ಉದ್ಯಮಿ ಮೊಬೈಲ್, ಸುಂದರಿಯರ ಬಳಿ ಚಾಲಕನ ಚಾಟಿಂಗ್ : ಮುಂದೇನಾಯ್ತು..?

Kannadaprabha News   | Asianet News
Published : Jan 31, 2020, 02:51 PM IST
ಉದ್ಯಮಿ ಮೊಬೈಲ್, ಸುಂದರಿಯರ ಬಳಿ ಚಾಲಕನ ಚಾಟಿಂಗ್ : ಮುಂದೇನಾಯ್ತು..?

ಸಾರಾಂಶ

ಬೇರೊಬ್ಬ ವ್ಯಕ್ತಿಯ ಮೊಬೈಲ್ ನಿಮದ ಸುಂದರ ಯುವತಿಯರಿಗೆ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೋರ್ವನನ್ನು ಅರೆಸ್ಟ್ ಮಾಡಲಾಗಿದೆ. 

ಬೆಂಗಳೂರು [ಜ.31]:  ಉದ್ಯಮಿ ಮೊಬೈಲ್ ನಿಂದ ಸುಂದರ ಯುವತಿಯರಿಗೆ ಅಶ್ಲೀಲ ಮೇಸೆಜ್ ಮಾಡುತ್ತಿದ್ದ ಕ್ಯಾಬ್ ಚಾಲಕನೀಗ ಪೊಲೀಸರ ಅತಿಥಿಯಾಗಿದ್ದಾನೆ. 

ಐ ಮಿಸ್ ಯೂ, ಐ ಲವ್ ಯೂ, ಯಾವಾಗ ಫ್ರೀ ಇರ್ತಿಯಾ...? ಎಂದು ಯುವತಿಯರಿಗೆ ಸಂದೇಶ ಕಳುಹಿಸುತ್ತಿದ್ದ. ಈ ನಿಟ್ಟಿನಲ್ಲಿ  ದಾಖಲಾದ ದೂರನ್ನು ಆಧಾರದಲ್ಲಿ ಚಾಲಕ ಮಿಥುನ್ ಕುಮಾರ್ ಎಂಬಾತನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. 

ಕಳೆದ ಜನವರಿ 16 ರಂದು ಹೆಬ್ಬಾಳ ಕೆಂಪಾಪುರ ಬಳಿ ಉದ್ಯಮಿ ಮತ್ತು ಕ್ಯಾಬ್ ಚಾಲಕನಿಗೆ ಸಣ್ಣ ಆಕ್ಸಿಡೆಂಟ್ ಆಗಿತ್ತು. ಈ ವೇಳೆ ಉದ್ಯಮಿ ಮೊಬೈಲ್ ಕಸಿದುಕೊಂಡು ಚಾಲಕ ಮಿಥುನ್ ಕುಮಾರ್ ಎಸ್ಕೇಪ್ ಆಗಿದ್ದ.  ಅಲ್ಲದೇ ಮೊಬೈಲ್ ಕೇಳಿದ್ದಕ್ಕೆ ಇಂದು ನಾಳೆ ಎಂದು ಹೇಳಿಕೊಂಡು ದಿನ ದೂಡುತ್ತಿದ್ದ.

ಬಾಲಕಿಯ ತೊಡೆಯನ್ನೇ ಸುಟ್ಟ ತಾಯಿ, ಪುಟ್ಟ ಕಂದಮ್ಮನ ಮೇಲೆ ರಾಕ್ಷಸಿ ಕೃತ್ಯ...

ಉದ್ಯಮಿ ಮೊಬೈಲ್ ನಲ್ಲಿ ಸೇವ್ ಆಗಿದ್ದ ಸುಂದರ ಯುವತಿಯರಿಗೆಲ್ಲಾ ಮೇಸೆಜ್ ಮಾಡಿ ಕಿರುಕುಳ ನೀಡುತ್ತಿದ್ದ. ನೊಂದ ಯುವತಿಯರು ಉದ್ಯಮಿಗೆ ಕ್ಲಾಸ್ ತೆಗೆದುಕೊಂಡಿದ್ದು,  ಬಳಿಕ ಎಚ್ಚೆತ್ತಕೊಂಡ ಉದ್ಯಮಿ ದೂರು ದಾಖಲಿಸಿದ್ದರು. ಉದ್ಯಮಿ ನೀಡಿದ ದೂರಿನ ಆಧಾರದಲ್ಲಿ FIR ದಾಖಲಾಗಿದ್ದು, ಬಳಿಕ ಕ್ಯಾಬ್ ಚಾಲಕ ಮಿಥುನ್  ಪತ್ತೆ ಹಚ್ಚಿ ಬಂಧಿಸಲಾಗಿದೆ.

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!