ಮತಜಾಗೃತಿಗಾಗಿ ಲಂಬಾಣಿ ಭಾಷೆಯಲ್ಲಿಯೂ ಮತದಾನದ ಜಾಗೃತಿ ಕುರಿತು ಬರೆಸಿರುವದು ಕಂಡುಬಂದಿತ್ತು. ಈ ಕೇಂದ್ರದಲ್ಲಿ ಲಂಬಾಣಿ ವೇಷ ತೊಟ್ಟ ಮತದಾರರು ಹೆಚ್ಚಾಗಿ ಆಗಮಿಸಿ ಮತದಾನ ಮಾಡಿರುವುದು ವಿಶೇಷವಾಗಿತ್ತು. ಶತಾಯುಷಿ ಜವಳಬಾಯಿ ತುಳು ನಾಯಕ (104) ಮತಗಟ್ಟೆಗೆ ಬಂದು ಮತದಾನ ಮಾಡಿದರು.
ಬಸವರಾಜ ಎಸ್.ನಂದಿಹಾಳ
ಬಸವನಬಾಗೇವಾಡಿ(ಮೇ.11): ಜಿಲ್ಲಾಡಳಿತ ಚುನಾವಣಾ ಆಯೋಗದ ನಿರ್ದೇಶನದಂತೆ ಬಸವನಬಾಗೇವಾಡಿ ಮತಕ್ಷೇತ್ರದ ಕೂಡಗಿ ತಾಂಡಾದ ಶಂಕರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 109 ಅನ್ನು ಲಂಬಾಣಿ ಜನಾಂಗ ಮಾದರಿಯ ಮತದಾನ ಕೇಂದ್ರವೆಂದು ವಿಶೇಷವಾಗಿ ಸಿದ್ಧಪಡಿಸಿದ ಕ್ರಮ ಫಲ ನೀಡಿದೆ. ಕಳೆದ ಬಾರಿ ಈ ಮತಗಟ್ಟೆಯಲ್ಲಿ ಶೇ 59ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ 78 ರಷ್ಟುಮತದಾನವಾಗಿದ್ದು, ಅಂದಾಜು ಶೇ 19ರಷ್ಟು ಮತದಾನ ಪ್ರಮಾಣ ಹೆಚ್ಚಾಗಿದೆ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಕ್ರಮಕ್ಕೆ ಮತದಾರರಿಂದ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.
ಈ ಕೇಂದ್ರವನ್ನು ಲಂಬಾಣಿ ಸಂಸ್ಕ್ರತಿಯನ್ನು ಬಿಂಬಿಸುವ ರೀತಿಯಲ್ಲಿ ಅಲಂಕೃತಗೊಳಿಸಲಾಗಿತ್ತು. ಮತಜಾಗೃತಿಗಾಗಿ ಲಂಬಾಣಿ ಭಾಷೆಯಲ್ಲಿಯೂ ಮತದಾನದ ಜಾಗೃತಿ ಕುರಿತು ಬರೆಸಿರುವದು ಕಂಡುಬಂದಿತ್ತು. ಈ ಕೇಂದ್ರದಲ್ಲಿ ಲಂಬಾಣಿ ವೇಷ ತೊಟ್ಟ ಮತದಾರರು ಹೆಚ್ಚಾಗಿ ಆಗಮಿಸಿ ಮತದಾನ ಮಾಡಿರುವುದು ವಿಶೇಷವಾಗಿತ್ತು. ಶತಾಯುಷಿ ಜವಳಬಾಯಿ ತುಳು ನಾಯಕ (104) ಮತಗಟ್ಟೆಬಂದು ಮತದಾನ ಮಾಡಿದರು.
KARNATAKA ELECTIONS 2023: ಗುಪ್ತ ಮತದಾನದ ನಿಯಮ ಉಲ್ಲಂಘನೆ: ವೋಟ್ ಹಾಕಿದ ವಿಡಿಯೋ, ಫೋಟೋ ವೈರಲ್!
