ಪತ್ರಕರ್ತ ಲಂಕೇಶ್ ಹೆಸರಿನ ಪಿ ಅಂದರೆ ಪಾಳೇಗಾರ

First Published May 28, 2018, 7:41 PM IST
Highlights

ಪಿ. ಲಂಕೇಶ್ ಎರಡು ದಶಕಗಳ ಕಾಲ ಕನ್ನಡ ಮನಸ್ಸುಗಳನ್ನು ಪ್ರಸ್ತಾವಿಸಿದರು. ಪ್ರಖರ ಚಿಂತನೆ ಮತ್ತು ನಿಷ್ಠುರ ನೋಟದಿಂದಾಗಿ ಸಾಹಿತ್ಯ, ರಾಜಕಾರಣ ಮತ್ತು ಸಾಂಸ್ಕೃತಿಕ ಜಗತ್ತನ್ನು ಆಳಿದವರು. ಅವರ ಆಪ್ತ ಒಡನಾಡಿ, ಜೊತೆಗಾರ, ಲಂಕೇಶ್ ಪತ್ರಿಕೆಯ ಆರಂಭದಲ್ಲಿ ಅವರ ಜೊತೆಗೇ ಇದ್ದ ಎನ್ ಕೆ ಮೋಹನರಾಮ್ ಲಂಕೇಶರ ಕುರಿತು ವಿಸ್ತಾರವಾಗಿ ಬರೆದಿದ್ದಾರೆ. 'ಈ ಮೋಹನರಾಮ್ ಒಬ್ಬ ಜೊತೆಗಿದ್ದರೆ ಇಡೀ ಜಗತ್ತನ್ನೇ ಅಲ್ಲಾಡಿಸಬಲ್ಲೆ..' ಅಂತ ಲಂಕೇಶರು ಬರೆದುಕೊಂಡಿದ್ದರು. ಆ ಅನುಬಂಧದ ಕುರಿತು ಅವರಿಲ್ಲಿ ಕಟು ಮಧುರ ಆಖ್ಯಾನದೊಂದಿಗೆ ದಾಖಲಿಸಿದ್ದಾರೆ. ಅವರ ಪುಸ್ತಕದ ಆಯ್ದ ಭಾಗಗಳು ಇಲ್ಲಿವೆ.

ಲಂಕೇಶರ ಹೆಸರಿನ ಪಿ. ಇನಿಷಿಯಲ್ಸ್ ಪಾಳ್ಯದ ಅಥವಾ  ಪಟೇಲ್ ಅಥವಾ ಪಾಳೇಗಾರ ಎಂಬುದರಿಂದ ಬಂದದ್ದು ಇರಬೇಕು. ಇದನ್ನು ಹೇಳಿದ್ದು ಲಂಕೇಶರೇ. ಈವತ್ತಿಗೂ ಈ ಪಿ. ಅಕ್ಷರ ಲಂಕೇಶರ ಹೆಸರಿನೊಂದಿಗೆ ಸೇರಿಕೊಂಡ ಕಾರಣ ಬಹಿರಂಗವಾಗಿಲ್ಲ ಅವರ ತಂದೆ ನಂದಿಬಸಪ್ಪ ಊರು ಕೊನೆಗವಳ್ಳಿ. ಹೀಗಾಗಿ ಕೆ.ಎನ್. ಇರಬೇಕಿತ್ತು. ಅಥವಾ ಕೆ ಮತ್ತು ಎನ್‌ಗಳಲ್ಲಿ ಒಂದಾಗಿರಬೇಕಿತ್ತು. 

