Business ಶುರು ಮಾಡೋಕೆ ಲೋನ್ ಬೇಕಾ? 16 ಸರ್ಕಾರಿ ಯೋಜನೆಗಳು ಒಂದೇ ಪೋರ್ಟಲ್‌ನಲ್ಲಿ! ಅರ್ಜಿ ಸಲ್ಲಿಸುವುದು ಹೇಗೆ?

Published : Sep 06, 2026, 07:15 PM IST
Loan

ಸಾರಾಂಶ

ಸ್ವಂತ ಉದ್ಯಮ ಆರಂಭಿಸಲು ಬಂಡವಾಳ ಮತ್ತು ಸಾಲದ ಗೊಂದಲದಲ್ಲಿರುವವರಿಗೆ ಕೇಂದ್ರ ಸರ್ಕಾರದ 'ಜನ ಸಮರ್ಥ್' ಪೋರ್ಟಲ್ ಒಂದು ಉತ್ತಮ ಪರಿಹಾರವಾಗಿದೆ. ಈ ಡಿಜಿಟಲ್ ವೇದಿಕೆಯು ಕೃಷಿ, ವ್ಯವಹಾರ, ವಸತಿ ಸೇರಿದಂತೆ 16 ಸರ್ಕಾರಿ ಸಾಲ ಯೋಜನೆಗಳನ್ನು ಒಂದೇ ಸೂರಿನಡಿ ತಂದಿದ್ದು, ಬ್ಯಾಂಕ್‌ಗೆ ಅಲೆಯದೆ ಸುಲಭವಾಗಿ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ.

ಬ್ಯುಸಿನೆಸ್ ಶುರು ಮಾಡೋಕೆ ಲೋನ್ ಬೇಕಾ? 16 ಸರ್ಕಾರಿ ಯೋಜನೆಗಳು ಒಂದೇ ಪೋರ್ಟಲ್‌ನಲ್ಲಿ! ಅರ್ಜಿ ಸಲ್ಲಿಸುವುದು ಹೇಗೆ?

ನಮ್ಮಲ್ಲಿ ಹಲವರಿಗೆ ಸ್ವಂತ ಉದ್ಯಮ ಅಥವಾ ಬ್ಯುಸಿನೆಸ್ ಪ್ರಾರಂಭಿಸಬೇಕೆಂಬ ದೊಡ್ಡ ಕನಸಿರುತ್ತದೆ. ಆದರೆ, ಆರಂಭಿಕ ಬಂಡವಾಳ ಹೂಡುವುದು ಹೇಗೆ ಮತ್ತು ಸಾಲ ಪಡೆಯುವುದು ಎಲ್ಲಿ ಎಂಬ ಗೊಂದಲದಿಂದಾಗಿ ಅನೇಕರ ಕನಸುಗಳು ಕೈಗೂಡುವುದೇ ಇಲ್ಲ. ವಿಶೇಷವಾಗಿ, ಬ್ಯಾಂಕ್‌ಗಳಿಗೆ ಹೋದಾಗ ಅವರು ಕೇಳುವ 'ಗ್ಯಾರಂಟಿ' (ಶ್ಯೂರಿಟಿ) ನೀಡಲು ಸಾಧ್ಯವಾಗದೆ ಸಣ್ಣ ಉದ್ಯಮಿಗಳು ಹಿಂಜರಿಯುತ್ತಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರವು 'ಜನ ಸಮರ್ಥ್' ಎಂಬ ಅತ್ಯುತ್ತಮ ಡಿಜಿಟಲ್ ವೇದಿಕೆಯನ್ನು ಜಾರಿಗೆ ತಂದಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಏನಿದು 'ಜನ ಸಮರ್ಥ್' ಡಿಜಿಟಲ್ ವೇದಿಕೆ?

