ಲಾಕ್‌ಡೌನ್‌: ಸಂಸಾರ ಸಾಕಲಾಗದೇ ಯುವಕ ಆತ್ಮಹತ್ಯೆಗೆ ಯತ್ನ

Kannadaprabha News   | Asianet News
Published : Jun 01, 2020, 01:50 PM IST
ಲಾಕ್‌ಡೌನ್‌: ಸಂಸಾರ ಸಾಕಲಾಗದೇ ಯುವಕ ಆತ್ಮಹತ್ಯೆಗೆ ಯತ್ನ

ಸಾರಾಂಶ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟ ಅನುಭವಿಸಿದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನ| ರಾಯಚೂರು ನಗರದಲ್ಲಿ ನಡೆದ ಘಟನೆ| ಬಜ್ಜಿ-ಬೋಂಡಾ ವ್ಯಾಪಾರದಲ್ಲಿಯೇ ದೊಡ್ಡ ಕುಟುಂಬ ಪೋಷಿಸುತ್ತಿದ್ದ ಯುವಕ|

ರಾಯಚೂರು(ಜೂ.01): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟ ಅನುಭವಿಸಿದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಗೋಲ್‌ಮಾರ್ಕೆಟ್‌ ಬಡಾವಣೆಯಲ್ಲಿ ನಡೆದಿದೆ. ಹುಸೇನ್‌(33) ಎಂಬುವನೇ ಆತ್ಮಹತ್ಯೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. 

ಬಜ್ಜಿ-ಬೋಂಡಾ ವ್ಯಾಪಾರ ಮಾಡುತ್ತಿದ್ದ ಹುಸೇನ್‌ ಕಳೆದ ಮೂರು ತಿಂಗಳಿನಿಂದ ವ್ಯಾಪಾರ ಬಂದ್‌ ಆಗಿದ್ದರಿಂದ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದನು. 

ಕೊರೊನಾ ಟೆಸ್ಟ್ ವರದಿಗೂ ಮುನ್ನವೇ ಅಂತ್ಯಕ್ರಿಯೆ; ಗ್ರಾಮದಲ್ಲೀಗ ಆತಂಕದ ವಾತಾವರಣ

ಬಜ್ಜಿ-ಬೋಂಡಾ ವ್ಯಾಪಾರದಲ್ಲಿಯೇ ಅವರ ದೊಡ್ಡ ಕುಟುಂಬವನ್ನು ಪೋಷಿಸುತ್ತಿದ್ದ ಯುವಕನು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವ್ಯಾಪಾರ ಬಂದಾಗಿದ್ದರಿಂದ ಸಂಸಾರವನ್ನು ಸಾಕಲಾಗದೇ ಮನನೊಂದು ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದನು. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳೀಯ ಪಶ್ಚಿಮ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