ಭಾರತವನ್ನು ಮಾರಕ ಪೋಲಿಯೋ ಮುಕ್ತ ಮಾಡಲಾಗಿದೆ ಎಂದು ಘೋಷಣೆ ಮಾಡಿದ್ದು ಹಳೆ ಸುದ್ದಿ. ಆದರೆ ಈ ಸುದ್ದಿ ನಮ್ಮನ್ನು ಒಂದು ಕ್ಷಣ ಬೆಚ್ಚಿ ಬೀಳಿಸುತ್ತದೆ. ನಿಮ್ಮ ಮಕ್ಕಳ ಭವಿಷ್ಯದ ಮೇಲೆ ನೇರವಾಗಿ ಪರಿಣಾಮ ಬೀರುವ ಆ ಶಾಕಿಂಗ್ ಸುದ್ದಿ ಯಾವುದು ಅಂತೀರಾ?
ನವದೆಹಲಿ[ಅ.4] ಪೋಲಿಯೋ ಮುಕ್ತ ದೇಶ ನಿರ್ಮಾಣಕ್ಕಾಗಿ ನೀಡಲಾಗುತ್ತಿದ್ದ ಔಷಧವೇ ವಿಷವಾಗಿದೆಯಾ? ಹೀಗೆ ಒಂದು ಪ್ರಶ್ನೆ ಭಾರತೀಯ ವೈದ್ಯ ಲೋಕ ಕಾಡಲು ಆರಂಭಿಸಿದೆ.
ಘಾಜಿಯಾಬಾದ್ ಮೂಲದ ಖಾಸಗಿ ಔಷಧಿ ತಯಾರಿಕ ಕಂಪನಿ ಬಯೋ ಮೆಡ್ ತಯಾರಿಸಿದ್ದ 1.5 ಲಕ್ಷ ಪೋಲಿಯೋ ಲಸಿಕೆಯ ವೈಯಲ್ಸ್‌ನಲ್ಲಿ (vials) ನಲ್ಲಿ ವೈರಸ್ ಟೈಪ್ 2 ಪತ್ತೆಯಾಗಿದ ನಂತರ ಈ ಲಸಿಕೆಗೆ ನಿಷೇಧ ಹೇರಲಾಗಿದೆ. 1999ರಲ್ಲಿ ಪ್ರಪಂಚ ಪೊಲೀಯೋ ಮುಕ್ತ ಎಂದು ಹೇಳಲಾಗಿತ್ತು. 2016ರ ನಂತರ ಭಾರತದಲ್ಲಿಯೂ ಲಸಿಕೆ ನೀಡುವುದನ್ನು ಬಂದ್ ಮಾಡಲಾಗಿತ್ತು.
undefined
ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶದಲ್ಲಿ ಮಕ್ಕಳಿಗೆ ನೀಡಲಾಗಿರುವ ಪೋಲಿಯೋ ಲಸಿಕೆಯಲ್ಲಿ ಟೈಪ್ 2 ವೈರಸ್ ಪತ್ತೆಯಾಗಿದ್ದು ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜಗತ್ತಿನಲ್ಲೇ ಇಲ್ಲವಾದ, ಎಲ್ಲಿಯೂ ವರದಿಯಾಗದ ಟೈಪ್ 2 ವೈರಸ್ ಕಂಪನಿಗೆ ಎಲ್ಲಿಂದ ಸಿಕ್ಕಿತು ಎಂಬ ಪ್ರಶ್ನೆ ಮೇಲೆ ಸಂಶೋಧನೆಗಳು ಆರಂಭವಾಗಿವೆ.
ಈ ಲಸಿಕೆ ಪಡೆದಿರುವ ಮಕ್ಕಳಿಗೆ ಅಪಾಯ ಉಂಟಾಗದದಿರಲು ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಮಕ್ಕಳಿಗೆ ಟೈಪ್ 1, ಟೈಪ್ 2, ಟೈಪ್ 3 ವಿರುದ್ಧ ರೋಗ ನಿರೋಧಕವನ್ನು ನೀಡಲಾಗುತ್ತಿದೆ. ಒಟ್ಟಿನಲ್ಲಿ ಸಕಲ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರೂ ಜನರಲ್ಲಿ ಮನೆ ಮಾಡಿರುವ ಆತಂಕ ದೂರವಾಗುತ್ತಿಲ್ಲ.