ನಮಗೆ ವಧುಗಳನ್ನು ಹುಡುಕಿಕೊಡಿ : ಕುಮಾರಸ್ವಾಮಿ ಮುಂದೆ ಯುವಕನ ವಿಚಿತ್ರ ಮನವಿ

By Sathish Kumar KHFirst Published Nov 21, 2022, 4:12 PM IST
Highlights

ಕೋಲಾರದಲ್ಲಿ ಒಕ್ಕಲಿಗ ರೈತ ಯುವಕರಿಗೆ ವಧುಗಳ ಕೊರತೆ ಎದುರಾಗಿದ್ದು, ನಮ್ಮ ಜಿಲ್ಲೆಯ ವಧುಗಳು ಬೇರೆ ಜಿಲ್ಲೆಯ ವರಗಳನ್ನು ಮದುವೆಯಾಗುವುದನ್ನು ನಿಷೇಧಿಸಬೇಕು. ನೀವು ಮುಖ್ಯಮಂತ್ರಿ ಆದ ಕೂಡಲೇ ಈ ನಿಯಮ ಜಾರಿಗೆ ತರಬೇಕು. ನಮಗೆ ನೀವೇ ವಧುಗಳನ್ನು ಹುಡುಕಿಕೊಡಬೇಕು ಎಂದು ಕೋಲಾರದ ಒಕ್ವಿಕಲಿಗ ರೈತ ಯುವಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಂದೆ ವಿಚಿತ್ರ ಮನವಿ ಮಾಡಿದ್ದಾನೆ.

ಕೋಲಾರ (ನ.21): ರಾಜಕಾರಣಿಗಳ ಮುಂದೆ ಮತ್ತು ನಮ್ಮನ್ನಾಳುವ ಜನಪ್ರತಿನಿಧಿಗಳ ಮುಂದೆ ನಮಗೊಂದು ಮನೆ ಮಾಡಿಕೊಡಿ, ಕೆಲಸ ಕೊಡಿಸಿ, ಹೊಲಕ್ಕೆ ಬೋರ್ ವೆಲ್‌ ವ್ಯವಸ್ಥೆ ಇತ್ಯಾದಿ ನೆರವು ಕೇಳುವುದು ಸಹಜ. ಆದರೆ, ಇಲ್ಲೊಬ್ಬ ಯುವಕ ಕೋಲಾರದಲ್ಲಿ ಒಕ್ಕಲಿಗ ರೈತ ಯುವಕರಿಗೆ ವಧುಗಳ ಕೊರತೆ ಎದುರಾಗಿದೆ. ನೀವು ಮುಖ್ಯಮಂತ್ರಿ ಆದ ಕೂಡಲೇ ನಮ್ಮ ಜಿಲ್ಲೆಯ ವಧುಗಳು ಬೇರೆ ಜಿಲ್ಲೆಯ ವರಗಳನ್ನು ಮದುವೆಯಾಗುವುದನ್ನು ನಿಷೇಧಿಷಿ ನಿಯಮ ಜಾರಿಗೆ ತರಬೇಕು. ನಮಗೆ ನೀವೇ ವಧುಗಳನ್ನು ಹುಡುಕಿಕೊಡಬೇಕು ಎಂದು ಕೋಲಾರದ ಒಕ್ಕಲಿಗ ರೈತ ಯುವಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ವಿಚಿತ್ರ ಮನವಿ ಮಾಡಿದ್ದಾನೆ.

ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ (Pancharatna yatre) ಕೈಗೊಂಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Kumaraswamy) ಅವರು ಯಾತ್ರೆಯ ವೇಳೆ ಗ್ರಾಮಸ್ಥರು ಮತ್ತು ರೈತರ ಕಷ್ಟಗಳನ್ನು ಆಲಿಸುವ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಜಿಲ್ಲೆಯ ಮುದುವತ್ತಿ (Muduvatti) ಗ್ರಾಮದ ಯುವಕ ಧನಂಜಯ (Dhananjaya)ಒಕ್ಕಲಿಗ ರೈತ ಯುವಕರು ಮದುವೆಯಾಗಲು ವಧುಗಳ ಕೊರತೆ (Scarecity)ಯಾಗಿದೆ ಎಂದು ಪ್ರಸ್ತಾಪ ಮುಂದಿಟ್ಟಿದ್ದಾನೆ. ಒಕ್ಕಲಿಗ ರೈತ ಯುವಕರಿಗೆ ಮದುವೆ ವಯಸ್ಸು (Marriage age) ಮೀರುತ್ತಿದ್ದರೂ ವಧು ದೊರೆಯುತ್ತಿಲ್ಲ. ಹೀಗಾಗಿ, ಬೇರೆ ಜಿಲ್ಲೆಯ ಅನುಕೂಲಸ್ಥರಿಗೆ ವಧುಗಳನ್ನು (Brides) ಕೊಡುವುದಕ್ಕೆ ನಿಷೇಧ ವಿಧಿಸಬೇಕು. ಈ ಮೂಲಕ ನಮ್ಮ ಜಿಲ್ಲೆಯ ಯುವಕರಿಗೆ ವಧುಗಳ ಕೊರತೆ ನೀಗಿಸಬೇಕು. ನೀವು ರಾಜ್ಯದ ಮುಂದಿನ ಸಿಎಂ ಆಗುವುದು ಖಚಿತವಾಗಿದ್ದು, ಜೆಡಿಎಸ್‌ (JDS) ಸರ್ಕಾರದ ಅವಧಿಯಲ್ಲಿ ಈ ನಿಯಮವನ್ನು ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.

