ಮತ ಎಣಿಕಾ ಕೇಂದ್ರದಲ್ಲೇ ಹೃದಯಾಘಾತ; ಕರ್ತವ್ಯನಿರತ ಮೈಸೂರು ಚುನಾವಣಾ ಅಧಿಕಾರಿ ಸಾವು!

Published : Dec 30, 2020, 05:57 PM ISTUpdated : Dec 30, 2020, 06:01 PM IST
ಮತ ಎಣಿಕಾ ಕೇಂದ್ರದಲ್ಲೇ ಹೃದಯಾಘಾತ; ಕರ್ತವ್ಯನಿರತ ಮೈಸೂರು ಚುನಾವಣಾ ಅಧಿಕಾರಿ ಸಾವು!

ಸಾರಾಂಶ

ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಗೆದ್ದವರ ಸಂಭ್ರಮ ಮನೆ ಮಾಡಿದೆ. ಆದರೆ ಇದರ ನಡುವೆ ಆಘಾತಕಾರಿ ಘಟನೆ ನಡೆದಿದೆ. ಮತ ಎಣಿಕೆ ಮಾಡುತ್ತಿದ್ದ ಚುನಾವಣಾ ಅಧಿಕಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಮೈಸೂರು(ಡಿ.30): ಕರ್ನಾಟಕದಲ್ಲಿ ನಡೆದ ಎರಡು ಹಂತದ ಗ್ರಾಮ ಪಂಚಾಯಿತ್ ಚುನಾವಣೆಗಳ ಫಲಿಶಾಂಶ ಇಂದು(ಡಿ.30)ಕ್ಕೆ ಹೊರಬಿದ್ದಿದೆ. ಆದರೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪುಷ್ಪ ಕಾನ್ವೆಂಟ್ ಮತ ಎಣಿಕಾ ಕೇಂದ್ರದಲ್ಲಿ ಎತ ಎಣಿಕೆ ಮಾಡುತ್ತಿದ್ದ ಚುನಾವಣಾಧಿಕಾರಿ ಹೃಹಯಾಘಾತದಿಂದ ನಿಧನರಾಗಿದ್ದಾರೆ.

ಲೋಕಲ್ ಕದನ: ಅಕ್ಕನ ವಿರುದ್ಧ ಗೆದ್ದ ತಂಗಿ, ಪತ್ರಕರ್ತನಿಗೆ ಭರ್ಜರಿ ಗೆಲುವು!..

52 ವರ್ಷದ ಬೊರೇ ಗೌಡ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಮಾಡುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯೆ ಬೋರೇ ಗೌಡ ಮೃತರಾಗಿದ್ದಾರೆ. 

ಲೋಕೋಪಯೋಗಿ ಇಲಾಖೆ ಎಇಇ ಆಗಿದ್ದ ಬೋರೆಗೌಡ, ಎನ್.ಶೆಟ್ಟಹಳ್ಳಿ ಗ್ರಾ.ಪಂ ಚುನಾವಣಾ ಅಧಿಕಾರಿಯಾಗಿ ನೇಮಕವಾಗಿದ್ದರು. ಬೆಳಗ್ಗೆ ತಕ್ಕ ಸಮಯಕ್ಕೆ ಮತ ಎಣಿಕೆ ಆರಂಭಿಸಿದ್ದ ಬೋರೇ ಗೌಡ ಅತೀ ಉತ್ಸಾಹದಿಂದ ಕೆಲಸದಲ್ಲಿ ಮಗ್ನರಾಗಿದ್ದರು. ಆದರೆ ದಿಢೀರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದೀಗ ಬೋರೇ ಗೌಡ ಕುಟಂಬಸ್ಥರ ದುಃಖ ಮುಗಿಲು ಮುಟ್ಟಿದೆ.
 

PREV
click me!

Recommended Stories

ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!