ಭಾರತ ಬಿಜೆಪಿ ಮುಕ್ತವಾಗಬೇಕು: ಚಿದಂಬರಂ!

Published : Jul 28, 2018, 06:43 PM ISTUpdated : Jul 30, 2018, 12:16 PM IST
ಭಾರತ ಬಿಜೆಪಿ ಮುಕ್ತವಾಗಬೇಕು: ಚಿದಂಬರಂ!

ಸಾರಾಂಶ

ಬಿಜೆಪಿ ಮುಕ್ತ ಭಾರತಕ್ಕೆ ಚಿದಂಬರಂ ಕರೆ ಕಾಂಗ್ರೆಸ್ ಪ್ರಶ್ನಾತೀತ ರಾಜಕೀಯ ಪಕ್ಷ ದೇಶವನ್ನು ಬಿಜೆಪಿ ಮುಕ್ತಗೊಳಿಸಲು ಸಲಹೆ ಪಕ್ಷದ ಕಾರ್ಯಕರ್ತರಿಗೆ ಚಿದಂಬರಂ ಕರೆ ತಳಮಟ್ಟದಿಂದ ಪಕ್ಷ ಕಟ್ಟಲು ಸಲಹೆ  

ಬೆಂಗಳೂರು[ಜು.೨೮]: ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಘೋಷಣೆಗೆ ಹೆದರಬೇಡಿ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 

ಒಂದು ವೇಳೆ ಮುಕ್ತ ಭಾರತ ಅಂತ ಇರೋದಾದರೆ ಅದು ಬಿಜೆಪಿ ಮುಕ್ತ ಭಾರತ ಎಂದು ಹೇಳಿರುವ ಚಿದಂಬರಂ,  ಭಾರತದಲ್ಲಿ ಕಾಂಗ್ರೆಸ್ ಪ್ರಶ್ನಾತೀತ ರಾಜಕೀಯ ಪಕ್ಷವಾಗಿದೆ ಎಂದು ಗುಡುಗಿದ್ದಾರೆ. 

ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ಹಲವು ಬದಲಾವಣೆಗಳು ಆಗಿದ್ದು, ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಅಗತ್ಯವಿದೆ ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಪಕ್ಷವನ್ನು ತಳಮಟ್ಟವನ್ನು ಬಲಪಡಿಸುವ ಮೂಲಕ ಸ್ಪರ್ಧಿಸಬೇಕಿದೆ ಎಂದು ಕಾರ್ಯಕರ್ತರಿಗೆ ಚಿದಂಬರಂ ಧೈರ್ಯ ತುಂಬಿದರು. 

ಒಂದು ಕಾಲವಿತ್ತು ಅಂದು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಹಾಗೂ ಇಂದಿರಾಗಾಂಧಿ ಹೆಸರನ್ನು ಹೇಳಿದರೆ ಸಾಕು ಲಕ್ಷಾಂತರ ಮತದಾರರು ಮತಗಟ್ಟೆಗೆ ಬಂದು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತಿದ್ದರು. ಅದೇ ರೀತಿ ಇಂದಿನ ಚುನಾವಣೆ ಬೂತ್ ಮಟ್ಟದ್ದಾಗಿದ್ದು ಅದಕ್ಕಾಗಿಯೇ ಪ್ರತಿ ಬೂತ್ ನಲ್ಲೂ ನಾವು ಇರಬೇಕು. ಪ್ರತಿ ಬೂತ್ ನಲ್ಲೂ ಸಾಕಷ್ಟು ಜನರನ್ನು ಹೊಂದಿರಬೇಕು ಎಂದು ಚಿದಂಬರಂ ಸಲಹೆ ನೀಡಿದರು. 

ಇಂದು ರಾಜಕೀಯದಲ್ಲಿ ಹಲವು ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಪ್ರಾದೇಶಿಕ ಪಕ್ಷಗಳು ಮುಂಚೂಣಿಯಲ್ಲಿರುವುದು ನಿಜವಾದರೂ,  ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮಾತ್ರ ರಾಷ್ಟ್ರೀಯ ಹೆಜ್ಜೆ ಗುರುತನ್ನು ಹೊಂದಿವೆ ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