
ಮಂಡ್ಯ [ಅ.23]: ರಾಜ್ಯದಲ್ಲಿ ಉಪ ಚುನಾವಣೆ ಸಮೀಪಿಸುತ್ತಿದೆ. ಶೀಘ್ರ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳು, ಪಕ್ಷಗಳಿಂದ ಸಕಲ ಸಿದ್ಧತೆಗಳು ಆರಂಭವಾಗಿದೆ.
ಮಂಡ್ಯದ KR ಪೇಟೆ ಅನರ್ಹ ಶಾಸಕ ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಗವಿಗಂಗಾದರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದಲ್ಲಿ ಬಾಡೂಟ ಹಾಕಿಸಿದ್ದಾರೆ.
ಜೆಡಿಎಸ್ ಶಾಸಕರಾಗಿದ್ದ ನಾರಾಯಣಗೌಡ ಅತೃಪ್ತರಾಗಿ ಅನರ್ಹರಾಗಿದ್ದು ಇದೀಗ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹರಕೆ ಹೆಸರಲ್ಲಿ ಬಾಡೂಟ ಹಾಕಿಸಿದ್ದಾರೆ.
ಬಾಡೂಟ ಹಾಕಿಸಿ ಜನರ ಮನವೊಲಿಕೆಗೆ ಮುಂದಾಗಿದ್ದು, ಮಗಳ ವಿವಾಹದ ವೇಳೆ ಊಟ ಹಾಕಿಸಲಾಗದ ಕಾರಣ ಈಗ ಊಟ ಹಾಕಿಸಿದ್ದಾಗಿ ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅತೃಪ್ತರಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾರಾಯಣ ಗೌಡ ಬಳಿಕ ಅನರ್ಹರಾಗಿದ್ದರು. ಇದೀಗ ಮತ್ತೊಮ್ಮೆ ಕ್ಷೇತ್ರದಲ್ಲಿ ಚುನಾವಣೆ ಸಮೀಪಿಸುತ್ತಿದ್ದು ಕ್ಷೇತ್ರದತ್ತ ಚಿತ್ತ ಹರಿಸಿ ಜನರ ಮನ ಒಲಿಕೆ ಮಾಡುತ್ತಿದ್ದಾರೆ.