11 ವರ್ಷದ ಪೋರನಿಂದ ಬಿಟೆಕ್, ಎಂಟೆಕ್ ವಿದ್ಯಾರ್ಥಿಗಳಿಗೆ ಪಾಠ

By Web DeskFirst Published Nov 1, 2018, 2:15 PM IST
Highlights

ತೆಲಂಗಾಣದ 11 ವರ್ಷದ  ಪುಟ್ಟ ಪೋರ ತನಗಿಂತಲೂ ದುಪ್ಪಟ್ಟು ವಯಸ್ಸಿನ ವಿದ್ಯಾರ್ಥಿಗಳಿಗೆ ನಿತ್ಯ ಪಾಠ ಹೇಳ್ತಾನೆ. ಬಿ ಟೆಕ್ ಹಾಗೂ ಎಂ ಟೆಕ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾನೆ. 

ಹೈದ್ರಾಬಾದ್ : 11 ವರ್ಷದ ಈ ಬಾಲಕ ಮೊಹಮ್ಮದ್ ಹಸನ್ ಅಲಿ ಬಗ್ಗೆ ಕೇಳಿದ್ರೆ ನೀವು ಅಚ್ಚರಿಗೊಳ್ಳೋದು ಖಂಡಿತಾ. ಈತ ತನಗಿಂತಲೂ ಹಿರಿಯ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಾನೆ. ಅದೂ ಬಿ ಟೆಕ್ ಹಾಗೂ ಎಂ ಟೆಕ್ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಈತ ನಿತ್ಯ ಕೋಚಿಂಗ್ ಕೊಡ್ತಾನೆ.  

ಸದ್ಯ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಲಿ ತನಗಿಂತಲೂ ಹಿರಿಯ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡಲು ಹಸನ್ ಒಂದು ರುಪಾಯಿಯನ್ನೂ ಕೂಡ ಪಡೆದುಕೊಳ್ಳುವುದಿಲ್ಲ. 

ಅಲ್ಲದೇ ಸದ್ಯ ಕೆಲ ವಿದ್ಯಾರ್ಥಿಗಳಿಗಷ್ಟೇ ಪಾಠ ಮಾಡುವ ಈತ 2020ರ ವೇಳೆ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಗುರಿಯನ್ನು ಹೊಂದಿದ್ದಾನೆ. 

ಎಲ್ಲ ವಿದ್ಯಾರ್ಥಿಗಳಂತೆ ನಿತ್ಯ ಶಾಲೆಗೆ ತೆರಳುವ ಆತ ಮನೆಗೆ ಬಂದು ತನ್ನ ಹೋಂ ವರ್ಕ್ ಮುಗಿಸಿ, ಆಟವನ್ನೂ ಮುಗಿಸಿ ಬಳಿಕ ಕೋಚಿಂಗ್ ಸೆಂಟರ್ ಗೆ ತೆರಳಿ ತನಗಿಂತಲೂ ದುಪ್ಪಟ್ಟು ವಯಸ್ಸಿನವರಿಗೆ ಪಾಠ ಹೇಳಿಕೊಡುತ್ತಾನೆ. 

ಕಳೆದ ಒಂದು ವರ್ಷದಿಂದ ತಾನು ಈ ರೀತಿಯಾಗಿ ಪಾಠ ಹೇಳಿಕೊಡುತ್ತಿದ್ದು, ಬೆಳಗ್ಗೆ ಶಾಲೆಗೆ ತೆರಳಿ ಮಧ್ಯಾಹ್ನ  3ಕ್ಕೆ ಮನೆಗೆ ಮರಳುತ್ತೇನೆ. ಬಳಿಕ ನನ್ನೆಲ್ಲಾ ಕೆಲಸಗಳನ್ನು ಮುಗಿಸಿ  ಕೋಚಿಂಗ್ ಸೆಂಟರ್ ಗೆ ತೆರಳಿ  ಸಿವಿಲ್, ಮೆಕಾನಿಕಲ್, ಎಲೆಕ್ಟ್ರಿಕಲ್ ಇಂನಿಯರಿಂಗ್ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುತ್ತೇನೆ ಎಂದು ಹೇಳುತ್ತಾನೆ. 

click me!