Bank Loan: ಸಾಲ ಪಡೆಯುವಾಗ ಆತುರ, ಎಲ್ಲರೂ ಮಾಡುವ ಐದು ದೊಡ್ಡ ತಪ್ಪುಗಳು

Published : Oct 24, 2026, 11:10 PM IST
Money

ಸಾರಾಂಶ

ಕನಸುಗಳನ್ನು ಈಡೇರಿಸಿಕೊಳ್ಳಲು ಸಾಲ ಮಾಡುವ ಆತುರದಲ್ಲಿ ಜನರು ಅಗತ್ಯಕ್ಕಿಂತ ಹೆಚ್ಚು ಹಣ ಪಡೆಯುವುದು ಮತ್ತು ದಾಖಲೆಗಳನ್ನು ಓದದಿರುವಂತಹ ತಪ್ಪುಗಳನ್ನು ಮಾಡುತ್ತಾರೆ. ಬಡ್ಡಿದರಗಳನ್ನು ಹೋಲಿಸದೆ ಮತ್ತು ಇಎಂಐ ದಿನಾಂಕವನ್ನು ಸರಿಯಾಗಿ ನಿರ್ಧರಿಸದೆ ಸಾಲ ಪಡೆದರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ.

ಬದುಕಿಗೆ ಒಂದಷ್ಟು ಕನಸುಗಳು. ಇನ್ನೂ ಬೇಕು, ಏನೋ ಬೇಕು ಎಂಬ ಆಸೆ. ಅದನ್ನ ಈಡೇರಿಸಿಕೊಳ್ಳೋಣ ಅಂದ್ರೆ ಕೈಯಲ್ಲಿ ಕಾಸು ಇರಲ್ಲ. ಹೇಗಾದರೂ ಮಾಡಿ ಪಡೆಯಲೇಬೇಕು ಅಂತಾ ಹೊರಟಾಗ.. ಮುಖದ ಮುಂದೆ ಚಿನ್ನದಂಥ ಬಣ್ಣಗಳನ್ನ ಇಟ್ಟು ಬುಡದಿಂದ ತಲೆಯವರೆಗೆ ಹೆರೆಯುವ ಬ್ಯಾಂಕಿಂಗ್‌ ಸ್ಕೀಮ್‌ಗಳು ಕಣ್ಮುಂದೆ ಬರುತ್ತವೆ. ಆಗಿದ್ದು ಆಗಿಯೇ ಹೋಗಲಿ. ಸಾಲ ಮಾಡಿಯಾದರೂ ಸರಿ ತೆಗೆದುಕೊಳ್ಳೋಣ ಅಂತಾ ಲೋನ್‌ ಮಾಡಲು ಹೋಗುತ್ತೇವೆ. ಈ ಲೋನ್‌ ಮಾಡುವ ಆತುರದಲ್ಲಿ ನಾವು ಒಂದಷ್ಟು ತಪ್ಪುಗಳನ್ನ ಮಾಡಿಬಿಡುತ್ತೇವೆ. ಲೋನ್‌ ಮಾಡುವ ಐದು ತಪ್ಪುಗಳು ಇಲ್ಲಿವೆ..

ಅಗತ್ಯಕ್ಕಿಂತ ಹೆಚ್ಚು ಸಾಲ

ಈ ಬ್ಯಾಂಕ್‌ಗಳು, ಕ್ರೆಡಿಟ್‌ ಕಾರ್ಟ್‌ಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳು.. ಜನರಿಗೆ ಅವರ ಅಗತ್ಯಕ್ಕಿಂತ ಹೆಚ್ಚಿನ ಸಾಲ ನೀಡಿ ಅವರಿಂದ ಮತ್ತಷ್ಟು ಹಣವನ್ನು ಪೀಕಿಸುವ ಪ್ಲಾನ್‌ ಮಾಡಿರುತ್ತವೆ. ಸಾಲ ಪಡೆಯುವಾಗ ಇದನ್ನೆಲ್ಲ ಮರೆತು ಸಿಗುತ್ತದೆ ಎಂದಾಗ ಇರಲಿ, ಆಮೇಲೆ ನೋಡಿಕೊಳ್ಳೋಣ ಎಂದು ಲೋನ್‌ ಮಾಡಿ ಬಿಡ್ತೇವೆ. ಇದು ತಪ್ಪು. ಯಾವತ್ತೂ ಹಾಗೆ ಮಾಡಬಾರದು. ಇದು ಮರುಪಾವತಿಗೆ, ಇಎಂಐಗೆ ಭಾರೀ ತೊಂದರೆ ಆಗುತ್ತದೆ. ಮಾಸಿಕ ಆದಾಯದ ಮಿತಿಯೊಳಗೆ ನಮ್ಮ ಸಾಲ ಇರಬೇಕು.

