
ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸ್ಥಾನಗಳಿಗೆ ಅವಿರೋಧವಾಗಿ ಸದಸ್ಯರು ಆಯ್ಕೆಯಾಗಿದ್ದಾರೆ. ಬಿಜೆಪಿಯ ಐವರು, ಕಾಂಗ್ರೆಸ್‌ನ ನಾಲ್ವರು ಮತ್ತು ಜೆಡಿಎಸ್‌ನ ಇಬ್ಬರನ್ನು ಚುನಾವಣಾ ಧಿಕಾರಿ ಯಾಗಿರುವ ವಿಧಾನಸಭೆಯ ಜಂಟಿ ಕಾರ್ಯದರ್ಶಿ ಎಂ.ಎಸ್. ಕುಮಾರಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಬಿಜೆಪಿಯಿಂದ ಕೆ.ಪಿ. ನಂಜುಂಡಿ, ಡಾ.ತೇಜಸ್ವಿನಿ ಗೌಡ, ಎನ್.ರವಿಕುಮಾರ್, ರಘುನಾಥ್‌ರಾವ್ ಮಲ್ಕಾಪುರೆ ಮತ್ತು ಎಸ್.ರುದ್ರೇಗೌಡ, ಕಾಂಗ್ರೆಸ್‌ನಿಂದ ಸಿ.ಎಂ. ಇಬ್ರಾಹಿಂ, ಕೆ. ಗೋವಿಂದರಾಜು, ಹರೀಶ್ ಕುಮಾರ್ ಮತ್ತು ಅರವಿಂದ ಕುಮಾರ್ ಅರಳಿ, ಜೆಡಿಎಸ್‌ನಿಂದ ಬಿ.ಎಂ. ಫಾರೂಕ್, ಎಸ್.ಎಲ್. ಧರ್ಮೇಗೌಡ ಆಯ್ಕೆಯಾದರು. ಅವಿರೋಧವಾಗಿ ಆಯ್ಕೆಯಾದ 11 ಮಂದಿಗೆ ಚುನಾವಣಾಧಿಕಾರಿ ಎಂ.ಎಸ್. ಕುಮಾರ ಸ್ವಾಮಿ ಸೋಮವಾರ ಪ್ರಮಾಣಪತ್ರ ವಿತರಣೆ ಮಾಡಿದರು.
ಜೂ.11ಕ್ಕೆ ವಿಧಾನಪರಿಷತ್ ಚುನಾವಣೆ ನಿಗದಿಯಾಗಿದ್ದು, ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಆದರೆ, ಕಣದಲ್ಲಿರುವ ಯಾವ ಅಭ್ಯರ್ಥಿಯೂ ನಾಮಪತ್ರ ಹಿಂಪಡೆಯದಿರುವ ಕಾರಣ ಚುನಾವಣಾಧಿಕಾರಿಗಳು 11 ಮಂದಿಯನ್ನು ಅವಿರೋಧವಾಗಿ ಆಯ್ಕೆ ಮಾಡಿ ಘೋಷಣೆ ಮಾಡಿದರು.
ಬಳಿಕ ಮಾತನಾಡಿದ ಚುನಾವಣಾಧಿಕಾರಿ ಕುಮಾರಸ್ವಾಮಿ, 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಪ್ರತಿಸ್ಪರ್ಧಿಗಳು ಯಾರೂ ಇಲ್ಲದ ಕಾರಣ 11 ಮಂದಿಯನ್ನು ಅವಿರೋಧವಾಗಿ ಆಯ್ಕೆ ಮಾಡಿ ಘೋಷಣೆ ಮಾಡಲಾಗಿದೆ. ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಯಾರೂ ನಾಮಪತ್ರ ವಾಪಸ್ ಪಡೆದುಕೊಂಡಿಲ್ಲ. ಬಿಜೆಪಿಯ ಐವರು, ಕಾಂಗ್ರೆಸ್ ನಾಲ್ವರು ಮತ್ತು ಜೆಡಿಎಸ್‌ನ ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದರು.
ಕಾಂಗ್ರೆಸ್‌ನ ಸಿ.ಎಂ.ಇಬ್ರಾಹಿಂ ಮಾತನಾಡಿ, ಅವಿರೋಧವಾಗಿ ಆಯ್ಕೆಯಾಗಿದ್ದು ಸಂತೋಷವಾಗಿದೆ. ಸಂಖ್ಯಾಬಲದ ಆಧಾರದಲ್ಲಿ ಎಲ್ಲರೂ ಸುಲಭವಾಗಿ ಚುನಾಯಿತರಾಗಿದ್ದೇವೆ. ಸಂಖ್ಯಾಬಲದಲ್ಲಿ ಏರು ಪೇರಾಗಿದ್ದರೆ ಚುನಾವಣೆ ನಡೆಯುತ್ತಿತ್ತು. ಪಕ್ಷದ ನಿರೀಕ್ಷೆಗೆ ತಕ್ಕ ಕೆಲಸ ಮಾಡುವ ವಿಶ್ವಾಸ ಇದೆ ಎಂದು ಹೇಳಿದರು.
ಮೇಲ್ಮನೆಗೆ ಯಾರಾರಯರು?
ಬಿಜೆಪಿ
ಕೆ.ಪಿ.ನಂಜುಂಡಿ
ಡಾ.ತೇಜಸ್ವಿನಿ ಗೌಡ
ಎನ್.ರವಿಕುಮಾರ್
ರಘುನಾಥ್‌ರಾವ್ ಮಲ್ಕಾಪುರೆ
ಎಸ್.ರುದ್ರೇಗೌಡ
ಕಾಂಗ್ರೆಸ್
ಸಿ.ಎಂ.ಇಬ್ರಾಹಿಂ
ಕೆ.ಗೋವಿಂದರಾಜು
ಹರೀಶ್ ಕುಮಾರ್
ಅರವಿಂದ ಕುಮಾರ್ ಅರಳಿ
ಜೆಡಿಎಸ್
ಬಿ.ಎಂ.ಫಾರೂಕ್
ಎಸ್.ಎಲ್.ಧರ್ಮೇಗೌಡ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.