ಪುಲ್ವಾಮಾ ದಾಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ ಭಾರತ | ಪಾಕ್ ಉಗ್ರರ ಅಡಗು ತಾಣಗಳ ಮೇಲೆ ಭಾರತೀಯ ಸೇನೆಯ ದಾಳಿ | ಪಾಕ್‌ನ್ನೇ ನಡುಗಿಸಿದ ಭಾರತ
ಬೆಂಗಳೂರು (ಫೆ. 26): ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಉಗ್ರರ ಅಡಗುತಾಣಗಳನ್ನು ನಿರ್ನಾಮ ಮಾಡಿದೆ. ಸುಮಾರು 200-300 ಉಗ್ರರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಭಾರತೀಯ ಸೇನಾ ದಾಳಿಯಿಂದ ಪಾಕ್ ಅಕ್ಷರಶಃ ನಡುಗಿ ಹೋಗಿದೆ. ಉಗ್ರರ ಅಡಗುತಾಣಗಳು, ತರಬೇತಿ ಕೇಂದ್ರಗಳು ನಾಶವಾಗಿದೆ. ಭಾರತೀಯ ಸೇನೆ ತನ್ನ ತಾಕತ್ತನ್ನು ತೋರಿಸಿದೆ. ಭಾರತ ಸಹನೆ ಇರುವ ದೇಶ ನಿಜ. ಆದರೆ ತಿರುಗಿ ನಿಂತರೆ ಪಾಕ್ ನಡುಗಿ ಹೋಗುತ್ತದೆ ಎಂಬುದಕ್ಕೆ ಈ ದಾಳಿಯೇ ಸಾಕ್ಷಿ.
ಭಾರತೀಯ ಸೇನೆಯ ತಾಕತ್ತು, ಶಕ್ತಿ ಬಗ್ಗೆ ಸಾಕಷ್ಟು ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಟ್ರೋಲ್ ಪೇಜ್ ಗಳು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡು ಭಾರತೀಯ ಸೇನೆಗೆ ಶಹಬ್ಬಾಸ್ ಎಂದಿದ್ದಾರೆ.