ವಿದ್ಯಾರ್ಥಿಗಳು ಬಾರ್‌ನಲ್ಲಿ ಯೂನಿಫಾರ್ಮ್‌ನಲ್ಲೇ ಕುಡಿದು ಪಾರ್ಟಿ ಮಾಡುತ್ತಿದ್ದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದ್ದು ಲೆಕ್ಚರರ್ ಅಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಿರಾಜಪೇಟೆ (ಫೆ.08): ಬಾರ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರೊಬ್ಬರು ರೆಡ್ ಹ್ಯಾಂಡ್ ಆಗಿ ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ನಗರದಲ್ಲಿ ನಡೆದಿದೆ. ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ಪ್ರತಿಷ್ಠಿತ ಖಾಸಗಿ ಕಾಲೇಜೊಂದರ ಐವರು ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಬಾರ್‌ಗೆ ಹೋಗಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ವಿಷಯ ತಿಳಿದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಬಾರ್‌ಗೆ ತೆರಳಿ ವಿದ್ಯಾರ್ಥಿಗಳನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಬುದ್ಧಿವಾದ ಹೇಳಿ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭ ಜೊತೆಗಿದ್ದ ವಿದ್ಯಾರ್ಥಿಯೋರ್ವ ಅಲ್ಲಿಂದ ಕಾಲ್ಕೀಳಲು ಮುಂದಾಗಿದ್ದಾನೆ. ತಕ್ಷಣವೇ ಆ ವಿದ್ಯಾರ್ಥಿಯನ್ನು ಹಿಡಿದು, ಆತನಿಗೂ ಬುದ್ಧಿವಾದ ಹೇಳಿ ಕಳುಹಿಸಿಕೊಟ್ಟಿದ್ದಾರೆ.
ಮಣಿಪಾಲ್; ಚಾಕು ತೋರಿಸಿ ಕಾಲೇಜು ಸ್ಟುಡೆಂಟ್ಸ್ ದೋಚಿದ್ದ ಶಿವಮೊಗ್ಗದ ಕಳ್ಳರು ಬಲೆಗೆ ...
ವಿದ್ಯಾರ್ಥಿಗಳಿಗೆ ಬಾರ್‌ನಲ್ಲಿ ಮದ್ಯ ಪೂರೈಕೆ ಮಾಡಿದ ಬಾರ್ ಮ್ಯಾನೇಜರ್‌ಗೆ ಕ್ಲಾಸ್ ತೆಗೆದುಕೊಂಡಿರುವ ಕಾಲೇಜಿನ ಪ್ರಾಂಶುಪಾಲರು, ಶಾಲೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಮವಸ್ತ್ರಗಳನ್ನು ನೋಡಿ ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳಿ ಕಾಲೇಜಿಗೆ ಕಳುಹಿಸುವ ಜವಾಬ್ದಾರಿ ತಮಗೂ ಇರುತ್ತದೆ.
ಆದರೆ ಹಣದ ಆಸೆಗೆ ಈ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ನೀವೇ ಮದ್ಯವನ್ನು ನೀಡಿರುವುದು ಸರಿಯಲ್ಲ. ಈ ಕುರಿತು ನಿಮ್ಮ ಬಾರ್‌ನ ಮೇಲೆ ದೂರು ನೀಡುವುದಾಗಿ ಅಕ್ರೋಶ ವ್ಯಕ್ತಪಡಿಸಿದರು.