ಬಾಗಲಕೋಟೆ: ಸಂಜೀವಿನಿ ಕ್ಯಾಂಟೀನ್ ಉದ್ಘಾಟಿಸಿ ತಾವೇ ಹಣ ನೀಡಿ ಚಹಾ ಸವಿದ ಜಿ.ಪಂ ಸಿಇಒ..!

By Girish GoudarFirst Published Feb 7, 2024, 9:28 PM IST
Highlights

ಸಂಜೀವಿನಿ ಅಭಿಯಾನದಡಿ ಸೂಪರ್ ಪಾಸ್ಟ್ ಫುಡ್ ಮೊಬೈಲ್ ಕ್ಯಾಂಟೀನ್ ಆರಂಭಿಸಲಾಗಿದ್ದು, ಇದರಿಂದ ಮಹಿಳೆಯರಿಗೆ ಸ್ವಾವಲಂಭಿ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಅವರು ಯಾವ ಕ್ಷೇತ್ರದಲ್ಲಿ ಪರಿಣಿತರಾಗಿದ್ದಾರೆ ಎಂಬುದನ್ನು ಪರಿಗಣಿಸಿ ಸೂಕ್ತ ತರಬೇತಿ ನೀಡಿ ಆಹಾರ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ಹೇಳಿದ ಜಿ.ಪಂ ಸಿಇಓ ಶಶೀಧರ ಕುರೇರ್ 

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಫೆ.07): ಬಾಗಲಕೋಟೆ ಜಿಲ್ಲಾ ಪಂಚಾಯತ ವತಿಯಿಂದ ಹೊಸದಾಗಿ ಪ್ರಾರಂಭಿಸಲಾದ ಸಂಜೀವಿನಿ ಕ್ಯಾಂಟೀನ್‌ಗೆ ಜಿ.ಪಂ ಸಿಇಓ ಶಶೀಧರ ಕುರೇರ್ ಅವರು ಇಂದು (ಬುಧವಾರ) ಚಾಲನೆ ನೀಡಿ, ಬಳಿಕ ತಾವೇ ಸ್ವತ: ಹಣ ನೀಡಿ  ಚಹಾ ಸೇವಿಸಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿಯಲ್ಲಿ ನಡೆದಿದೆ.  

ಹೌದು, ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿಯಲ್ಲಿ ಲಕ್ಷ್ಮೀ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘದಿಂದ ಗದ್ದನಕೇರಿ ಕ್ರಾಸ್‌ನಲ್ಲಿ ಸಂಜೀವಿನಿ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದ ಅವರು, ಸಂಜೀವಿನಿ ಅಭಿಯಾನದಡಿ ಸೂಪರ್ ಪಾಸ್ಟ್ ಫುಡ್ ಮೊಬೈಲ್ ಕ್ಯಾಂಟೀನ್ ಆರಂಭಿಸಲಾಗಿದ್ದು, ಇದರಿಂದ ಮಹಿಳೆಯರಿಗೆ ಸ್ವಾವಲಂಭಿ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಅವರು ಯಾವ ಕ್ಷೇತ್ರದಲ್ಲಿ ಪರಿಣಿತರಾಗಿದ್ದಾರೆ ಎಂಬುದನ್ನು ಪರಿಗಣಿಸಿ ಸೂಕ್ತ ತರಬೇತಿ ನೀಡಿ ಆಹಾರ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.

ಎಂಟು ವರ್ಷ ಕೆಲಸ ಮಾಡಿದರೂ ಖಾಯಂಗೊಳಿಸದ ಅನುದಾನಿತ ಶಾಲೆ; ಆತ್ಮಹತ್ಯೆಗೆ ಯತ್ನಿಸಿದ ಶಿಕ್ಷಕ

ಪ್ರತಿ ತಾಲೂಕಿಗೊಂದು ಸೂಪರ್ ಮಾರ್ಕೆಟ್ ಚಿಂತನೆ...

ಇನ್ನು ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಸ್ವಾವಲಂಬಿ ಬದುಕಿಗಾಗಿ ಮೊಬೈಲ್ ಕ್ಯಾಂಟೀನ್ ನಡೆಸುವದಲ್ಲದೇ ತಾಲೂಕಿಗೆ ಒಂದು ಸೂಪರ್ ಮಾರ್ಕೆಟ್ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶಶಿಧರ ಕುರೇರ್ ಹೇಳಿದರು. ಇತ್ತ ಪ್ರಾಯೋಗಿಕವಾಗಿ ಈಗಾಗಲೇ ಜಿಲ್ಲಾಡಳಿತ ಭವನದ ಆವರಣದಲ್ಲಿ ಕ್ಯಾಂಟೀನ್ ಪ್ರಾರಂಭಿಸಲಾಗಿದ್ದು, ಇದು ಸ್ತ್ರೀ ಸ್ವ-ಸಹಾಯ ಗುಂಪುಗಳಿಗೆ ಸಹಕಾರಿಯಾಗಲಿದೆ. ಈ ಕಾರ್ಯ ಯಶಸ್ವಿಗೊಂಡರೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ಆಹಾರ ಪದಾರ್ಥ ಉತ್ಪಾದಿಸುವ ಹಾಗೂ ಸ್ವಯಂ ಪ್ರೇರಿತವಾಗಿ ಉತ್ಸಾಹದಿಂದ ಮುಂದೆ ಬರುವ ಸ್ವ-ಸಹಾಯ ಸಂಘದ ಸದಸ್ಯರಿಗೆ ಪ್ರತಿ ತಾಲೂಕಾ ಕೇಂದ್ರ ಗಳಲ್ಲೊಂದು ಸೂಪರ್ ಮಾರ್ಕೆಟ್ ಪ್ರಾರಂಭಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಯಡಹಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ ಮಾಲಾ ಸಂಗಪ್ಪ ನಾಲತ್ವಾಡ, ಉಪಾಧ್ಯಕ್ಷೆ ದ್ರಾಕ್ಷಾಯಿಣಿ ಮಾದರ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ರೇವಡಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಿನ ಎನ್.ಆರ್.ಎಲ್.ಎಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

click me!