ಮಡಿಕೇರಿ: ಹುಲಿ ಹೆಜ್ಜೆ ಗುರುತು ಪತ್ತೆ

By Kannadaprabha NewsFirst Published Oct 27, 2019, 8:36 AM IST
Highlights

ಚಾಮರಾಜನಗರದಲ್ಲಿ ಆಪರೇಷನ್ ಟೈಗರ್ ನಡೆದು ವಾರ ಕಳೆದಿದೆಯಷ್ಟೇ ಇದೀಗ ಮಡಿಕೇರಿಯಲ್ಲೂ ಹುಲಿ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.

ಮಡಿಕೇರಿ(ಅ.27): ಚಾಮರಾಜನಗರದಲ್ಲಿ ಆಪರೇಷನ್ ಟೈಗರ್ ನಡೆದು ವಾರ ಕಳೆದಿದೆಯಷ್ಟೇ ಇದೀಗ ಮಡಿಕೇರಿಯಲ್ಲೂ ಹುಲಿ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.

ಆಹಾರದ ಕೊರತೆಯಿಂದ ಕಾಡು ಪ್ರಾಣಿಗಳು ನಾಡಿಗೆ ದಾಳಿ ಇಡುತ್ತಿದ್ದು, ಕಾಡಾನೆ ಹಾವಳಿಯೂ ಮಿತಿ ಮೀರಿದೆ. ರಾಜ್ಯದ ಹಲವು ಕಡೆ ಚಿರತೆಗಳು ದಾಳಿ ನಡೆಸುತ್ತಿದ್ದಿ, ಕುರಿ, ಮೇಕೆಗಳನ್ನು ಕೊಂದು ಹಾಕುತ್ತಿದೆ.

ಖಾನಾಪುರದಲ್ಲಿ ಕುರಿಗಳ ಮೇಲೆ ಹುಲಿ ದಾಳಿ : ಆತಂಕದಲ್ಲಿ ಜನತೆ

ಗೋಣಿಕೊಪ್ಪ ಬಾಳೆಲೆ ಸಮೀಪದ ನಿಟ್ಟೂರು ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರು ಭಯಗೊಂಡಿದ್ದಾರೆ. ಗೋಣಿಕೊಪ್ಪದ ಮೇಚಂಡ ಸೋಮಯ್ಯ ಎಂಬವರಿಗೆ ಸೇರಿದ ಗದ್ದೆಯಲ್ಲಿ ಶನಿವಾರ ಬೆಳಗ್ಗೆ ಹುಲಿ ಓಡಾಡಿರುವ ಗುರುತು ಪತ್ತೆಯಾಗಿದೆ.

ಇದರಿಂದ ಸ್ಥಳೀಯರು ಭಯಗೊಂಡಿದ್ದಾರೆ. ನಾಗರಹೊಳೆ ಉದ್ಯಾನವನದ ಸಮೀಪವಿರುವ ಗ್ರಾಮವಾಗಿರುವುದರಿಂದ ಹುಲಿ ಮತ್ತೆ ಅರಣ್ಯ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಆಪರೇಷನ್ ಟೈಗರ್ ಬೆನ್ನಲ್ಲೇ ಮತ್ತೊಮ್ಮೆ ಆತಂಕ, ಚಾಮರಾಜನಗರ ಬಳಿ ಚಿರತೆ ಹೆಜ್ಜೆ ಪತ್ತೆ..!

ಜನರು ಹೆಚ್ಚಿನ ಜಾಗೃತೆ ವಹಿಸಬೇಕಾಗಿದ್ದು, ಹೊಲದಲ್ಲಿ, ಗದ್ದೆಗಳಲ್ಲಿ ಕೆಲಸ ಮಾಡುವಾಗಲೂ ಎಚ್ಚರಿಕೆ ವಹಿಸಬೇಕಾಗಿದೆ. ಇನ್ನು ಸಾಕುಪ್ರಾಣಿಗಳನ್ನು ಮೇಯಲು ಗು್ಡಕ್ಕೆ ಕಳುಹಿಸುವಾಗಲೂ ಜಾಗೃತೆ ವಹಿಸುವುದು ಅಗತ್ಯ.

click me!