ಕೇಂದ್ರ ಸರ್ಕಾರದ ವಿವಿಧ ಸಾಲ ಯೋಜನೆಗಳನ್ನು ಒಂದೇ ಸೂರಿನಡಿ ತರಲು 'ಜನ ಸಮರ್ಥ್' ಎಂಬ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳನ್ನು ಉತ್ತೇಜಿಸಲು ರೂಪಿಸಲಾದ ಏಕ-ಗವಾಕ್ಷಿ ಡಿಜಿಟಲ್ ವ್ಯವಸ್ಥೆಯಾಗಿದೆ. ಕೃಷಿ, ವ್ಯವಹಾರ, ವಸತಿ, ಇಂಧನ ಮತ್ತು ಜೀವನೋಪಾಯದಂತಹ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ಸಾಲಗಳನ್ನು ಬ್ಯಾಂಕ್‌ಗೆ ಅಲೆಯದೆ ಈ ವೇದಿಕೆಯ ಮೂಲಕ ಸುಲಭವಾಗಿ ಪಡೆಯಬಹುದು.

ಒಂದೇ ಪೋರ್ಟಲ್‌ನಲ್ಲಿ ಲಭ್ಯವಿರುವ 16 ಪ್ರಮುಖ ಯೋಜನೆಗಳು!

ಈ ಸಿಂಗಲ್ ಪ್ಲಾಟ್‌ಫಾರ್ಮ್ ಮೂಲಕ ನೀವು ಸರ್ಕಾರದ 16 ಪ್ರಮುಖ ಯೋಜನೆಗಳ ಅಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅವುಗಳಲ್ಲಿ ಪ್ರಮುಖವಾದವು!

ಪ್ರಧಾನ ಮಂತ್ರಿ ಮುದ್ರಾ ಯೋಜನೆ (MUDRA Loan)

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP)

ಪಿಎಂ ಸ್ವನಿಧಿ ಯೋಜನೆ (PM SVANidhi)

ಕಿಸಾನ್ ಕ್ರೆಡಿಟ್ ಕಾರ್ಡ್ (KCC)

ಇ-ಕಿಸಾನ್ ಉಪಜ್ ನಿಧಿ ಹಾಗೂ ವಸತಿ ಯೋಜನೆಗಳು

ತುರ್ತು ಸಾಲ ಖಾತರಿ ಯೋಜನೆ ಮತ್ತು ಸೌರ ಮೇಲ್ಛಾವಣಿ (Solar Rooftop) ಯೋಜನೆ

ಅರ್ಜಿ ಸಲ್ಲಿಸುವುದು ಮತ್ತು ಪ್ರಕ್ರಿಯೆ ಹೇಗೆ?

ಈ ಪೋರ್ಟಲ್‌ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನ ಅತ್ಯಂತ ಸರಳವಾಗಿದೆ!

1. ಅರ್ಹತೆ ಪರಿಶೀಲನೆ; ಜನ್ ಸಮರ್ಥ್ ವೆಬ್‌ಸೈಟ್‌ಗೆ ಭೇಟಿ ನೀಡಿ ಕೆಲವೇ ಸರಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ, ನೀವು ಯಾವ ಯೋಜನೆಗೆ ಅರ್ಹರಾಗಿದ್ದೀರಿ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

2. ಸ್ವಯಂಚಾಲಿತ ಮಾಹಿತಿ ಭರ್ತಿ; ಸುಧಾರಿತ ತಂತ್ರಜ್ಞಾನದ ನೆರವಿನಿಂದ ನಿಮ್ಮ ವಿವರಗಳು ಆಟೋಮ್ಯಾಟಿಕ್ ಆಗಿ ಭರ್ತಿಯಾಗುತ್ತವೆ.

3.ಸರ್ಕಾರಿ ದಾಖಲೆಗಳ ಜೋಡಣೆ: ಉದ್ಯಮ್ ನೋಂದಣಿ, ಆಧಾರ್ (UIDAI), ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‌ಟಿ (GST) ದತ್ತಸಂಚಯಗಳೊಂದಿಗೆ ಈ ಪೋರ್ಟಲ್ ಸಂಯೋಜನೆಗೊಂಡಿರುವುದರಿಂದ, ನಿಮ್ಮ ದಾಖಲೆಗಳ ಪರಿಶೀಲನೆ ಕ್ಷಣಾರ್ಧದಲ್ಲಿ ನಡೆಯುತ್ತದೆ.

