ಇದುವರೆಗೆ ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಪೀಡಿತ 253 ಜನರಲ್ಲಿ 128 ಜನ ಗುಣಮುಖ| 7 ಜನ ನಿಧನ ಹೊಂದಿದರೆ 118 ಸಕ್ರಿಯ ರೋಗಿಗಳಿದ್ದಾರೆ: ಜಿಲ್ಲಾಧಿಕಾರಿ ಶರತ್ ಬಿ|
ಕಲಬುರಗಿ(ಜೂ.01): ಜಿಲ್ಲೆಯಲ್ಲಿ 6 ತಿಂಗಳ ಹೆಣ್ಣುಮಗು ಹಾಗೂ 10 ವರ್ಷಕ್ಕಿಂತ ಕಮ್ಮಿ ವಯಸ್ಸಿನ 6 ಮಕ್ಕಳು ಸೇರಿದಂತೆ ಒಟ್ಟು 43 ಜನ ರೋಗಿಗಳು ಶನಿವಾರ ಒಂದೇ ದಿನದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಕಾಳಗಿ ತಾಲೂಕಿನ ಕೋಡ್ಲಿಯ 24 ವರ್ಷದ ಯುವಕ, ಚಿತ್ತಾಪುರದ ಬೆಳಗೇರಾ ಗ್ರಾಮದ 30ರ ಯುವತಿ, ಕಲಬುರಗಿಯ ವಿಶಾಲ ನಗರದ 55 ವರ್ಷದ ಪುರುಷ, ಚಿಂಚೋಳಿ ತಾಲೂಕಿನ ಕುಂಚಾವರಂ ಬಳಿಯ ಸಂಗಾಪುರ ತಾಂಡಾದ 10 ವರ್ಷದ ಬಾಲಕ, ಕಲಬುರಗಿಯ ಮೋಮಿನಪುರ ಪ್ರದೇಶದ 55 ವರ್ಷದ ಪುರುಷÜ, ಕಾಳಗಿ ತಾಲೂಕಿನ ಅರಣ್‌ಕಲ್ ತಾಂಡಾದ 36 ವರ್ಷದ ಯುವಕ, ಕಲಬುರಗಿ ಮೋಮಿನಪುರ ಪ್ರದೇಶದ 50 ವರ್ಷದ ಮಹಿಳೆ, ಆಳಂದ ತಾಲೂಕಿನ ದಂಗಾಪುರ ಗ್ರಾಮದ 13 ವರ್ಷದ ಬಾಲಕ, 40 ವರ್ಷದ ಪುರುಷ ಹಾಗೂ 55 ವರ್ಷದ ಪುರುಷ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಕಲಬುರಗಿ: ಮಗಳ ಮದುವೆ ಮಾಡಲು ಬಂದ ತಂದೆಗೆ ವಕ್ಕರಿಸಿದ ಕೊರೋನಾ..!
ಕಲಬುರಗಿಯ ಶಹಾಬಜಾರ ತಾಂಡಾದ 22, 24 ವರ್ಷದ ಯುವತಿಯರು, ಕಾಳಗಿ ತಾಲೂಕಿನ ಬುಗಡಿ ತಾಂಡಾದ 29 ವರ್ಷದ ಯುವಕ, 27ರ ಯುವತಿ, ಹಾಗೂ 6 ತಿಂಗಳದ ಹೆಣ್ಣು ಮಗು, ಕಲಬುರಗಿಯ ಆಲಗುಡ್ ಗ್ರಾಮದ 4 ವರ್ಷದ ಹೆಣ್ಣು ಮಗು, ಚಿಂಚೋಳಿ ತಾಲೂಕಿನ ಜಿಲ್‌ವರ್ಷಾ ಗ್ರಾಮದ 4 ವರ್ಷದ ಗಂಡು ಮಗು, 5 ವರ್ಷದ ಹೆಣ್ಣು ಮಗು, 25 ವರ್ಷದ ಯುವತಿ, ಕಾಳಗಿ ತಾಲೂಕಿನ ಬುಗಡಿ ತಾಂಡಾದ 42 ವರ್ಷದ ಪುರುಷ, 18 ರ ಯುವತಿ, ಕಾಳಗಿ ತಾಲೂಕಿನ ಅರಣಕಲ್ ತಾಂಡಾದ 8 ವರ್ಷದ ಬಾಲಕಿ, ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ 35 ವರ್ಷದ ಮಹಿಳೆ, ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದ 32 ವರ್ಷದ ಯುವಕ, ಕಾಳಗಿ ತಾಲೂಕಿನ ಅರಣಕಲ್ ತಾಂಡಾದ 21 ವರ್ಷದ ಯುವತಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಚಿತ್ತಾಪುರದ ನಾಲವಾರ ಗ್ರಾಮದ 40 ವರ್ಷದ ಪುರುಷ, ಕಲಬುರಗಿಯ ಪಂಚಶೀಲ ನಗರದ 30 ವರ್ಷದ ಯುವತಿ, ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದ 30 ವರ್ಷದ ಯುವತಿ, ಅರಣಕಲ್ ತಾಂಡಾದ 32 ವರ್ಷದ ಯುವಕ, ಆಳಂದ ತಾಲೂಕಿನ ದಂಗಾಪುರ ಗ್ರಾಮದ 6 ವರ್ಷದ ಬಾಲಕಿ. 35 ವರ್ಷದ, ಯಡ್ರಾಮಿ ತಾಲೂಕಿನ ಹಂಗರಗಾ (ಕೆ) ಗ್ರಾಮದ 22 ವರ್ಷದ ಯುವಕ, ಸುಂಬಡ ಗ್ರಾಮದ 35 ವರ್ಷದ ಯುವಕ, ಅರಳಗುಂಡಗಿ ಗ್ರಾಮದ 25 ವರ್ಷದ ಯುವಕ ಸೋಂಕಿನಿಂದ ಗುಣುಖನಾಗಿ ಮನೆ ಸೇರಿದ್ದಾನೆ.
ಜೇವರ್ಗಿ ತಾಲೂಕಿನ ಯಾಳವಾರ ಗ್ರಾಮದ 22 ವರ್ಷದ ಯುವತಿ, ಯಡ್ರಾಮಿಯ ಸುಂಬಡ ಗ್ರಾಮದ 46 ವರ್ಷದ ಪುರುಷ, ಚಿತ್ತಾಪುರ ತಾಲೂಕಿನ ಬಳವಡಗಿಯ 26 ವರ್ಷದ ಯುವಕ , ಚಿತ್ತಾಪುರ ತಾಲೂಕಿನ ಯಾಗಾಪುರ ಗ್ರಾಮದ 50 ವರ್ಷದ ಪುರುಷ, ಅಫಜಲಪುರ ತಾಲೂಕಿನ ರಾಮನಗರ ಗ್ರಾಮದ 26 ವರ್ಷದ ಯುವಕ, ಯಡ್ರಾಮಿಯ ಅಲ್ಲಾಪುರ ಗ್ರಾಮದ 32 ವರ್ಷದ ಯುವಕ, ಯಡ್ರಾಮಿಯ ಸುಂಬಡ ಗ್ರಾಮದ 20 ವರ್ಷದ ಯುವಕ , ಕಮಲಾಪುರ ತಾಲೂಕಿನ ಕುದಮೂಡ್ ತಾಂಡಾದ 48 ವರ್ಷದ ಪುರುಷÜ ಹಾಗೂ ಚಿಂಚೋಳಿಯ ಕುಂಚಾವರಂನ 50 ವರ್ಷದ ಮಹಿಳೆ ಕೊರೋನಾ ಸೋಂಕಿನಿಂದ ವಾಸಿಯಾಗಿದ್ದಾರೆ.
ಇದೂವರೆಗೆ ಜಿಲ್ಲೆಯಲ್ಲಿ ಕೊರೋನಾ ಪೀಡಿತ 253 ಜನರಲ್ಲಿ 128 ಜನ ಗುಣಮುಖರಾಗಿದ್ದಾರೆ. 7 ಜನ ನಿಧನ ಹೊಂದಿದರೆ 118 ಸಕ್ರಿಯ ರೋಗಿಗಳಿದ್ದಾರೆ ಎಂದು ಡಿ.ಸಿ. ಶರತ್ ಬಿ. ಅವರು ವಿವರಿಸಿದ್ದಾರೆ.