ಕುಡಿಯಲು ಹಣ ಕೊಡದ ತಂದೆಯನ್ನೇ ಕೊಂದುಬಿಟ್ಟ..!

By Kannadaprabha News  |  First Published Jan 19, 2020, 7:48 AM IST

ಮದ್ಯಪಾನಕ್ಕೆ ಹಣ ನೀಡಲು ನಿರಾಕರಿಸಿದ ತಂದೆಯನ್ನು ಮಗನೇ ದೊಣ್ಣೆಯಿಂದ ಹೊಡೆದು ಹತ್ಯೆಗೈದಿರುವ ಘಟನೆ ಗೋಣಿಮರೂರು ಜೇನುಕುರುಬರ ಹಾಡಿಯಲ್ಲಿ ನಡೆದಿದೆ.


ಮಡಿಕೇರಿ(ಜ.19): ಮದ್ಯಪಾನಕ್ಕೆ ಹಣ ನೀಡಲು ನಿರಾಕರಿಸಿದ ತಂದೆಯನ್ನು ಮಗನೇ ದೊಣ್ಣೆಯಿಂದ ಹೊಡೆದು ಹತ್ಯೆಗೈದಿರುವ ಘಟನೆ ಗೋಣಿಮರೂರು ಜೇನುಕುರುಬರ ಹಾಡಿಯಲ್ಲಿ ನಡೆದಿದೆ.

ಸೋಮವಾರಪೇಟೆ ಗೋಣಿಮರೂರು ಹಾಡಿ ನಿವಾಸಿ ಕರಿಯಪ್ಪ (46) ಎಂಬುವರನ್ನು ಅವರ ಪುತ್ರ ಲೋಕೇಶ್‌(25) ಹತ್ಯೆ ಮಾಡಿದ್ದು, ತಾಯಿ ಲೀಲಾ (38) ತೀವ್ರ ಗಾಯಗೊಂಡಿದ್ದಾರೆ.

Tap to resize

Latest Videos

ಫಾಸ್ಟ್ಯಾಗ್‌ ರೀಜಾರ್ಜ್ ಹೆಸರಲ್ಲಿ 50 ಸಾವಿರ ಎಗರಿಸಿದ ಕಳ್ಳ!

ಶುಕ್ರವಾರ ರಾತ್ರಿ ಮದ್ಯಪಾನ ಮಾಡಲು ತಂದೆ ಕರಿಯಪ್ಪ ಅವರಲ್ಲಿ ಲೋಕೇಶ್‌ ಹಣ ಕೇಳಿದ್ದು, ಹಣ ನೀಡಲು ನಿರಾಕರಿಸಿದ್ದರಿಂದ ಮರದ ದೊಣ್ಣೆಯಿಂದ ತಲೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಬಂದ ತಾಯಿ ಲೀಲಾ ಅವರ ಮೇಲೂ ಹಲ್ಲೆ ನಡೆದಿದೆ.

ತಲೆ ಭಾಗಕ್ಕೆ ಗಂಭೀರ ಗಾಯವಾದ ಹಿನ್ನೆಲೆ ಕರಿಯಪ್ಪ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ತಾಯಿ ಲೀಲಾ ಅವರ ಮೇಲೂ ಹಲ್ಲೆ ನಡೆಸಿದ್ದರಿಂದ ಗಂಭೀರ ಗಾಯಗಳುಂಟಾಗಿದ್ದು, ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ಲೈಂಗಿಕ ದೌರ್ಜನ್ಯ ಕೇಸ್ ಹಿಂಪಡೆಯದ್ದಕ್ಕೆ ಹಲ್ಲೆ; ಸಂತ್ರಸ್ತೆ ತಾಯಿ ಸಾವು

ಶನಿವಾರ ಮಧ್ಯಾಹ್ನ ಬಾಣಾವರ ಸಮೀಪ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್‌ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್‌ ನೇತೃತ್ವದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

click me!