ಪುತ್ರ ವ್ಯಾಮೋಹಿ ಲಂಕೇಶ್

ಲಂಕೇಶ್ ತಮ್ಮ ವೈಯಕ್ತಿಕ ಜೀವನದಲ್ಲಿ ಪಾಳೇಗಾರರೇ. ಪ್ರಶ್ನಾತೀತ ತಾನು ಎಂದು ಅಪಾರವಾಗಿ ನಂಬಿದ್ದ ಅವರನ್ನು ಪ್ರಶ್ನಿಸಿದವರನ್ನು ಪ್ರಹಾರ ಕೊಳ್ಳಪಡಿಸುತ್ತಿದ್ದರು. ತಮಗೆ ಬೇಕಾದವರನ್ನು ಅಟ್ಟಕ್ಕೇರಿಸುತ್ತಿದ್ದರು. ಬೇಡವಾದವರನ್ನು ಚಚ್ಚುತ್ತಿದ್ದರು. ತನ್ನ ನಂಬಿಕೆಯೇ ಆಖೈರು ಎಂಬ ಅವರ ಹಠ ಸಹ ಅವರ ಪಾಳೇಗಾರಿಕೆಯ ಕುರುಹು, ಅವರ ಬಹುತೇಕ ಪ್ರೇಮ ಪ್ರಕರಣಗಳು ಅಪೂರ್ಣವಾಗೇ ಉಳಿದದ್ದು, ಅವುಗಳಿಂದ ಇವರು ಪಡಬಾರದ ಪರಿಪಾಟಲಿಗೆ ಒಳಗಾದದ್ದು ಸಹ ಇವರ ಪಾಳೇಗಾರಿಕೆಯ ಗುಣದಿಂದಾಗೇ. 

ಲೆಕ್ಕಾಚಾರದ ಕವಿಯಾಗಿದ್ದರು ಪಿ.ಲಂಕೇಶ್!

ಬರಹಗಾರನಾಗಿ ಲಂಕೇಶರು ಏನಾಗಿದ್ದರೋ ನಿಜ ಜೀವನದಲ್ಲಿ ಅದಾಗಿರಲಿಲ್ಲ. ಯಾರಲ್ಲೂ ಇರದ ಒಳ ನೋಟ ಅವರಲ್ಲಿದ್ದರೂ, ಒಳ್ಳೆಯ ಪಾಠ. ಮಾಡುವಲ್ಲಿ ಹೆಣಗಾಡುತ್ತಿದ್ದದ್ದಕ್ಕೆ ಕಾರಣ ಅವರ ಇಂಗ್ಲಿಷ್‌ನ ಮಿತಿಗಳು. ಬರವಣಿಗೆಯಲ್ಲಿ ಸುಮಾರಾಗಿ ಪರಿಣಿತಿಯಿದ್ದ ಲಂಕೇಶರು ಕ್ಲಾಸಿಗೆ ಹೋದೊಡನೆ ಇಂಗ್ಲಿಷ್ ಮರೆಯುತ್ತಿದ್ದರು. ಲಂಕೇಶರ ಅತ್ಯಂತ ಪ್ರೀತಿಯ ವಿದ್ಯಾರ್ಥಿಯಾಗಿದ್ದು, ಅವರ ಬಹುತೇಕ ನಾಟಕಗಳಲ್ಲಿ ಅಭಿನಯಿಸಿದ್ದ ನನ್ನ ಹಳೆಯ ಗೆಳೆಯ, ಈಗ ನಿವೃತ್ತ ಬ್ಯಾಂಕ್ ಅಧಿಕಾರಿ ಎಸ್. ನಾಗರಾಜ್ ಹೇಳುತ್ತಿದ್ದದ್ದು, ಅವರು ತರಗತಿಗೆ. ಬರುತ್ತಿದ್ದದ್ದೇ ಹದಿನೈದು ನಿಮಿಷ ಲೇಟಾಗಿ. ಪಾಠ ಮಾಡುತ್ತಿದ್ದದ್ದು 15-20 ನಿಮಿಷ ಮಾತ್ರ. ಅದೂ ಹೇಳುತ್ತಿದ್ದದ್ದೆಲ್ಲವೂ ಅರ್ಧಂಬಂರ್ಧ. ಇಪ್ಪತ್ತು ವರ್ಷ ಅನುಭವದ ನಂತರವೂ ಅವರು ಇಂಗ್ಲಿಷ್‌ನಲ್ಲಿ ನಿರಾಳವಾಗಿ ಪಾಠ ಮಾಡುತ್ತಿರಲಿಲ್ಲ. ಅದನ್ನು ಅವರೇ ಅನೇಕ ಬಾರಿ ಹೇಳಿದ್ದುಂಟು.

ಅಕ್ಷರ ಪ್ರೇಮಿ ಪಿ.ಲಂಕೇಶ್ ಅಂಕಿ ಪ್ರೇಮಿಯಾಗಿದ್ದು!

