
ಬೆಂಗಳೂರು(ಸೆ.13): ನಗರದಲ್ಲಿ ಕಾವೇರಿ ಗಲಭೆ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ರಾಜಗೋಪಾಲನಗರ, ಸುಂಕದಕಟ್ಟೆ, ಬ್ಯಾಟರಾಯನಪುರ, ವಿಜಯನಗರ, ಲಗ್ಗೆರೆ, ಪೀಣ್ಯ, ಆರ್ಎಂಸಿ ಯಾರ್ಡ್, ಕೆಂಗೇರಿ,ರಾಜಾಜಿನಗರ, ಮೈಸೂರು ರೋಡ್, ಮಾಗಡಿ ರೋಡ್ ಸೇರಿದಂತೆ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಜಾರಿಗೊಳಿಸಲಾಗಿದೆ.
ಹೆಗ್ಗನಹಳ್ಳಿಯ ಮುಖ್ಯರಸ್ತೆಯಲ್ಲಿ ಪೊಲೀಸ್ ಫೈರಿಂಗ್ನಲ್ಲಿ ಗಾಯಗೊಂಡಿದ್ದ ಉಮೇಶ್(25) ಸಾವನಪ್ಪಿದ್ದ ಹಿನ್ನೆಲೆಯಲ್ಲಿ ನಗರದ ಹಲವು ಕಡೆ ಪೊಲೀಸ್ ಬಿಗಿಭದ್ರತೆ ಜಾರಿಗೊಳಿಸಲಾಗಿದೆ. ಮೃತಪಟ್ಟ ಉಮೇಶ್ ತುಮಕೂರು ಮೂಲದವನಾಗಿದ್ದು, ಒಂದೂವರೆ ವರ್ಷದ ಹೆಣ್ಣುಮಗುವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.