ಸುಳ್ಯದ ಯುವಕನಿಗೆ ಹೊಡೆಯಿತು 23 ಕೋಟಿ ರು. ಬಂಪರ್ ಲಾಟರಿ

By Web Desk  |  First Published Oct 4, 2019, 1:59 PM IST

ದಕ್ಷಿಣ ಕನ್ನಡ ಜಿಲ್ಲೆಯ ಯುವಕನೋರ್ವನಿಗೆ ಅಬುದಾಬಿಯಲ್ಲಿ ಬಂಪರ್ ಲಾಟರಿ ಹೊಡೆದಿದೆ. ಬರೋಬ್ಬರಿ 23 ಕೋಟಿ ರು. ಬಹುಮಾನ ಗೆದ್ದಿದ್ದಾರೆ.


ಮಂಗಳೂರು [ಅ.04] :  ಸುಳ್ಯದ ಯುವಕನೋರ್ವನಿಗೆ ಅಬುದಾಬಿಯಲ್ಲಿ ಬಂಪರ್ ಲಾಟರಿ ಹೊಡೆದಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಟ್ಟಿಪಳ್ಳದ ಯುವಕನಿಗೆ ಅದೃಷ್ಟ ಒಲಿದಿದ್ದು 23 ಕೋಟಿ ರು. ಲಾಟರಿ ಹೊಡೆದಿದೆ. 

Tap to resize

Latest Videos

24 ವರ್ಷದ ಮೊಹಮ್ಮದ್ ಫಯಾಜ್ ಅಬುದಾಬಿಯ ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ 12ಮಿನಿಯನ್ ಡಾಲರ್ [23 ಕೋಟಿ ರು.] ಲಾಟರಿ ಹೊಡೆದಿದೆ. ಆನ್ ಲೈನ್ ಮೂಲಕ ಖರೀದಿ ಮಾಡಿದ ಟಿಕೆಟ್ ಮೂಲಕ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಂಬೈನಲ್ಲಿ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಫಯಾಜ್ ಗೆ ಲಾಟರಿ ಹೊಡೆದಿರುವ ವಿಚಾರವನ್ನು  ಸ್ವತಃ ಬಿಗ್ ಟಿಕೆಟ್ ಮುಖ್ಯಸ್ಥ  ರಿಚರ್ಡ್ ಅವರೆ ಕರೆ ಮಾಡಿ ಫಯಾಜ್‌ಗೆ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಫಯಾಜ್ ನನ್ನ ಜೀವನದಲ್ಲಿ ಇದೊಂದು ಅಚ್ಚರಿಯನ್ನು ಇಂಟು ಮಾಡಿದ ಘಟನೆಯಾಗಿದೆ. ನಾನು ಆನ್ ಲೈನ್ ಮೂಲಕ ಟಿಕೆಟ್ ಖರೀದಿ ಮಾಡಿದ್ದೆ. ಒಮ್ಮೆಯೂ ಯುಎಇಗೆ ಭೇಟಿ ನೀಡಿಲ್ಲ. ಆದರೆ ನನಗೆ ಈ ಅದೃಷ್ಟ ಒಲಿದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. 

click me!