Tax-free Income Sources: ಈ ರೀತಿ ಹಣ ಗಳಿಸಿದ್ರೆ ಟ್ಯಾಕ್ಸ್ ಕಟ್ಬೇಕಾಗಿಲ್ಲ, ತೆರಿಗೆ ಮುಕ್ತ ಆದಾಯದ ಮೂಲಗಳಿವು

Published : Jun 24, 2025, 03:58 PM ISTUpdated : Jun 24, 2025, 04:02 PM IST
Income Tax Saving

ಸಾರಾಂಶ

ಕೈ ತುಂಬ ಹಣ ಗಳಿಸಿದ್ಮೇಲೆ ತೆರಿಗೆ ಪಾವತಿ ಕಡ್ಡಾಯ. ಹಾಗಂತ ಎಲ್ಲ ಮೂಲಗಳಿಂದ ಬರೋ ಆದಾಯಕ್ಕೆ ನೀವು ಟ್ಯಾಕ್ಸ್ ಕಟ್ಬೇಕಾಗಿಲ್ಲ. ಯಾವೆಲ್ಲ ಆದಾಯ ತೆರಿಗೆ ಮುಕ್ತವಾಗಿದೆ ಗೊತ್ತಾ? 

ಒಬ್ಬ ವ್ಯಕ್ತಿಯ ಸಂಪೂರ್ಣ ಆದಾಯ (income)ದ ಮೇಲೆ ಆದಾಯ ತೆರಿಗೆ (Income Tax) ವಿಧಿಸಲಾಗುತ್ತೆ. ಇದ್ರಲ್ಲಿ ಕೇವಲ ಸಂಬಳ ಮಾತ್ರ ಸೇರೋದಿಲ್ಲ. ನೀವು ಯಾವ ರೀತಿಯಲ್ಲಿ ಹಣ ಸಂಪಾದನೆ ಮಾಡಿದ್ರೂ ತೆರಿಗೆ ಪಾವತಿ ಮಾಡ್ಬೇಕು. ಆದ್ರೆ ಭಾರತದಲ್ಲಿ ಎಲ್ಲ ರೀತಿಯ ಆದಾಯಕ್ಕೆ ನೀವು ತೆರಿಗೆ ಕಟ್ಟಬೇಕಾಗಿಲ್ಲ. ಕೆಲ ಆದಾಯಗಳು ತೆರಿಗೆ ಮುಕ್ತವಾಗಿವೆ. ತೆರಿಗೆ ಪಾವತಿಗೆ ಮುನ್ನ ಯಾವೆಲ್ಲ ಆದಾಯ, ತೆರಿಗೆ ಮುಕ್ತವಾಗಿದೆ ಎಂಬುದನ್ನು ತಿಳಿದುಕೊಳ್ಳಿ.

ಯಾವ ಆದಾಯ ತೆರಿಗೆ ಮುಕ್ತ? :

ಕೃಷಿ ಭೂಮಿಯಿಂದ ಬರುವ ಆದಾಯ : ನೀವು ಕೃಷಿ ಭೂಮಿ ಹೊಂದಿದ್ದು, ಕೃಷಿ ಅಥವಾ ಇತರ ಕೃಷಿ ಚಟುವಟಿಕೆಯಿಂದ ನೀವು ಆದಾಯ ಗಳಿಸಿದ್ದರೆ ಅದಕ್ಕೆ ನೀವು ತೆರಿಗೆ ಪಾವತಿ ಮಾಡ್ಬೇಕಾಗಿಲ್ಲ. ನೀವು ಆ ಕೃಷಿ ಭೂಮಿಯನ್ನು ಬಾಡಿಗೆಗೆ ನೀಡಿದ್ದರೂ ಅದ್ರಿಂದ ಬಂದ ಹಣ ತೆರಿಗೆ ಮುಕ್ತವಾಗಿರುತ್ತದೆ.

ಪಿಎಫ್ (PF) ಖಾತೆ ಹಣ : ಪಿಎಫ್ ಖಾತೆಯಲ್ಲಿ ಠೇವಣಿ ಇಟ್ಟ ಮೊತ್ತ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ವಿನಾಯಿತಿ ಪಡೆದಿದೆ. ಈ ಮೊತ್ತ ನಿಮ್ಮ ಮೂಲ ವೇತನದ ಶೇಕಡಾ 12 ಕ್ಕಿಂತ ಹೆಚ್ಚಿರಬಾರದು. ಕಡಿಮೆ ಇದ್ದಲ್ಲಿ ನೀವು ಆದಾಯ ತೆರಿಗೆ ಪಾವತಿ ಮಾಡ್ಬೇಕಾಗಿಲ್ಲ. ಅದೇ ಹೆಚ್ಚಿದ್ದರೆ, ಉಳಿದ ಮೊತ್ತಕ್ಕೆ ನೀವು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಮದುವೆಯಲ್ಲಿ ಪಡೆದ ಗಿಫ್ಟ್ : ಮದುವೆಯಲ್ಲಿ ಸ್ನೇಹಿತರು ಅಥವಾ ಸಂಬಂಧಿಕರಿಂದ ದುಬಾರಿ ಗಿಫ್ಟ್ ಸಿಕ್ಕಿದ್ರೆ , ನೀವು ಅದಕ್ಕೆ ತೆರಿಗೆ ಪಾವತಿ ಮಾಡ್ಬೇಕಾಗಿಲ್ಲ. ಆದ್ರೆ ತೆರಿಗೆ ಇಲಾಖೆ ಇದಕ್ಕೂ ಷರತ್ತು ವಿಧಿಸುತ್ತದೆ. ನೀವು ಮದುವೆ ಸಮಯದಲ್ಲಿ ಮಾತ್ರ ಈ ಗಿಫ್ಟ್ ಪಡೆದಿರಬೇಕು. ಹಾಗೆಯೇ ಗಿಫ್ಟ್ ಮೊತ್ತ 50,000 ಮೀರಿರಬಾರದು.

ಚಾರಿಟಬಲ್ ಟ್ರಸ್ಟ್ ಅಥವಾ ಆಸ್ಪತ್ರೆಗೆ ದೇಣಿಗೆ : ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 80G ಅಡಿಯಲ್ಲಿ, ಎಲ್ಲಾ ತೆರಿಗೆದಾರರು, ಕಂಪನಿ ಮತ್ತು ಸಂಸ್ಥೆ, ಧಾರ್ಮಿಕ ಸಂಸ್ಥೆಗೆ ದೇಣಿಗೆ ನೀಡುವ ಮೂಲಕ ತೆರಿಗೆ ಉಳಿಸಬಹುದು. ಆದ್ರೆ ಎಲ್ಲ ಕಡೆ ಇದು ಸಾಧ್ಯವಿಲ್ಲ. ಯಾವುದು ತೆರಿಗೆ ಮುಕ್ತ ಎಂಬುದಕ್ಕೆ ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ನಲ್ಲಿ ಮಾಹಿತಿ ಲಭ್ಯವಿದೆ. ಆ ಸಂಸ್ಥೆಗಳು ಅಥವಾ ದತ್ತಿ ಟ್ರಸ್ಟ್ಗಳಿಗೆ ಮಾತ್ರ ದೇಣಿಗೆ ನೀಡಬೇಕಾಗುತ್ತದೆ. ನೀವು ದತ್ತಿ ಸಂಸ್ಥೆಗೆ ದೇಣಿಗೆ ನೀಡಿದ್ರೆ ಸೆಕ್ಷನ್ 80G ಅಡಿಯಲ್ಲಿ ಆ ಮೊತ್ತದ ಮೇಲೆ ತೆರಿಗೆ ಕಡಿತವಾಗುತ್ತದೆ.

ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ರೆ ಈಕ್ವಿಟಿ ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿದ್ರೆ, ಒಂದು ವರ್ಷದ ನಂತ್ರ ಅವುಗಳನ್ನು ಮಾರಾಟ ಮಾಡಿದ್ರೆ 1 ಲಕ್ಷ ರೂಪಾಯಿಗಳವರೆಗಿನ ಲಾಭ ತೆರಿಗೆ ಮುಕ್ತವಾಗಿದೆ.

ಉಳಿತಾಯ ಖಾತೆಯ ಬಡ್ಡಿ : ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಒಂದು ತಿಂಗಳ ಬಡ್ಡಿ 10,000 ರೂಪಾಯಿ ಒಳಗೆ ಬಂದಿದ್ದರೆ ಇದು ತೆರಿಗೆ ಮುಕ್ತವಾಗಿದೆ. ಉಳಿತಾಯ ಖಾತೆಯ ಬಡ್ಡಿ ವರ್ಷಕ್ಕೆ 10,000 ಕ್ಕಿಂತ ಹೆಚ್ಚಿದ್ದರೆ ನೀವು ತೆರಿಗೆ ಪಾವತಿಸಬೇಕು.

ವಿಆರ್ಎಸ್ ನಂತ್ರ ಸಿಕ್ಕ ಹಣ : ಸರ್ಕಾರಿ ನೌಕರರು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಅವಧಿಪೂರ್ವ ನಿವೃತ್ತಿ ಪಡಿತಾರೆ. ವಿಆರ್ಎಸ್ ನಂತ್ರ ಒಂದು ದೊಡ್ಡ ಅವ್ರ ಕೈಗೆ ಸಿಗುತ್ತದೆ. 5 ಲಕ್ಷ ರೂಪಾಯಿಗಳವರೆಗಿನ ಮೊತ್ತ ತೆರಿಗೆ ಮುಕ್ತವಾಗಿದೆ. ಈ ಸೌಲಭ್ಯ ಸರ್ಕಾರಿ ಅಥವಾ ಪಿಎಸ್ಯು ಉದ್ಯೋಗಿಗಳಿಗೆ ಮಾತ್ರ.

ಎಲ್ ಐಸಿ (LIC) ಮೊತ್ತ : ಜೀವ ವಿಮಾ ಪಾಲಿಸಿ ಖರೀದಿಸಿದ್ದು, ಅದನ್ನು ಕ್ಲೈಮ್ ಮಾಡುವ ಸಮಯದಲ್ಲಿ ಅಥವಾ ಅದರ ಮುಕ್ತಾಯದ ಸಮಯದಲ್ಲಿ ಸಿಗುವ ಹಣ ಆದಾಯ ತೆರಿಗೆಯಿಂದ ಮುಕ್ತವಾಗಿರುತ್ತದೆ. ಜೀವ ವಿಮಾ ಪಾಲಿಸಿಯ ವಾರ್ಷಿಕ ಪ್ರೀಮಿಯಂ ಅದರ ವಿಮಾ ಮೊತ್ತದ ಶೇಕಡಾ 10ನ್ನು ಮೀರಬಾರದು.

PREV
Read more Articles on
click me!

Recommended Stories

ಕೇವಲ 1% ಜನರ ಕೈಯಲ್ಲಿ ಭಾರತದ 40% ಸಂಪತ್ತು, ವಿಶ್ವ ಅಸಮಾನತೆ ವರದಿ 2026 ರ ಭಯಾನಕ ಚಿತ್ರ!
YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