ಸ್ನೇಹಿತನ ಜೊತೆ ಮನೆ ಬಿಟ್ಟ ಯುವಕ ಶವವಾಗಿ ಪತ್ತೆ..!

Suvarna News   | Asianet News
Published : Mar 07, 2020, 02:30 PM ISTUpdated : Mar 07, 2020, 02:39 PM IST
ಸ್ನೇಹಿತನ ಜೊತೆ ಮನೆ ಬಿಟ್ಟ ಯುವಕ ಶವವಾಗಿ ಪತ್ತೆ..!

ಸಾರಾಂಶ

ಸ್ನೇಹಿತನ ಜೊತೆ ಮನೆ ಬಿಟ್ಟ ಯುವಕನ ಶವ ನಂಜನಗೂಡು ಕಾಲುವೆಯಲ್ಲಿ ಪತ್ತೆಯಾಗಿದೆ. ನಾಲೆ ಪಕ್ಕ ಬಿಯರ್ ಪಾರ್ಟಿ ಮಾಡುತ್ತಿದ್ದ ಇಬ್ಬರು ಸ್ನೇಹಿತರನ್ನು ಮತ್ತಿಬ್ಬರು ಬಂದು ಸೇರಿಕೊಂಡಿದ್ದರು. ನಂತರದಲ್ಲಿ ಯುವ ನಾಪತ್ತೆಯಾಗಿದ್ದ.  

ಮೈಸೂರು(ಮಾ.07): ಸ್ನೇಹಿತನ ಜೊತೆ ಮನೆ ಬಿಟ್ಟ ಯುವಕನ ಶವ ನಂಜನಗೂಡು ಕಾಲುವೆಯಲ್ಲಿ ಪತ್ತೆಯಾಗಿದೆ. ನಾಲೆ ಪಕ್ಕ ಬಿಯರ್ ಪಾರ್ಟಿ ಮಾಡುತ್ತಿದ್ದ ಇಬ್ಬರು ಸ್ನೇಹಿತರನ್ನು ಮತ್ತಿಬ್ಬರು ಬಂದು ಸೇರಿಕೊಂಡಿದ್ದರು.

ಸ್ನೇಹಿತನ ಜೊತೆ ಮನೆ ಬಿಟ್ಟ ಯುವಕ ಶವವಾಗಿ ಪತ್ತೆಯಾಗಿದ್ದು, ನಾಲೆಯ ತೂಬಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ನಂಜನಗೂಡು ತಾಲೂಕು ಬಿಳಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದ್ದು, ಮನೋಜ್ ಕುಮಾರ್ ಮೃತ ದುರ್ದೈವಿ.

ಪತ್ನಿಯ ಜೊತೆ ಅಕ್ರಮ ಸಂಬಂಧ: ಪ್ರಶ್ನಿಸಿದ ಗಂಡನ ಮೇಲೆ ನಾಯಿ ಛೂ ಬಿಟ್ಟ ಪ್ರಿಯಕರ!

ತಗಡೂರು ಗ್ರಾಮದ ನಿವಾಸಿ ಮನೋಜ್ ಕುಮಾರ್ ಗುರುವಾರ ಸಂಜೆ ಸ್ನೇಹಿತ ವಿಜಯ್ ಕುಮಾರ್ ಜೊತೆ ಬೈಕ್ ನಲ್ಲಿ ತೆರಳಿದ್ದ. ಸೋನಹಳ್ಳಿ ಗ್ರಾಮದ ತಗಡೂರು ರಾಮಚಂದ್ರರಾವ್ ನಾಲೆ ಬಳಿ ಬಿಯರ್ ಕುಡಿಯುತ್ತಿದ್ದ ಸ್ನೇಹಿತರನ್ನು ಇನ್ನಿಬ್ಬರು ಅಪರಿಚಿತರಯ ಬಂದು ಸೇರಕೊಂಡಿದ್ದರು.

ಈ ವೇಳೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ಅಪರಿಚಿತರು ವಿಜಯ್ ಕುಮಾರ್ ಬೈಕನ್ನು ನಾಲೆಗೆ ತಳ್ಳಿದ್ದಾರೆ. ಆ ವೇಳೆ ವಿಜಯ್ ಕುಮಾರ್‌ ಅಲ್ಲಿಂದ ಪರಾರಿಯಾಗಿದ್ದ. ಸ್ವಲ್ಪ‌ ಸಮಯದ ನಂತರ ಹಿಂದಿರುಗಿ ಬಂದಾಗ ಮನೋಜ್ ಕುಮಾರ್ ನಾಪತ್ತೆಯಾಗಿರುವುದು ತಿಳಿದು ಬಂದಿದೆ.

ಮಹಿಳೆಯ ಗುಪ್ತಾಂಗದಲ್ಲಿತ್ತು 8 ಕೋಟಿ ಮೌಲ್ಯದ ವಸ್ತು!

ವಿಜಯ್ ಕುಮಾರ್ ತಕ್ಷಣವೇ ಮನೋಜ್ ಕುಮಾರ್ ಪೋಷಕರಿಗೆ ಸುದ್ದಿ ಮುಟ್ಟಿಸಿದ್ದಾನೆ. ನಾಲೆ ಬಳಿ ಹುಡುಕಾಡಿದಾಗ ಮನೋಜ್ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಮರುದಿನ ಶುಕ್ರವಾರ ಮಾರ್ಚ್ 6 ರಂದು ಹುಡುಕಾಡಿದಾಗ ಮನೋಜ್ ಶವ ಪತ್ತೆಯಾಗಿದೆ.

ಮನೋಜ್ ಕಿವಿ,ಮರ್ಮಾಂಗ ಹಾಗೂ ಹುಬ್ಬುಗಳ ಮೇಲೆ ಗಾಯಗಳಾಗಿವೆ. ಪೋಷಕರು ಕೊಲೆ ಆರೋಪ ದೂರು ದಾಖಲಿಸಿದ್ದಾರೆ. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