ಮಂಡ್ಯದಲ್ಲಿ ಕೆ. ಆರ್. ಪೇಟೆ ಅನರ್ಹ ಶಾಸಕ ನಾರಾಯಣ ಗೌಡ ಭರ್ಜರಿ ಬಾಡೂಟ ನೀಡದ ಬೆನ್ನಲ್ಲೇ ಇದೀಗ ಜೆಡಿಎಸ್ ಸಭೆಯಲ್ಲೂ ಬಾಡೂಟ ಮಾತ್ರವಲ್ಲದೆ ಬಂದವರಿಗೆಲ್ಲ ಭರ್ಜರಿ ಮದ್ಯದ ವ್ಯವಸ್ಥೆಯನ್ನೂ ಮಾಡಲಾಗಿದೆ. ಚಿಕನ್, ಮಟನ್ ಸೇರಿ ಮದ್ಯದ ಊಟ ನೀಡೋ ಮೂಲಕ ಜೆಡಿಎಸ್ ಮತಗಳನ್ನು ಹಿಡಿದಿಡುವ ಪ್ರಯತ್ನ ನಡೆಸಿದೆ.
ಮಂಡ್ಯ(ನ.07): ಕೆ. ಆರ್. ಪೇಟೆ ಅನರ್ಹ ಶಾಸಕ ನಾರಾಯಣ ಗೌಡ ಭರ್ಜರಿ ಬಾಡೂಟ ನೀಡಿದ ಬೆನ್ನಲ್ಲೇ ಜೆಡಿಎಸ್ ಬಾಡೂಟ ಮಾತ್ರವಲ್ಲದೆ ಬಂದವರಿಗೆಲ್ಲ ಭರ್ಜರಿ ಮದ್ಯದ ವ್ಯವಸ್ಥೆಯನ್ನೂ ಮಾಡಿದೆ. ಚಿಕನ್, ಮಟನ್ ಸೇರಿ ಮದ್ಯದ ಊಟ ನೀಡೋ ಮೂಲಕ ಜೆಡಿಎಸ್ ಮತಗಳನ್ನು ಹಿಡಿದಿಡುವ ಪ್ರಯತ್ನ ನಡೆಸಿದೆ.
ಕೆ. ಆರ್. ಪೇಟೆಯಲ್ಲಿ ಬಾಡೂಟದ ಪೈಪೋಟಿ ಶುರುವಾಗಿದ್ದು, ಅನರ್ಹ ಶಾಸಕ ನಾರಾಯಣಗೌಡ ನಂತರ ಇದೀಗ ಜೆಡಿಎಸ್ ಸಭೆಯಲ್ಲೂ ಬಾಡೂಟ ವ್ಯವಸ್ಥೆಯಾಗಿದೆ. ಕಾರ್ಯಕ್ರಮಕ್ಕೆ ಬಂದವರಿಗೆಲ್ಲ ಭರ್ಜರಿ ಬಾಡೂಟ ಉಣಬಡಿಸಲಾಗಿದೆ. ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ನೀತಿ ಮಂಗಲದ ಸಭೆಯಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಬಾಡೂಟ ವ್ಯವಸ್ಥೆ ಮಾಡಲಾಗಿದೆ.
ಬಾಡೂಟದಲ್ಲಿ ಏನೇನು ಸ್ಪೆಷಲ್..?
ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮಕ್ಕೆ ಬಂದವರಿಗಾಗಿ 8 ಕ್ವಿಂಟಲ್ ಮಟನ್, 3 ಕ್ವಿಂಟಲ್ ಚಿಕನ್, 5 ಸಾವಿರ ಮೊಟ್ಟೆ ಜೊತೆಗೆ ರಾಗಿ ಮುದ್ದೆ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಬಾಡೂಟದ ಜೊತೆಗೆ ಮದ್ಯದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಅನರ್ಹ ಶಾಸಕ ನಾರಾಯಣ ಗೌಡರಿಂದ ಭರ್ಜರಿ ಬಾಡೂಟ
ಮುಖಂಡರಿಗೆ ಒಳ್ಳೆಯ ಕಂಪನಿಯ ಮದ್ಯ, ಸಾಮಾನ್ಯ ಕಾರ್ಯಕರ್ತರಿಗೆ ಸಾಮಾನ್ಯ ಮದ್ಯ ನೀಡುವ ಮೂಲಕ ಮತಗಳನ್ನ ಬಿಗಿ ಮಾಡಿಕೊಳ್ಳಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ. ಊಟದ ವ್ಯವಸ್ಥೆ ಸ್ಥಳದಲ್ಲೇ ಗೂಡ್ಸ್ ವಾಹನ ನಿಲ್ಲಿಸಿಕೊಂಡು ಮದ್ಯ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಅಲ್ಲೆ ನೀರಿನ ಬಾಟಲಿ ಜೊತೆ ಎಣ್ಣೆ ಮಿಕ್ಸ್ ಮಾಡಿ ಕುಡಿದು ಕಾರ್ಯಕರ್ತರು ಭರ್ಜರಿ ಬಾಡೂಟ ಸವಿದಿದ್ದಾರೆ.
ಉಪಚುನಾವಣೆಗೆ ಸಿದ್ಧತೆ?: 50 ಸಾವಿರ ಜನರಿಗೆ ಬಾಡೂಟ ಹಾಕಿಸಿದ ಬೈರತಿ ಬಸವರಾಜ್!