ಚುಂಚನಗಿರಿಯಲ್ಲಿ ವಧು-ವರರ ಸಮಾವೇಶ: 250 ವಧುಗಳಿಗೆ, 11,750 ವರರ ನೋಂದಣಿ!

ಹಲವು ಜಿಲ್ಲೆಗಳ ಸಮಸ್ಯೆ: ರಾಜ್ಯದ ಕೋಲಾರ ಮಾತ್ರವಲ್ಲದೇ ಹಳೆಯ ಮೈಸೂರು ಪ್ರಾಂತ್ಯಗಳಾದ ಮಂಡ್ಯ, ಮೈಸೂರು, ಹಾಸನ, ರಾಮನಗರ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯದ (Okkaliga Community) ರೈತ ಯುವಕರಿಗೆ ವಧುಗಳು ಸಿಗುತ್ತಿಲ್ಲ. ಬಹುತೇಕ ವಧುಗಳ ಕುಟುಂಬದವರು ರೈತರಿಗೆ (Farmers) ಹುಡುಗಿಯರನ್ನು ಕೊಟ್ಟು ಮದುವೆ ಮಾಡದೇ ಸರ್ಕಾರಿ ನೌಕರಿ ಇರುವವರು, ಬೆಂಗಳೂರಿನಲ್ಲಿ ಕೆಲಸ ಮಾಡುವವರು ಹಾಗೂ ಬೇರೆ ಜಿಲ್ಲೆಗಳ ಅನುಕೂಲಸ್ಥರಿಗೆ ಕೊಟ್ಟು ಮದುವೆ ಮಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೆಲವು ವೀಡಿಯೋಗಳು (Videos) ಹರಿದಾಡಿದ್ದವು. ಆದರೆ, ಈಗ ಮಾಜಿ ಮುಖ್ಯಮಂತ್ರಿಗೆ ಬೇಡಿಕೆ ಇಟ್ಟಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಕೋಲಾರದಲ್ಲಿ ಟಿಪ್ಪು ವಿವಿ ಸ್ಥಾಪನೆ: ಮಾತು ಕೊಟ್ಟ ಇಬ್ರಾಹಿಂ

ಕಾಂಗ್ರೆಸ್‌, ಬಿಜೆಪಿ ಕೋಮು ಸೃಷ್ಟಿಸಿವೆ: ಕೋಲಾರ ತಾಲೂಕಿನ ಕೊರಗೊಂಡನಹಳ್ಳಿ ಗ್ರಾಮದಲ್ಲಿ ಪಂಚರತ್ನ ಯಾತ್ರೆಯಲ್ಲಿರುವ ಕುಮಾರಸ್ವಾಮಿ ಅವರು ಮಾಧ್ಯಮದೊಂದಿಗೆ ಮಾತನಾಡಿ, ಕುಕ್ಕರ್ ಬಾಂಬ್ (Cooker Bomb) ಸಿಡಿತದಿಂದ ಶೇ.60 ಸುಟ್ಟಗಾಯ (Burnwoond) ಉಂಟಾಗಿ ಯುವಕನ ಸ್ಥಿತಿ ಚಿಂತಾಜನಕ‌ವಾಗಿದೆ. ಕೆಎಸ್‌ಆರ್‍‌ಟಿಸಿ (KSRTC) ಬಸ್‌ನಲ್ಲಿ ಕುಕ್ಕರ್‍‌ ತೆಗೆದುಕೊಂಡು ಹೋಗಿ ನಂತರ, ಆಟೋದಲ್ಲಿ ಹೋಗಿ ಜನನಿಬಿಡ ಪ್ರದೇಶದಲ್ಲಿ ಸಿಡಿಸುವ ಹುನ್ನಾರ ನಡೆಸಿದ್ದಾರೆ. ಮೊದಲೇ ಕರಾವಳಿ ಪ್ರದೇಶ (Coastal region) ಕೋಮುಗಲಭೆಗೆ ಪ್ರಸಿದ್ದವಾಗಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಈ ಕೋಮು ವಾತಾವರಣವನ್ನು ನಿರ್ಮಾಣ ಮಾಡಿವೆ. ಈ ರೀತಿಯ ಚಟುವಟಿಕೆಗಳಿಂದ ಕರಾವಳಿ ಭಾಗದಲ್ಲಿ ವಾಣಿಜ್ಯ ವ್ಯವಹಾರ ಮತ್ತು ಅಭಿವೃದ್ಧಿಗೆ ತೊಂದರೆ ಆಗುತ್ತಿದೆ. ನಮ್ಮ ಜವಾಬ್ದಾರಿ ನಾಡಿನ ಜನತೆಗೆ ಸಂರಕ್ಷಣೆ, ಶಾಂತಿಯ ವಾತಾವರಣ. ಸಮಾಜ ಘಾತುಕ (exponent) ಶಕ್ತಿಯ ಹಿಂದೆ ಯಾರದ್ದೇ ಕೈವಾಡವಿದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
 

click me!