ಆರೋಗ್ಯವಂತ ಜೀವನಕ್ಕೆ ಯೋಗ, ಪ್ರಕೃತಿ ಚಿಕಿತ್ಸೆ ಮಹತ್ವದ್ದು

By Kannadaprabha NewsFirst Published Oct 3, 2023, 8:14 AM IST
Highlights

ಒತ್ತಡದ ಜೀವನವನ್ನು ನಿವಾರಿಸಿಕೊಂಡು ಅರೋಗ್ಯವಂತ ಜೀವನ ನಡೆಸಲು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಅತ್ಯಂತ ಮಹತ್ವದ್ದಾಗಿದೆ ಎಂದು ಚಾಮುಲ್ ನಿರ್ದೇಶಕಿ ಶೀಲಾ ಪುಟ್ಟರಂಗಶೆಟ್ಟಿ ಹೇಳಿದರು.

  ಚಾಮರಾಜನಗರ :  ಒತ್ತಡದ ಜೀವನವನ್ನು ನಿವಾರಿಸಿಕೊಂಡು ಅರೋಗ್ಯವಂತ ಜೀವನ ನಡೆಸಲು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಅತ್ಯಂತ ಮಹತ್ವದ್ದಾಗಿದೆ ಎಂದು ಚಾಮುಲ್ ನಿರ್ದೇಶಕಿ ಶೀಲಾ ಪುಟ್ಟರಂಗಶೆಟ್ಟಿ ಹೇಳಿದರು.

ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ ಪುಣೆ, ನಗರದ ಸರ್ಕಾರಿ ಯೋಗ ಮತ್ತು ಪ್ರಕೃತಿ ಕೇಂದ್ರ, ಆಯುಷ್ ನಿರ್ದೇಶನಾಲಯ, ಎಸ್.ಜೆ.ಎಂ. ಮತ್ತು ಶಾಂತಿವನ ಟ್ರಸ್ಟ್ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಹಾಗೂ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಗಳು, ಉಜಿರೆ ಸಹಭಾಗಿತ್ವದಲ್ಲಿ ನಗರದ ಡಾ. ಬಿಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯವಂತನಾದ ಮನುಷ್ಯನೇ ನಿಜವಾದ ಭಾಗ್ಯವಂತ ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವಿಲ್ಲ, ಆರೋಗ್ಯವೇ ಭಾಗ್ಯ, ಆರೋಗ್ಯವೆಂದರೆ ಕೇವಲ ರೋಗ ರಹಿತವಾಗಿರದೆ ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು ಎಂದರು.

ತಾಲ್ಲೂಕು ಅರೋಗ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ ಆಯುಷ್ ಇಲಾಖೆಯ ವ್ಯಾಪ್ತಿಗೆ ಬರುವ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಜಿಲ್ಲೆಯಲ್ಲಿ ನಗರದಲ್ಲಿ ಮಾತ್ರ ಇದ್ದು, ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಹರೀಶ್ ಕುಮಾರ್‌, ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ನಾಗಯ್ಯ ಎನ್., ಆರ್ಯುವೇದ ವೈದ್ಯಾಧಿಕಾರಿ ಶೋಭಾ ಕೆ.ಪಿ., ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಡಾ. ಮಾನಸ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸುಜಾತ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ಯಯಾಧಿಕಾರಿ ಶ್ವೇತಾ, ಡಾ. ಪವನ್, ಡಾ. ಮಿಥುನ್ ಇದ್ದರು,

ವಿಜಯ್ ಕಾರ್ಯಕ್ರಮ ನಿರೂಪಿಸಿದರು. ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಸಿಬ್ಬಂದಿ ಇದ್ದರು. 400ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.

ಮನಸ್ಸಿನ ಹತೋಟಿಗೆ ಯೋಗ ಅವಶ್ಯಕ

ನಮ್ಮ ಆರೋಗ್ಯ ನಮ್ಮ ಕೈಯಲ್ಲಿರಬೇಕು. ಇಂಗ್ಲೀಷ್ ಔಷಧಿಗಳನ್ನು ಹೆಚ್ಚು ಹೆಚ್ಚು ಉಪಯೋಗಿಸಿದಂತೆಲ್ಲಾ ದೇಹಕ್ಕೆ ಆಪಾಯವೇ ಹೆಚ್ಚು. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ರೋಗಗಳು ಬರುವುದನ್ನು ತಡೆಯುವುದಲ್ಲದೇ ದೇಹವನ್ನು ಸಮತೋನಲದಲ್ಲಿಟ್ಟು ಸದಾ ಚಟವಟಿಕೆಯಿಂದರಲೂ ಸಾಧ್ಯವಾಗುತ್ತದೆ, ಮೊಬೈಲ್ ಹೆಚ್ಚಿನ ಬಳಕೆಯಿಂದಾಗಿ ನಾವು ಇಂದು ಒತ್ತಡ ಜೀವನಶೈಲಿಯಲ್ಲಿದ್ದೇವೆ. ಆದ್ದರಿಂದ ಮನಸ್ಸನ್ನು ಸಮತೋಲನದಲ್ಲಿಟ್ಟುಕೊಳ್ಳಲು ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಬಹಳ ಅವಶ್ಯಕ.

ನಾಗಶ್ರೀ, ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ.

click me!