ರಾಯಚೂರು: ಅಕ್ರಮ ತಡೆಯಲು ಹೋದ ಅಧಿಕಾರಿಗೆ ಸಿಕ್ಕಿದ್ದು ಸಾವು

By Web Desk  |  First Published Dec 22, 2018, 10:19 PM IST

ಮರಳು ದಂಧೆಕೋರರು ಅಟ್ಟಹಾಸ ಮೆರೆದಿದ್ದು,  ಅಕ್ರಮ ಮರಳುಗಾರಿಕೆಯನ್ನ ತಡೆಯಲು ಬಂದ ಗ್ರಾಮ ಅಧಿಕಾರಿ ಮೇಲೆಯೇ ಲಾರಿ ಹರಿಸಿ ಕೊಲೆ ಮಾಡಿದ್ದಾರೆ.


ರಾಯಚೂರು, [ಡಿ. 22]: ಅಕ್ರಮ ಮರಳುಗಾರಿಕೆಯನ್ನ ತಡೆಯಲು ಮುಂದಾದ ಗ್ರಾಮ ಲೆಕ್ಕಾಧಿಕಾರಿ ಮೇಲೆ ಲಾರಿ ಹರಿಸಿ ಹತ್ಯೆ ಮಾಡಿರುವ ದಾರುಣ ಘಟನೆ ಇಂದು [ಶನಿವಾರ] ಮಾನ್ವಿ ತಾಲೂಕಿನ ಬುದ್ದಿನ್ನಿ ಗ್ರಾಮದಲ್ಲಿ ನಡೆದಿದೆ. 

ತುಂಗಭದ್ರಾ ನದಿಯಿಂದ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಆರೋಪ ಕೇಳಿ ಬಂದಿದ್ದರಿಂದ ಬುದ್ದಿನ್ನಿ ಗ್ರಾಮದಲ್ಲಿ ರಾಯಲ್ಟಿ ತಪಾಸಣೆಗೆ ಹೋಗಿದ್ದರು. ಈ ವೇಳೆ ಮರಳು ದಂಧೆಕೋರರು ಗಾಮ ಲೆಕ್ಕಿಗ ಸಾಹೇಬ್ ಪಟೇಲ್​ರ ಕಾಲುಗಳ ಮೇಲೆ ಲಾರಿ ಹರಿಸಿ, ಲಾರಿ ಬಿಟ್ಟು ಪರಾರಿಯಾಗಿದ್ದಾರೆ.

Tap to resize

Latest Videos

ಕೂಡಲೇ ಸ್ಥಳೀಯರು ಅವರನ್ನು ರಿಮ್ಸ್​​ ಆಸ್ಪತ್ರೆ ಸೇರಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

click me!