ಬೀದರ್: ಯುವಕನ ಕತ್ತು ಸೀಳಿದ ಗಾಳಿಪಟ ಹಾರಿಸುವ ದಾರ

Suvarna News   | Asianet News
Published : Jan 16, 2020, 01:13 PM IST
ಬೀದರ್: ಯುವಕನ ಕತ್ತು ಸೀಳಿದ ಗಾಳಿಪಟ ಹಾರಿಸುವ ದಾರ

ಸಾರಾಂಶ

ಇದರಿಂದ ತೀವ್ರವಾಗಿ ಗಾಯಗೊಂಡ‌ ಶೇಖ್ ಇಜಾಜ್ ಶೇಖ ಅಲಿ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಕಲಬುರಗಿ ಎಎಸ್ಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದಾರ ಸೀಳಿದ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಹೊಲಿಗೆ ಬಿದ್ದಿವೆ. 

ಬೀದರ್(ಜ.16): ಸಂಕ್ರಾಂತಿ ಹಬ್ಬದ ನಿಮಿತ್ತ ಗಾಳಿಪಟ ಹಾರಿಸುವ ವೇಳೆ ಪಟದ ದಾರದಿಂದ ಯುವಕನೊಬ್ಬ ಗಾಯಗೊಂಡ ಘಟನೆ ಜಿಲ್ಲೆಯ ಹುಮನಾಬಾದ್‌ ನಗರದಲ್ಲಿ ಇಂದು(ಗುರುವಾರ) ನಡೆದಿದೆ.  

ಶೇಖ್ ಇಜಾಜ್ ಶೇಖ ಅಲಿ ಎಂಬಾತನೇ ಗಾಯಗೊಂಡ ಯುವಕನಾಗಿದ್ದಾನೆ. ಬೈಕ್ ಮೇಲೆ ಹೋಗುತ್ತಿದ್ದ ವೇಳೆ ‌ಶೇಖ್ ಇಜಾಜ್ ಶೇಖ ಅಲಿ ಕತ್ತಿಗೆ ಗಾಳಿ ಪಟ ಹಾರಿಸುವ ದಾರ ಸಿಲುಕಿ ಕತ್ತು ಸೀಳಿದೆ. ಕಂಬ-ತಂತಿಗೆ ಗಾಳಿಪಟದ ದಾರ ಸಿಲುಕಿತ್ತು.  ದಾರ ‌ಶೇಖ್ ಇಜಾಜ್ ಶೇಖ ಅಲಿ ಅವರಿಗೆ ಕಾಣದಿದ್ದರಿಂದ ಬೈಕ್ ಚಲಾಯಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಗಾಳಿ ಪಟ ಹಾರಿಸುವ ದಾರ ‌ಶೇಖ್ ಇಜಾಜ್ ಶೇಖ ಅಲಿ ಅವರ ಕತ್ತು ಸೀಳಿ ಗಾಯಗೊಳಿಸಿದೆ. 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC