ಹೆಂಡತಿಯೊಂದಿಗೆ ಸಲುಗೆ ಯಾಕೆ ಎಂದು ಕೇಳಿದ ಗಂಡ: ಮುಖಾಮೂತಿ ನೋಡದೆ ಹೊಡೆದ ಯುವಕ!

Kannadaprabha News   | Asianet News
Published : Feb 16, 2020, 01:33 PM ISTUpdated : Feb 16, 2020, 01:34 PM IST
ಹೆಂಡತಿಯೊಂದಿಗೆ ಸಲುಗೆ ಯಾಕೆ ಎಂದು ಕೇಳಿದ ಗಂಡ: ಮುಖಾಮೂತಿ ನೋಡದೆ ಹೊಡೆದ ಯುವಕ!

ಸಾರಾಂಶ

ಪತ್ನಿಯೊಂದಿಗೆ ಸಲಿಗೆ ಯಾಕೆ ಎಂದು ಪ್ರಶ್ನಿಸಿದ ವ್ಯಕ್ತಿಗೆ ಹಲ್ಲೆ| ಬೆಳಗಾವಿ ನಗರದ ವಡಗಾಂವಿ ಪ್ರದೇಶದಲ್ಲಿ ನಡೆದ ಘಟನೆ| ಹಲ್ಲೆಗೊಳಗಾದ ವ್ಯಕ್ತಿ ಜಿಲ್ಲಾಸ್ಪತ್ರೆಗೆ ದಾಖಲು| 

ಬೆಳಗಾವಿ(ಫೆ.16): ಪತ್ನಿಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ ಯುವಕನನ್ನು ಪ್ರಶ್ನಿಸಿದ ಪತಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಶುಕ್ರವಾರ ನಗರದ ವಡಗಾಂವಿ ಪ್ರದೇಶದಲ್ಲಿ ನಡೆದಿದೆ. 

ನಗರದ ವಡಗಾಂವಿಯ ಅಭಿಷೇಕ ನಾಮದೇವ ಅವಂದಕರ(26) ಹಲ್ಲೆ ನಡೆಸಿದ ಆರೋಪಿ, ಗಾಯಗೊಂಡ ಕಿಶೋರ ಹಸಣೆ(33) ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಲವು ವರ್ಷಗಳಿಂದ ಕಿಶೋರನ ಪತ್ನಿ ಸೇರಿದಂತೆ ಮೂವರು ಅನ್ಯೋನ್ಯವಾಗಿದ್ದರು. ಆದರೆ, ಇತ್ತೀಚೆಗೆ ಪತ್ನಿಯೊಂದಿಗೆ ಅತಿ ಸಲುಗೆಯಿಂದ ವರ್ತಿಸುತ್ತಿದ್ದ ಅಭಿಷೇಕನ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಅಭಿಷೇಕ ಅವಂದಕರ ಪತಿ ಕಿಶೋರನನ್ನು ಹತ್ಯೆ ಮಾಡುವುದಕ್ಕಾಗಿ ಹಾಡಹಗಲೇ ಕಿಶೋರನ ಮೇಲೆ ಕೊಯ್ತಾದಿಂದ ಹಲ್ಲೆ ಮಾಡಿದ್ದಾನೆ. 

ಸ್ಥಳೀಯರ ಮಾಹಿತಿಯಿಂದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು