Karnataka Election 2023: ಮತ​ದಾ​ನ​ಕ್ಕೆಂದು ಲಂಡ​ನ್‌​​ನಿಂದ ಬೀದ​ರ್‌ಗೆ ಬಂದ ಯುವಕ..!

By Kannadaprabha News  |  First Published May 11, 2023, 1:31 PM IST

ಇದೊಂದು ಪ್ರಜಾ​ಪ್ರ​ಭು​ತ್ವದ ಅತ್ಯು​ನ್ನ​ತ ಗೌರವ ಅಷ್ಟೇ ಅಲ್ಲ ನಮ್ಮನ್ನು ಅತ್ಯು​ತ್ತಮ ಜವಾ​ಬ್ದಾ​ರಿ​ಯುತ ನಾಗ​ರಿ​ಕ​ನ​ನ್ನಾಗಿ ರೂಪಿ​ಸಿ​ಕೊ​ಳ್ಳಲು ಇರುವ ಅವ​ಕಾಶ ಎಂದು ಅಭಿಪ್ರಾಯ ವ್ಯಕ್ತ​ಪ​ಡಿ​ಸಿ​ದ ಆದೀಶ ವಾಲಿ 


ಬೀದ​ರ್‌(ಮೇ.11):  ರಾಜ್ಯ​ದ ವಿಧಾ​ನ​ಸ​ಭೆ​ಗೆ ನಡೆ​ದ ಸಾರ್ವತ್ರಿಕ ಚುನಾ​ವ​ಣೆ​ಯ​ಲ್ಲಿ ಪ್ರಥಮ ಬಾರಿಗೆ ಮತ ಚಲಾ​ವ​ಣೆಯ ಹುಮ್ಮಸ್ಸು, ಸಿಕ್ಕಿ​ರುವ ಹಕ್ಕು ಚಲಾ​ವ​ಣೆಗಾಗಿ ದೂರ​ದ ಲಂಡ​ನ್‌​ನಿಂದ ತಾಯ್ನಾ​ಡಿಗೆ ಬೀದ​ರ್‌ನ ಆದೀಶ ರಜ​ನೀಶ ವಾಲಿ ಬಂದು ಮತ​ ಚ​ಲಾ​ಯಿ​ಸಿ​ದ್ದಾ​ರೆ.

ಲಂಡ​ನ್‌​ನಲ್ಲಿ ಸ್ನಾತ​ಕೋ​ತ್ತರ ಪದವಿ ಅಭ್ಯಾಸ ಮಾಡಿ ಮತ್ತ​ಷ್ಟು ಉನ್ನತ ಶಿಕ್ಷ​ಣ, ಯುವ​ಕರ ಪರ ಸಂಘ​ಟ​ನಾ​ತ್ಮಕ ಕಾರ್ಯ​ಗ​ಳತ್ತ ಹೆಜ್ಜೆ ಇಟ್ಟಿ​ರು​ವ ​ಆದೀಶ ರಜ​ನೀಶ ವಾಲಿ ಬುಧ​ವಾರ ಬೆಳ್ಳಂಬೆ​ಳಗ್ಗೆ ಮತ​ ಚಲಾ​ಯಿಸಿ ರೋಮಾಂಚನ ತಂದಿತು ಎಂದಿ​ದ್ದಾರೆ.

Latest Videos

undefined

KARNATAKA ELECTIONS 2023: ಗುಪ್ತ ಮತದಾನದ ನಿಯಮ ಉಲ್ಲಂಘನೆ: ವೋಟ್‌ ಹಾಕಿದ ವಿಡಿಯೋ, ಫೋಟೋ ವೈರಲ್‌!

ಲಂಡನ್‌ ಯುತ್‌ ಕೌನ್ಸಿಲ್‌ ಸದ​ಸ್ಯರೂ ಆಗಿರುವ ಆದೀಶ ವಾಲಿ ತಮ್ಮ ಮತ​ದಾನ ಕುರಿ​ತಂತೆ ಕನ್ನ​ಡ​ಪ್ರ​ಭಕ್ಕೆ ಮಾತ​ನಾಡಿ, ಇದೊಂದು ಪ್ರಜಾ​ಪ್ರ​ಭು​ತ್ವದ ಅತ್ಯು​ನ್ನ​ತ ಗೌರವ ಅಷ್ಟೇ ಅಲ್ಲ ನಮ್ಮನ್ನು ಅತ್ಯು​ತ್ತಮ ಜವಾ​ಬ್ದಾ​ರಿ​ಯುತ ನಾಗ​ರಿ​ಕ​ನ​ನ್ನಾಗಿ ರೂಪಿ​ಸಿ​ಕೊ​ಳ್ಳಲು ಇರುವ ಅವ​ಕಾಶ ಎಂದು ಅಭಿಪ್ರಾಯ ವ್ಯಕ್ತ​ಪ​ಡಿ​ಸಿ​ದ್ದಾರೆ.

ಯುವ ಪೀಳಿಗೆ ಮತ​ದಾನ ಮಾಡುವ ಮೂಲಕ ಸಮಾಜ ಹಾಗೂ ರಾಜ್ಯದ ಅಭಿ​ವೃ​ದ್ಧಿ​ಗಿ​ರುವ ಅವಕಾ​ಶಗಳ ಕುರಿ​ತಾಗಿ ಧ್ವನಿ​ಯಾ​ಗ​ಬೇಕು. ಅತ್ಯು​ತ್ತಮ ವ್ಯಕ್ತಿ​ಯನ್ನು ಆರಿಸಿ ಕಳಿ​ಸುವ ಮೂಲಕ ಪ್ರಜಾ​ಪ್ರ​ಭು​ತ್ವವನ್ನು ಗಟ್ಟಿ​ಗೊ​ಳಿ​ಸ​ಬೇಕು ಎಂದು ನುಡಿ​ದರು.

130 ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್‌ಗೆ ಬರಲಿದೆ : ಡಾ. ಜಿ. ಪರಮೇಶ್ವರ್‌

ಮತ​ದಾ​ನ​ಕ್ಕೆಂದು ಕಳೆದ ಮೂರ್ನಾಲ್ಕು ದಿನ​ಗಳ ಹಿಂದಷ್ಟೇ ಲಂಡ​ನ್‌​ನಿಂದ ಬೀದ​ರ್‌ಗೆ ಬಂದಿ​ರುವ ಆದೀಶ ಬುಧ​ವಾರ ಮೇ 10ರಂದು ಬೆಳ್ಳಂಬೆ​ಳಗ್ಗೆ 7ಕ್ಕೆ ಕೃಷಿ ಇಲಾ​ಖೆಯ ಕಟ್ಟ​ಡ​ದ ಮತ​ಗ​ಟ್ಟೆ​ಯ​ಲ್ಲಿ ಅಜ್ಜ, ಹಿರಿಯ ಪತ್ರ​ಕ​ರ್ತ​ರಾದ ಶಿವ​ಶ​ರ​ಣಪ್ಪ ವಾಲಿ ಅವ​ರೊಂದಿಗೆ ಮತ​ಗಟ್ಟೆಗೆ ತೆರಳಿ ತಮ್ಮ ಪ್ರಥಮ ಮತ​ದಾನ ಮಾಡಿದ್ದು ಅವ​ರನ್ನು ರೋಮಾಂಚ​ನ​ಗೊ​ಳಿ​ಸಿ​ದೆ.

ಕನ್ನ​ಡ ಧ್ವಜ​ ಎತ್ತಿ ಹಿಡಿದು ಕನ್ನ​ಡಿ​ಗರ ಹಿರಿ​ಮೆ​ಯನ್ನು ಹೆಚ್ಚಿ​ಸಿ​ದ್ದ ಆದೀಶ:

ಇನ್ನು ಆದೀಶ ರಜ​ನೀಶ ವಾಲಿ ಇತ್ತೀ​ಚೆಗೆ ಲಂಡ​ನ್‌​ನಲ್ಲಿ ಸ್ನಾತ​ಕೋ​ತ್ತರ ಪದವಿ ಸ್ವೀಕಾರ ಸಂದ​ರ್ಭ​ದಲ್ಲಿ ಕನ್ನ​ಡ ಧ್ವಜ​ವನ್ನು ಎತ್ತಿ ಹಿಡಿದು ಕನ್ನ​ಡಿ​ಗರ ಹಿರಿ​ಮೆ​ಯನ್ನು ಹೆಚ್ಚಿ​ಸಿ​ದ್ದರ ಘಟನೆ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿ ರಾಜ್ಯದ ಹಿರಿಯ ನಾಯ​ಕ​ರು, ಲಕ್ಷಾಂತರ ಕನ್ನ​ಡಿ​ಗರ ಮೆಚ್ಚುಗೆ ಗಳಿ​ಸಿದ್ದ ಅಷ್ಟೇ ಅಲ್ಲ ಕೇಂದ್ರ ಕನ್ನಡ ಸಾಹಿತ್ಯ ಪರಿ​ಷ​ತ್‌ ಗೌರವ ಸದ​ಸ್ಯತ್ವ ನೀಡುವ ಘೋಷ​ಣೆ​ಯನ್ನೂ ಮಾಡಿ​ತ್ತು ಎಂಬು​ವ​ದನ್ನು ಇಲ್ಲಿ ಸ್ಮರಿ​ಸ​ಬ​ಹು​ದು.

click me!