ಮಂಡ್ಯದ KR ಪೇಟೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ : ಸುಳಿವು ನೀಡಿದ ಸಿಎಂ

By Web Desk  |  First Published Nov 9, 2019, 3:09 PM IST

ರಾಜ್ಯದಲ್ಲಿ ಉಪ ಚುನಾವಣೆಗೆ ಸಿದ್ಧತೆಗಳು ಆರಂಭವಾಗಿದೆ. ವಿವಿಧ ಪಕ್ಷಗಳು ಚುನಾವಣಾ ತಯಾರಿಯಲ್ಲಿ ತೊಡಗಿದ್ದು, ಇದೀಗ ಮಂಡ್ಯದ ಕೆ ಆರ್ ಪೇಟೆ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಸಿಎಂ ಸುಳಿವು ನೀಡಿದ್ದಾರೆ. 


ಮಂಡ್ಯ (ನ.09): ರಾಜ್ಯದಲ್ಲಿ  15 ಕ್ಷೇತ್ರಗಳಿಗೆ ಉಪ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ವಿವಿಧ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಹಾಗೂ ಚುನಾವಣಾ ತಯಾರಿಗಳೂ ಜೋರಾಗಿದೆ. 

ಇದೇ ವೇಳೆ ನಾರಾಯಣ ಗೌಡ ಅನರ್ಹತೆ ತೆರವಾದ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಎನ್ನುವ ಸುಳಿವೊಂದು ಹೊರಬಿದ್ದಿದೆ. 

Tap to resize

Latest Videos

ಕೆ.ಆರ್.ಪೇಟೆ ಕ್ಷೇತ್ರದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಈ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ನಾರಾಯಣ ಗೌಡ ಓರ್ವ ಸಜ್ಜನ ಹಾಗೂ ಅಪರೂಪದ ರಾಜಕಾರಣಿ. ಮುಂದಿನ ದಿನಗಳಲ್ಲಿ ನಿಮ್ಮ ಆಶೀರ್ವಾದ ಬೇಕು ಎಂದರು. 

ನಾರಾಯಣ ಗೌಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದಾರೆ. ಮುಂದಿನ ದಿನದಲ್ಲಿ ಇಪ್ಪತೈದು ಸಾವಿರ ಜನರನ್ನುನಾರಾಯಣ ಗೌಡ ಜೊತೆಗೆ ಬರುತ್ತೇನೆ ಎಂದು ಪರೋಕ್ಷವಾಗಿ ಅಭ್ಯರ್ಥಿ ಎಂದು ಸುಳಿವು ನೀಡಿದ್ದಾರೆ. 

click me!