ಯೋಚಿಸದೇ ಇರೋದು

ಹಣ ಅಗತ್ಯ ಇದ್ದಾಗ ಜನರು ಬಹುತೇಕ ಕಡೆಗಳಲ್ಲಿ ಕುರುಡಾಗಿ ಸಾಲ ಮಾಡಿ ಬಿಡುತ್ತೇವೆ. ಜನರು ಸಂಬಳ ಖಾತೆ ಮತ್ತು ತಮಗೆ ತಿಳಿದಿರುವ ಕಂಪನಿಗಳನ್ನ ನಂಬಿರುತ್ತಾರೆ. NBFCಗಳು ಹೆಚ್ಚಿನ ಬಡ್ಡಿಯನ್ನು ವಿಧಿಸುತ್ತವೆ ಎಂಬ ತಪ್ಪು ಕಲ್ಪನೆ ಇರುತ್ತದೆ. ಸಾಲ ತೆಗೆದುಕೊಳ್ಳುವ ಮೊದಲು ಕನಿಷ್ಠ 3 ರಿಂದ 4 ವಿಭಿನ್ನ ಬ್ಯಾಂಕುಗಳು ಮತ್ತು NBFCಗಳ ಬಡ್ಡಿದರಗಳನ್ನು ಹೋಲಿಸಬೇಕು. ಬಡ್ಡಿದರ ಸೇರಿದಂತೆ ಇತರೆ ಫೀಸ್‌ಗಳ ಬಗ್ಗೆಯೂ ತಿಳಿದುಕೊಂಡು ಮುಂದುವರಿಯಬೇಕು.

ದಾಖಲೆಗಳನ್ನ ಓದಬೇಕು

ಯಾವುದೇ ಕಾರಣಕ್ಕೂ ಸಾಲ ಪಡೆಯುವಾಗ ದಾಖಲೆಗಳನ್ನ ಓದೋದನ್ನು ಮರೆಯಬಾರದು. ಬ್ಯಾಂಕು ವಿಧಿಸುವ ನಿಯಮಗಳು, ಷರತ್ತುಗಳನ್ನ ಓದಿಯೇ ಒಪ್ಪಂದಗಳಿಗೆ ಸಹಿ ಮಾಡಬೇಕು.

  • ಬಡ್ಡಿದರ ಸ್ಥಿರವಾಗಿದೆಯೇ? ಇಲ್ಲ ಬದಲಾಗುತ್ತಾ?
  • ನಿಗದಿತ ದಿನಾಂಕದ ಮೊದಲು ಮರುಪಾವತಿ ಮಾಡಿದ್ರೆ ಏನು?
  • ಇಎಂಐ ವಿಳಂಬವಾದರೆ ದಂಡಗಳು ಯಾವುವು?
  • ಈ ಎಲ್ಲಾ ವಿಚಾರಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು
  • ಇಲ್ಲದಿದ್ದರೆ ಜೇಬು ಖಾಲಿ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ

EMI ಮತ್ತು ಮರುಪಾವತಿ ದಿನಾಂಕದಲ್ಲಿ ಆತುರ

  • ಸಾಲದ ಮೊತ್ತದ ಹೊರತಾಗಿ EMI ಮೊತ್ತವು ಸಹ ನಿರ್ಣಾಯಕ
  • ಮಾಸಿಕ ವೆಚ್ಚಗಳು, ಭವಿಷ್ಯದ ಅಗತ್ಯಗಳು ಗಮನದಲ್ಲಿ ಇರಬೇಕು
  • ಆರಾಮವಾಗಿ ನಿಭಾಯಿಸಬಹುದಾದ EMI ಮೊತ್ತವನ್ನು ನಿರ್ಧರಿಸಿ
  • ಮಾಸಿಕ ಸಂಬಳದ 40 ಪ್ರತಿಶತ ಇಎಂಐ ಮೀರದಂತೆ ನೋಡಿಕೊಳ್ಳಬೇಕು
  • EMI ದಿನಾಂಕವನ್ನು ಆಯ್ಕೆಮಾಡುವಾಗ ಜಾಗರೂಕರಾಗಿರಿ
  • 5 ಅಥವಾ 7 ನೇ ತಾರೀಖಿನಂದು EMI ದಿನಾಂಕ ನಿಗದಿಪಡಿಸುವುದು ಉತ್ತಮ
  • ಇದರಿಂದ ನೀವು EMI ಬೌನ್ಸ್ ಮತ್ತು ದಂಡಗಳನ್ನು ತಪ್ಪಿಸಿಕೊಳ್ಳಬಹುದು

PREV
Read more Articles on
click me!

Recommended Stories

ಇಂದಿನ ₹50 ಲಕ್ಷವೇ ಮೇಲೊ, 10 ವರ್ಷದ ನಂತರದ ₹1 ಕೋಟಿ ಮೇಲೊ? ನಿಮಗೆ ಗೊತ್ತಿಲ್ಲದೆ ನಿಮ್ಮ ಹಣ ಕರಗಿಸಲಿದೆ ಹಣದುಬ್ಬರ!
9 to 6 ಕೆಲಸಕ್ಕೆ ಗುಡ್‌ಬೈ ಹೇಳಿದ ಯುವಕ! ಈಗ ಸೋಷಿಯಲ್ ಮೀಡಿಯಾದಿಂದ ತಿಂಗಳಿಗೆ ₹2.5 ಲಕ್ಷ ಆದಾಯ! 'EMI ಚಿಂತೆ ಇನ್ನಿಲ್ಲ'