ಕೋಲಾರದಲ್ಲಿ ಬಸವ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ವತಿಯಿಂದ ಸಭೆ ನಡೆಸದೇ ಬಸವ ಜಯಂತಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಕೋಲಾರ(ಮೇ.3): ಜಗಜ್ಯೋತಿ ಬಸವೇಶ್ವರ ಜಯಂತಿಯನ್ನ (Basava Jayanti ) ಜಿಲ್ಲಾಡಳಿತ ವತಿಯಿಂದ ಸರವಾಗಿ ಆಚರಣೆ ಮಾಡಿದ್ರು, ಕೋಲಾರ ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಣೆ ಮಾಡಿದ್ರು ಶಾಸಕ ಶ್ರೀನಿವಾಸಗೌಡ ವೇದಿಕೆ ಕಾರ್ಯಕ್ರಮವನ್ನ ಬಸವೇಶ್ವರ ಸ್ವಾಮಿಗೆ ಪೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದ್ರು, ಕೋಲಾರದಲ್ಲಿ ಬಸವ ಪುತ್ಥಳಿ (basava statue), ಪ್ರಮುಖ ರಸ್ತೆಗೆ ಬಸವಣ್ಣ ಹೆಸರು ಇಡಬೇಕು, ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂದು ವೇದಿಕೆಯಲ್ಲಿದ್ದ ಸಮುದಾಯದ ಮುಖಂಡರು ಮನವಿ ಮಾಡಿದರು.
ಇನ್ನು ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮ ಕ್ಕೆ ಜನರಿಲ್ಲದೆ ಟಿ ಚನ್ನಯ್ಯ ರಂಗಮಂದಿರ ಖಾಲಿ ಖಾಲಿ ಇದ್ದು ಸಮುದಾಯದ ಮುಖಂಡರು ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ದಿಂದ ಕಾರ್ಯಕ್ರಮಕ್ಕೆ ಜನರು ಬಂದಿಲ್ಲ. ಬಸವ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ವತಿಯಿಂದ ಸಭೆ ನಡೆಸದೇ ಬಸವ ಜಯಂತಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಅನ್ನೋ ಆರೋಪ ಸಹ ಕೇಳಿಬಂದಿದ್ದು ಕನ್ನಡ ಮತ್ತು ಸಂಸ್ಕೃತಿ ಉಪನಿರ್ದೇಶಕ ಕೋವಿಡ್ ಇರೋದ್ರಿಂದ ಯಾವುದೇ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲು ಸರ್ಕಾರ ಸೂಚನೆ ನೀಡಿದೆ. ಆ ನಿಟ್ಟಿನಲ್ಲಿ ಬಸವೇಶ್ವರ ಜಯಂತಿಯನ್ನ ಸರಳವಾಗಿ ಆಚರಣೆ ಮಾಡಲಾಗಿದೆ ಎಂದರು.
Vijayapura Basava Jayanti 2022 ಜನ್ಮಸ್ಥಳದಲ್ಲಿ ಸರ್ಕಾರದಿಂದ ಕಾಟಾಚಾರದ ಬಸವ ಜಯಂತಿ!
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಮುದಾಯದ ಮುಖಂಡರು ಎಲ್ಲಾ ಜಯಂತಿಗಳನ್ನ ಅ ಸಮುದಾಯದ ಜನರನ್ನು ಕರೆಸಿ ಸಂಘಟನೆ ಮಾಡಿ ಆದ್ದೂರಿಯಾಗಿ ಆಚರಣೆ ಮಾಡುತ್ತಾರೆ ಅದ್ರೆ ಜಗತ್ತಿಗೆ ನೆಮ್ಮದಿ ಶಾಂತಿಯನ್ನು ಸಾರಿ ಶಾಂತಿ ಮಂತ್ರವನ್ನ ಪಠಿಸಿದ ಜಗಜ್ಯೋತಿ ಬಸವ ಜಯಂತಿ ಮಾಡಲು ಮತ್ತು ಆ ಸಮಾಜದ ದಾರ್ಶನಿಕ ಪಡೆದಂತಹ ಸಮಾಜದ ಮುಖಂಡರು ವಿಫಲರಾಗಿದ್ದಾರೆ, ಬಸವಣ್ಣ ಜಯಂತಿ ಆಚರಣೆಯನ್ನ ನಿರ್ಲಕ್ಣ್ಯದಿಂದ ಆಚರಣೆ ಮಾಡಲು ಜಿಲ್ಲಾಡಳಿತ ಹಾಗೂ ಆ ಸಮುದಾಯದ ನಾಯಕರುಗಳ ಕೊರತೆ, ಸಮಾಜಕ್ಕೆ ಜಯಂತಿ ಆಚರಣೆ ಮಾಡಲು ಅವಕಾಶ ನೀಡಿದಾಗ ಎಲ್ಲಾ ಮುಖಂಡರು ಸೇರಿ ಜಯಂತಿಯನ್ನ ಆಚರಣೆ ಮಾಡುವ ಬಗ್ಗೆ ಸಭೆ ಸೇರಿ ಚರ್ಚಿಸಿ ಜಿಲ್ಲೆಯ ಎಲ್ಲಾ ಜನತೆಯನ್ನ ಸಂಘಟನೆ ಮಾಡಿ ಅದ್ದೂರಿಯಾಗಿ ಜಯಂತಿ ಆಚರಣೆ ಮಾಡಬಹುದಾಗಿತ್ತು.
ಕಲ್ಯಾಣ ಕರ್ನಾಟಕದಲ್ಲಿ ಎರಡನೇ Forensic Science Laboratory ಕೇಂದ್ರ ಸ್ಥಾಪನೆ
ಮುಂದಿನ ದಿನಗಳಲ್ಲಿ ಬಸವ ಜಯಂತಿಯನ್ನು ವಿಜೃಂಬಣೆಯಿಂದ ಅದ್ದೂರಿಯಾಗಿ ಆಚರಣೆ ಮಾಡಬೇಕಾಗುತ್ತದೆ, ಇಲ್ಲವಾದಲ್ಲಿ ಬಸವಣ್ಣನವರ ಅಭಿಮಾನಿಗಳಾಗಿ ರಸ್ತೆಗಿಳಿದು ಪ್ರತಿಭಟನೆ ನಡೆಸುವುದಾಗು ಎಚ್ಚರಿಕೆ ನೀಡಿದ್ರು ಇನ್ನು ಕಾರ್ಯಕ್ರಮದಲ್ಲಿ . ಎಂ.ಎಲ್.ಸಿ ಗಳಾದ ಇಂಚರ ಗೋವಿಂದರಾಜು, ಅನೀಲ್ ಕುಮಾರ್, ಜಿಲ್ಲಾಧಿಕಾರಿ ವೆಂಕಟರಾಜ, ಸೇರಿದಂತೆ ಸಮುದಾಯದ ಮುಖಂಡರು ಬಾಗಿಯಾಗಿದ್ದರು.