ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ; 6 ಕಡೆ ದಾಳಿ, 8 ಯೋಧರು, 2 ಪೊಲೀಸರಿಗೆ ಗಂಭೀರ ಗಾಯ

By Suvarna Web DeskFirst Published Jun 14, 2017, 7:18 AM IST
Highlights

ನಿನ್ನೆ ರಾತ್ರಿ ಜಮ್ಮು-ಕಾಶ್ಮೀರದ ಹಲವೆಡೆ ಉಗ್ರರು ಗ್ರೇನೇಡ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಹಲವು ಸಿಆರ್'ಪಿಎಫ್ ಯೋಧರು, ಪೊಲೀಸರು ಗಾಯಗೊಂಡಿದ್ದಾರೆ. ನಾಲ್ಕು ಗಂಟೆ ಅವಧಿಯಲ್ಲಿ ಉಗ್ರರು ಆರು ಕಡೆ ಗ್ರೇನೇಡ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 10ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ.

ಶ್ರೀನಗರ: ನಿನ್ನೆ ರಾತ್ರಿ ಜಮ್ಮು-ಕಾಶ್ಮೀರದ ಹಲವೆಡೆ ಉಗ್ರರು ಗ್ರೇನೇಡ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಹಲವು ಸಿಆರ್'ಪಿಎಫ್ ಯೋಧರು, ಪೊಲೀಸರು ಗಾಯಗೊಂಡಿದ್ದಾರೆ.

ನಾಲ್ಕು ಗಂಟೆ ಅವಧಿಯಲ್ಲಿ ಉಗ್ರರು ಆರು ಕಡೆ ಗ್ರೇನೇಡ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 10ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ.

ಜಮ್ಮು ಕಾಶ್ಮೀರದ ಪುಲ್ವಾಮ ಪ್ರದೇಶದ ಸಿಆರ್'ಪಿಎಫ್ ಸೇನಾ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ 8ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

 ಅನಂತ್ ನಾಗ್ ಪಟ್ಟಣದ ಪೊಲೀಸ್ ಠಾಣೆ ಮೇಲೂ ಉಗ್ರರು ಗ್ರೇನೇಡ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ಪೊಲೀಸರಿಗೆ ಗಂಭೀರ ಗಾಯಗಳಾಗಿದ್ದು, ದಾಳಿ ಬಳಿಕ ಪೊಲೀಸರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಉಗ್ರರು ಕದ್ದೊಯ್ದಿದ್ದಾರೆ. 

ಜಮ್ಮು ಕಾಶ್ಮೀರದ ಅವಂತಿಪುರ, ಟ್ರಾಲ್​, ಶೋಪುರೆ, ಪಹಲ್​ಗಾವ್​ ಪ್ರದೇಶಗಳ ಹಲವೆಡೆ ಉಗ್ರರು ದಾಳಿ ನಡೆಸಿದ್ದಾರೆ. ಒಟ್ಟು ನಾಲ್ಕು ಗಂಟೆಯಲ್ಲಿ ಸುಮಾರು ಆರು ಕಡೆ ದಾಳಿಗಳು ನಡೆದಿದೆ. ಪೊಲೀಸರು ಹಾಗೂ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ಸರಣಿ ದಾಳಿಗಳನ್ನು ನಡೆಸುತ್ತಿರೋ ಹಿನ್ನೆಲೆಯಲ್ಲಿ  ಕಣಿವೆ ರಾಜ್ಯದೆಲ್ಲೆಡೆ ಹೈ ಅಲರ್ಟ್​ ಘೋಷಿಸಲಾಗಿದೆ.

(ಸಾಂದರ್ಭಿಕ ಚಿತ್ರ)

click me!