ಜಂಬೂಸವಾರಿ ದಿನ ರೈಲಲ್ಲಿ 1 ಲಕ್ಷ ಮಂದಿ ಪ್ರಯಾಣ..!

By Kannadaprabha NewsFirst Published Oct 11, 2019, 7:53 AM IST
Highlights

ಜಂಬೂಸವಾರಿ ದಿನ 1 ಲಕ್ಷಕ್ಕೂ ಹೆಚ್ಚು ಜನ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ದಸರಾ ಪ್ರಯುಕ್ತ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಟಿಕೆಟ್ ಕೌಂಟರ್‌ಗಳನ್ನೂ ತೆರೆಯಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೌಲಭ್ಯವನ್ನು ಸದುಪಯೋಗಪಡಿಸಿದ್ದಾರೆ.

ಮೈಸೂರು(ಅ.11): ನಾಡಹಬ್ಬ ದಸರಾ ಜಂಬೂಸವಾರಿಯ ದಿನವಾದ ಮಂಗಳವಾರದಂದು ನಗರದ ರೈಲ್ವೆ ನಿಲ್ದಾಣದಿಂದ ಸುಮಾರು 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುವ ಮೂಲಕ ದಾಖಲೆಯಾಗಿದೆ.

ಪ್ರತಿದಿನ ಸಾಮಾನ್ಯವಾಗಿ 55ರಿಂದ 60 ಸಾವಿರ ಪ್ರಯಾಣಿಕರು ವಿವಿಧೆಡೆಗೆ ಪ್ರಯಾಣಿಸುತ್ತಿದ್ದರು. ಆದರೆ ಈ ಸಂಖ್ಯೆ ಜಂಬೂಸವಾರಿಯ ದಿನ ದ್ವಿಗುಣಗೊಂಡಿತ್ತು. ನೈಋುತ್ಯ ರೈಲ್ವೆ ಮೈಸೂರು ವಿಭಾಗೀಯ ಕಚೇರಿಯು ಈ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ, ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದೆ.

ದಸರೆ ವೇಳೆ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ

ಸಾಮಾನ್ಯ ದಿನಗಳಲ್ಲಿ 7 ಟಿಕೆಟ್‌ ಕೌಂಟರ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಜಂಬೂಸವಾರಿಯ ದಿನ 16 ಟಿಕೆಟ್‌ ಕೌಂಟರ್‌ ತೆರೆಯಲಾಗಿತ್ತು. ಸಾಮಾನ್ಯವಾಗಿ 15 ಮಂದಿ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ನಿಯೋಜಿಸಲಾಗುತ್ತಿತ್ತು. ಆದರೆ ಅಂದು 80 ಮಂದಿಯನ್ನು ನೇಮಿಸಲಾಗಿತ್ತು. ಇಲಾಖೆಯ ಸುಮಾರು 800 ವಾಹನಗಳು ಸಂಚರಿಸಿದವು. 75 ಹೆಚ್ಚುವರಿ ಸಿಸಿಟಿವಿ ಅಳವಡಿಸುವ ಮೂಲಕ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು.

ಹೆಚ್ಚುವರಿ ಪ್ರಯಾಣಿಕರ ಕಾಯುವ ಕೊಠಡಿ ಮತ್ತು ಕ್ಲಾಕ್‌ ರೂಂ ತೆರೆಯಲಾಗಿತ್ತು. ಎಲ್ಲ ಪ್ಯಾಸೆಂಜರ್‌ ರೈಲುಗಳಿಗೆ ಹೆಚ್ಚುವರಿಯಾಗಿ ಎರಡು ಸಾಮಾನ್ಯ ಬೋಗಿಗಳನ್ನು ಅಳವಡಿಸಲಾಗಿತ್ತು.

ಮೈಸೂರು ಪ್ರವಾಸೋದ್ಯಮಕ್ಕೆ ದಸರೆಯೇ ಬ್ರ್ಯಾಂಡ್‌!

ಪ್ರಯಾಣಿಕರು ನಗರ ರೈಲ್ವೆ ನಿಲ್ದಾಣದ ನೂತನ ವಿನ್ಯಾಸಕ್ಕೆ ಮನಸೋತರು. ‘ಐ ಲವ್‌ ಮೈಸೂರು’ ಎಂಬ ಸೆಲ್ಫಿ ಸ್ಪಾಟ್‌ನ ಬಗೆ ಆಕರ್ಷಿತರಾದ ಪ್ರವಾಸಿಗರು ಆ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವಲ್ಲಿ ತಲ್ಲೀನರಾಗಿದ್ದರು ಎಂದು ವಿಭಾಗೀಯ ರೈಲ್ವೆ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

click me!