ಚಾಲುಬಾಯಿ ರಾಠೋಡ ಅವರು ನಾನು ಸೇರಿದಂತೆ ನನ್ನ ಎಲ್ಲ ಪರಿವಾರದವರು ದುಡಿಯಲು ಮಹಾರಾಷ್ಟ್ರಕ್ಕೆ ಹೋಗಿದ್ದೆವು. ಇಂದು ಮತದಾನ ಇರುವುದರಿಂದ ನಾನು ಸೇರಿ ಎಲ್ಲ ಕುಟುಂಬ ಸದಸ್ಯರು ಮಹಾರಾಷ್ಟ್ರದಿಂದ ಬಂದು ಮತದಾನ ಮಾಡಿದ್ದೇವೆ. ನಮ್ಮ ಮತಗಟ್ಟೆಕೇಂದ್ರವನ್ನು ಮದುವೆ ಮಂಟಪದಂತೆ ಅಲಂಕಾರ ಮಾಡಿರುವುದು ಖುಷಿ ತಂದಿತ್ತು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಮತದಾನವು ನೂರರಷ್ಟುಆಗಬೇಕೆಂದು ಮತಕ್ಷೇತ್ರದ ಎಲ್ಲ ಕೇಂದ್ರಗಳನ್ನು ಈ ಸಲದ ಚುನಾವಣೆಯಲ್ಲಿ ವಿವಿಧ ಬಣ್ಣಗಳ ಚಿತ್ತಾರದಿಂದ ಅಲಂಕಾರ ಮಾಡಲಾಗಿದೆ. ಅಲ್ಲದೇ ಕೆಲ ಮತಗಟ್ಟೆಕೇಂದ್ರಗಳನ್ನು ವಿಶೇಷ ಮತಗಟ್ಟೆಕೇಂದ್ರಗಳೆಂದು ಗುರುತಿಸಿ ಅಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಮತದಾರರು ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿರುವುದು ಕಂಡುಬಂದಿತ್ತು ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚಲುವಯ್ಯ ಅವರು ಪತ್ರಿಕೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
Karnataka Election 2023: ಮಸಬಿನಾಳ ಗ್ರಾಮದಲ್ಲಿ ಮತಯಂತ್ರಗಳನ್ನ ಪುಡಿಪುಡಿ ಮಾಡಿ ಧ್ವಂಸ: 23 ಜನರ ಬಂಧನ
ವಿವಿಧ ಥೀಮ್ ಆಧಾರಿತ ಮತಕೇಂದ್ರಗಳ ಸ್ಥಾಪನೆ
ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಇರುವ 232 ಮತಗಟ್ಟೆಕೇಂದ್ರಗಳಲ್ಲಿ 5 ಸಖಿ (ಪಿಂಕ್ ಬೂತ್), 1 ಯುವ ಮತದಾರರ ಮತಗಟ್ಟೆ, 1 ಮಾದರಿ ವಿಶೇಷ ವಿಕಲಚೇತನ ಮತಗಟ್ಟೆ, 1 ಪರಿಸರ ಜಾಗೃತಿ ಮತಗಟ್ಟೆ, 1 ಲಂಬಾಣಿ ಜನಾಂಗದ ಮಾದರಿಯ ಮತಗಟ್ಟೆ, 1 ಕಬ್ಬಿನ ಮಾದರಿ ಮತಗಟ್ಟೆಎಂದು ಚುನಾವಣಾ ಅಧಿಕಾರಿಗಳು ಗುರುತಿಸುವ ಮೂಲಕ ಮತದಾನ ಹೆಚ್ಚಳವಾಗಲು ವಿಶೇಷ ಮತಗಟ್ಟೆ ಕೇಂದ್ರಗಳನ್ನು ಮತಕ್ಷೇತ್ರದಲ್ಲಿ ಸ್ಥಾಪನೆ ಮಾಡಿದ್ದರು.
ಮತಗಟ್ಟೆಗಳಲ್ಲಿ ಹೆಚ್ಚಾಗಿ ಮಹಿಳಾ ಮತದಾರರಿರುವ ಕಾರಣ ಸಖಿ ಮತಗಟ್ಟೆಗಳೆಂದು ಗುರುತಿಸಿ ಪಿಂಕ್ ಬಣ್ಣದಿಂದ ಅಲಂಕೃತಗೊಳಿಸುವ ಜೊತೆಗೆ ಅಲ್ಲಿನ ಮತಗಟ್ಟೆಅಧಿಕಾರಿಗಳು ಸೇರಿ ಇತರ ಸಿಬ್ಬಂದಿ ಮಹಿಳೆಯರು ಇರುವುದು ಕಂಡುಬಂತು. ಮತಕ್ಷೇತ್ರದ ಮತಗಟ್ಟೆಸಂಖ್ಯೆಗಳಾದ 65, 210, 173, 183 ಹಾಗೂ 104 ಮತಗಟ್ಟೆಗಳನ್ನು ಸಖಿ ಮತಗಟ್ಟೆ ಕೇಂದ್ರವೆಂದು ಗುರುತಿಸಲಾಗಿತ್ತು.
ಕೊಲ್ಹಾರ ಆರ್‌ಸಿಯ ಕನ್ನಡ ಗಂಡುಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಸಂಖ್ಯೆ 170ರಲ್ಲಿ ಯುವ ಮತದಾರರು ಹೆಚ್ಚು ಇರುವದರಿಂದಾಗಿ ಇದನ್ನು ಯುವ ಮತದಾರರ ಮತಗಟ್ಟೆಎಂದು ಗುರುತಿಸಲಾಗಿತ್ತು. ಮತಗಟ್ಟೆಸಂಖ್ಯೆ 181 ಅನ್ನು ವಿಶೇಷ ವಿಕಲಚೇತನ ಮತಗಟ್ಟೆಯನ್ನಾಗಿ ಗುರುತಿಸಿ ಇಲ್ಲಿಯೂ ವಿಶೇಷ ಚೇತನರಿರುವ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಿರುವುದು ಕಂಡುಬಂದಿತ್ತು. ಪ್ರತಿ ಮತಗಟ್ಟೆಕೇಂದ್ರಗಳಲ್ಲಿ ವಿಶೇಷ ಚೇತನರಿಗಾಗಿ ಚಕ್ರದ ಕುರ್ಚಿವ್ಯವಸ್ಥೆ ಮಾಡಿರುವುದು ಕಂಡುಬಂತು. ಮತಗಟ್ಟೆ ಸಂಖ್ಯೆ 119 (ಮಲಘಾಣ) ಅನ್ನು ಈ ಭಾಗದ ವಿಶೇಷ ಬೆಳೆಯಾದ ಕಬ್ಬಿನ ಮಾದರಿ ಮತಗಟ್ಟೆ ಕೇಂದ್ರವೆಂದು ಗುರುತಿಸಲಾಗಿತ್ತು.