ಸಹಾಯ ಮಾಡಿದವರ ಮೇಲೆ ದ್ವೇಷ ಸಾಧಿಸಿದ ಪಿ.ಲಂಕೇಶ್

ಲಂಕೇಶರಿಗೆ ಮಾತ್ರರಲ್ಲ, ಹಳ್ಳಿಯಿಂದ ಬಂದ ಪ್ರತಿ ವಿದ್ಯಾರ್ಥಿಯ ಹಣೆಬರಹವೂ ಅದೇ ಆಗಿತ್ತು. ಕಾರಣ, ಆ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಬಿರುಕು ಕೂಡಲಾರದಷ್ಟು ದೊಡ್ಡದು. ಈಗ ಆ ಬಿರುಕು ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಬಟ್ಟೆ-ಬರೆ, ಊಟ-ತಿಂಡಿಗಳಲ್ಲಿ ಕ್ರಮೇಣವಾಗಿ ಹೇಗೂ ನಗರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದು ಹಳ್ಳಿಯ ಹುಡುಗರ ಸಂಕಟವಿರುತ್ತಿದ್ದದ್ದು ಇಂಗ್ಲಿಷ್ ಮತ್ತು ಹುಡುಗಿಯರ ಸ್ನೇಹಗಳಿಸುವುದಲ್ಲಿ. ಆ ಭಾಷೆಯೇ ಹಾಗಿದೆ. ಕನ್ನಡ ನುಡಿಕಟ್ಟಿಗೆ ಅದು ಹೊಂದಿಕೊಳ್ಳುವುದಿಲ್ಲ. ಒಂದು ಸಿದ್ಧ ಕ್ರಮವಿಲ್ಲದ, ನಿರ್ದಿಷ್ಟ ಕಾಗುಣಿತಗಳಿಲ್ಲದ, ಪದ ಪದಕ್ಕೆ ಬೇರೆಯಾಗುವ ಉಚ್ಚಾರಣೆಗಳಿರುವ ಇಂಗ್ಲಿಷನ್ನು, ಇಂಜಿನಿಯರಿಂಗ್, ವೈದ್ಯಕೀಯ, ವಿಜ್ಞಾನದ ವಿದ್ಯಾರ್ಥಿಗಳು ಹೇಗೋ ಸಂಭಾಳಿಸಿಕೊಳ್ಳುತ್ತಾರೆ. ಅಲ್ಲಿರುವುದೆಲ್ಲಾ ಕ್ರಿಯಾಪದವಿಲ್ಲದ ಭಾಷೆ. ಹೆಚ್ಚೆಂದರೆ ಫಾರ್ಮುಲಾಗಳು. ಸಾಹಿತ್ಯದ ಹುಡುಗರದ್ದು ದುರಂತವೇ ಸರಿ. ಬರಿ ಭಾಷೆಯ ಮೇಲೇ ಬೆಳೆಯಬೇಕು, ಬದುಕಬೇಕು.

ಹೀಗೂ ಇದ್ದರು ಪಿ.ಲಂಕೇಶ್: ಆಗಿನ ಕಾಲದ ಐಷಾರಾಮಿ ಕಾರು ಕೊಂಡಿದ್ದ ಕವಿ

ಲಂಕೇಶರ ಈ ಕೀಳಿರಿಮೆ ಅವರನ್ನು ಅಧ್ಯಾಪಕ ವೃತ್ತಿಯ ಕೊನೆಯ ದಿನದವರೆಗೂ ಕಾಡಿತ್ತು. ಕನ್ನಡ ಒಂದಷ್ಟು ಬಲ್ಲ ವಿದ್ಯಾರ್ಥಿಗಳಿಗೆ ಲಂಕೇಶರ ಬರವಣಿಗೆ, ಹೆಗ್ಗಳಿಕೆ ಕನಿಷ್ಠವಾದರೂ ಅರ್ಥವಾಗುತ್ತಿತ್ತು. ಉಳಿದವರಿಗೆ ಲಂಕೇಶರು ಅರ್ಥವಾಗುವ ಸಾಧ್ಯತೆಯಿರಲಿಲ್ಲ. ಶೇಕಡ 70-80ರಷ್ಟು ಇರುತ್ತಿದ್ದದ್ದು, ಇಂಗ್ಲಿಷ್ ವಿಭಾಗದ ವಿದ್ಯಾರ್ಥಿಗಳಲ್ಲಿ ಕನ್ನಡೇತರರೇ. ಲಂಕೇಶರು ಅವರಿಗೆಲ್ಲಾ ನಿಗೂಢವಾಗೇ ಉಳಿಯುತ್ತಿದ್ದರು.

ಕವಿ, ಪತ್ರಕರ್ತ ಪಿ.ಲಂಕೇಶ್‌ರಿಗಿತ್ತು ರೇಸ್ ಹುಚ್ಚು!

click me!