್ಲಿ ಎಮೆರ್ಜೆಂಟ್ ಬ್ರಾಡ್‌ಕಾಸ್ಟ್ ಜರ್ನಲಿಸಂ ಮೂಲಕಭಾರತದ್ಯಂತ ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಯುದ್ಧ. ಈ ಯುದ್ಧ ಪರಮಾಣು ಬಾಂಬ್‌ಗಳನ್ನು ಹೊಂದಿದ್ದ ಎರಡೂ ದೇಶಗಳಿಗೂ ಪ್ರತಿಷ್ಠೆಯ ಕಣವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!