4. ಆನ್‌ಲೈನ್ ಟ್ರ್ಯಾಕಿಂಗ್; ಬ್ಯಾಂಕ್‌ಗೆ ನೇರವಾಗಿ ಅಲೆಯುವ ಅಗತ್ಯವಿಲ್ಲದೆ, ನಿಮ್ಮ ಅರ್ಜಿಗೆ ಆನ್‌ಲೈನ್‌ನಲ್ಲೇ ಅನುಮೋದನೆ ದೊರೆಯುತ್ತದೆ ಮತ್ತು ಅರ್ಜಿಯ ಸ್ಥಿತಿಯನ್ನು (Application Status) ನೀವೇ ಮೊಬೈಲ್‌ನಲ್ಲಿ ಟ್ರ್ಯಾಕ್ ಮಾಡಬಹುದು.

ಲಕ್ಷಾಂಸತರ ಉದ್ಯಮಿಗಳಿಗೆ ವರದಾನವಾದ ಯೋಜನೆ!

ಜನ ಸಮರ್ಥ್ ವೇದಿಕೆಯು ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದೆ. ಜೂನ್ 1, 2026 ರವರೆಗಿನ ಅಂಕಿ-ಅಂಶಗಳ ಪ್ರಕಾರ, ಈ ಪೋರ್ಟಲ್ ಮೂಲಕ ಸುಮಾರು 54.10 ಲಕ್ಷ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗಿದ್ದು, 3 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಸಾಲವನ್ನು ವಿತರಿಸಲಾಗಿದೆ. ಇದಲ್ಲದೆ, ಬ್ಯಾಂಕುಗಳು ಡಿಜಿಟಲ್ ರೂಪದಲ್ಲೇ 49.55 ಲಕ್ಷ ಫಲಾನುಭವಿಗಳಿಗೆ 2.76 ಲಕ್ಷ ಕೋಟಿ ರೂ. ಸಾಲವನ್ನು ಅನುಮೋದಿಸಿವೆ.

ಸೈಟ್‌ಗೆ ಒಂದು ಸಾರಿ ಭೇಟಿ ನೀಡಿ!

ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳಾ ಉದ್ಯಮಿಗಳು, ರೈತರು ಮತ್ತು ಸಣ್ಣ ಬೀದಿಬದಿ ವ್ಯಾಪಾರಿಗಳಿಗೆ ಈ ಯೋಜನೆ ಅತ್ಯಂತ ನೆರವಾಗಿದೆ. ನೀವೂ ಕೂಡ ಸ್ವಂತ ಉದ್ಯಮ ಆರಂಭಿಸುವ ಕನಸು ಕಂಡಿದ್ದರೆ, ತಕ್ಷಣವೇ 'ಜನ ಸಮರ್ಥ್' ಪೋರ್ಟಲ್‌ಗೆ ಭೇಟಿ ನೀಡಿ ಈ ಸೌಲಭ್ಯದ ಪ್ರಯೋಜನ ಪಡೆಯಬಹುದು.

PREV
Read more Articles on
click me!

Recommended Stories

90 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಕೃಷಿಗೆ ಇಳಿದ ಯುವಕ; 30000 ಹೂಡಿಕೆಯಲ್ಲಿ ಈ ಕೋಟಿಗಳ ಒಡೆಯ
ಮನೆಯಲ್ಲಿ ಎಷ್ಟು ನಗದು ಹಣ ಇಟ್ಟುಕೊಳ್ಳುವುದು ಸೂಕ್ತ? ಅಗತ್ಯಕ್ಕಿಂತ ಹೆಚ್ಚು ಹಣ ಇಟ್ಟರೆ ನಿಮಗೇ ನಷ್ಟ!