'ನಮ್ಮ ಜಿಲ್ಲೆಗೆ ಒಕ್ಕರಿಸದ ಕೊರೋನಾ: ನಾವೆಲ್ಲರೂ ಅದೃಷ್ಟವಂತರು'

By Kannadaprabha NewsFirst Published Apr 12, 2020, 8:52 AM IST
Highlights

ಯಲಬುರ್ಗಾ ತಾಲೂಕಿನ ಜನರು ಅದೃಷ್ಟವಂತರು| ಜನಜಾಗ್ರತಿ ಕಾರ್ಯಕ್ರಮದಲ್ಲಿ ನಿರ್ಲಕ್ಷ್ಯ ಬೇಡ ಎಂದು ಹಾಲಪ್ಪ ಆಚಾರ ಮನವಿ| ಲಾಕ್‌ಡೌನ್‌ ನಿಯಮ ಯಾರೂ ಮೀರದಂತೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು|

ಯಲಬುರ್ಗಾ(ಏ.12): ನಮ್ಮ ಜಿಲ್ಲೆ, ತಾಲೂಕಿನಲ್ಲಿ ಯಾವುದೇ ಕೊರೋನಾ ಪ್ರಕರಣ ಕಾಣಿಸಿಕೊಂಡಿಲ್ಲ ನಾವೆಲ್ಲರೂ ಅದೃಷ್ಟವಂತರು ಆದರೆ ನಿರ್ಲಕ್ಷ್ಯ ಮಾಡದೇ ಸರ್ಕಾರದ ಮುಂದಿನ ಆದೇಶದವರೆಗೊ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಂಕಲ್ಪ ಮಾಡೋಣ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದ್ದಾರೆ.

ತಾಲೂಕಿನ ಚಿಕ್ಕಮ್ಯಾಗೇರಿ, ಗೆದಗೇರಿ ತಾಂಡಾಗಳು, ಸಾಲಭಾವಿ, ಮದ್ಲೂರ, ಲಗಳೂರ, ಮಾರನಾಳ, ತಲ್ಲೂರ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಕೊರೊನಾ ವೈರಸ್‌ ಹಿನ್ನೆಲೆ ಆಯೋಜಿಸಿದ್ದ ಜನಜಾಗ್ರತಿ ಕಾರ್ಯಕ್ರಮದ ನಿಮಿತ್ಯ ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸಿ ಮಾತನಾಡಿದರು. ನಮ್ಮ ಪಕ್ಕದ ಜಿಲ್ಲೆಗಳಾದ ಗದಗ, ಬಳ್ಳಾರಿಗಳಲ್ಲಿ ಸೋಂಕು ಹರಡಿಕೊಂಡಿದೆ ಅಲ್ಲಿಯ ಪರಿಸ್ಥಿತಿ ಹೇಳತೀರದು. ಆದರೆ ನಾವು ಮನೆಯಿಂದ ಯಾರೂ ಹೊರಗೆ ಹೋಗದಂತೆ ಗಟ್ಟಿ ಮನಸ್ಸಿನಿಂದ ಈ ಕೊರೋನಾ ವೈರಸ್‌ ಹೊಡೆದೋಡಿಸೋಣ ಎಂದರು.

ಕನ್ನಡಪ್ರಭ ವರದಿ: ಸಂಕಷ್ಟಕ್ಕೀಡಾದ ಕುಟುಂಬಕ್ಕೆ ಹಲವರ ಆಸರೆ

ಈಗಾಗಲೇ ಕಳೆದ 1 ತಿಂಗಳಿನಿಂದಲೂ ಸತತವಾಗಿ ತಾಲೂಕಿನ 144 ಗ್ರಾಮಗಳಿಗೊ ಭೇಟಿ ನೀಡಿ ಅಲ್ಲಿಯ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ. ಪಡಿತರ ಸೌಲಭ್ಯ, ಉಜ್ವಲ ಗ್ಯಾಸ್‌ ವಿತರಣೆ, ಚರಂಡಿ ಸ್ವಚ್ಛತೆ, ಮಾಸ್ಕ್‌ ವಿತರಣೆ, ವೈದ್ಯಕೀಯ ಸೌಲಭ್ಯ, ಸ್ಲಮ್‌ ನಿವಾಸಿಗಳಿಗೆ ಹಾಲು ಪೂರೈಕೆ ಸೇರಿದಂತೆ ಅಗತ್ಯ ವಸ್ತುಗಳನ್ನು ಸಮರ್ಪಕವಾಗಿ ವಿತರಿಸಲು ತಹಸೀಲ್ದಾರ್‌, ತಾಪಂ ಇಒ, ತಾಲೂಕು ವೈದ್ಯಾಧಿಕಾರಿ, ಸಿಪಿಐ, ಪಿಎಸ್‌ಐ ಪಿಡಿಒಗಳು, ಕಂದಾಯ ನಿರೀಕ್ಷರು ಸೇರಿದಂತೆ ಎಲ್ಲ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಅವರಿಗೆ ತೊಂದರೆಯಾಗದಂತೆ ಕ್ರಮವಹಿಸುತ್ತಿದ್ದೇನೆ. ನಿಮ್ಮೊಂದಿಗೆ ಸದಾ ನಾ ಇರುತ್ತೇನೆ. ಹೀಗಾಗಿ ಕ್ಷೇತ್ರದ ಜನರು ಈ ಲಾಕ್‌ಡೌನ್‌ ನಿಯಮವನ್ನು ಯಾರೂ ಮೀರದಂತೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ನರ್ಸ್‌ಗಳು, ಮುಖಂಡರು, ಗ್ರಾಪಂ ಚುನಾಯಿತ ಪ್ರತಿನಿಧಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು, ಪೊಲೀಸ್‌ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.
 

click me!