ಯಶವಂತಪುರ-ವಿಜಯಪುರ ರೈಲು ಪುನಃ ಪ್ರಾರಂಭ

Published : Apr 08, 2021, 11:24 AM IST
ಯಶವಂತಪುರ-ವಿಜಯಪುರ ರೈಲು ಪುನಃ ಪ್ರಾರಂಭ

ಸಾರಾಂಶ

ರೈಲು ಪ್ರಾರಂಭಿಸಲು ಅನೇಕ ಬಾರಿ ಮನವಿ| ಸದ್ಯ ರೈಲು ಸಂಚಾರ ಪ್ರಾರಂಭವಾಗಿದ್ದು, ಈ ಗಾಡಿ ಗದಗ-ಬೆಟಗೇರಿಯಿಂದ ಬೆಳಗ್ಗೆ 7ಕ್ಕೆ ಹೊರಡಲಿದೆ: ಗಣೇಶ್‌ ಸಿಂಗ್‌ ಬ್ಯಾಳಿ| 

ಗದಗ(ಏ.08): ಕೋವಿಡ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಯಶವಂತಪುರ-ವಿಜಯಪುರ-ಯಶವಂತರಪುರ ಗಾಡಿ ನಂ. 06541/06542 ಏ. 10ರಿಂದ ಪುನಃ ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶ್‌ ಸಿಂಗ್‌ ಬ್ಯಾಳಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈಲು ಪ್ರಾರಂಭಿಸಲು ಅನೇಕ ಬಾರಿ ಮನವಿ ನೀಡಲಾಗಿತ್ತು. ಸದ್ಯ ರೈಲು ಸಂಚಾರ ಪ್ರಾರಂಭವಾಗಿದ್ದು, ಈ ಗಾಡಿ ಗದಗ-ಬೆಟಗೇರಿಯಿಂದ ಬೆಳಗ್ಗೆ 7ಕ್ಕೆ ಹೊರಡಲಿದೆ. 

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌

ಇದು ಎಕ್ಸ್‌ಪ್ರೆಸ್‌ ಗಾಡಿ ಆಗಿರುವುದರಿಂದ ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್‌ ದೊರೆಯುವಂತೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಬ್ಯಾಳಿ ಮನವಿ ಮಾಡಿದ್ದಾರೆ.

PREV
click me!

Recommended Stories

28 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ, 'ಇದು ಸೂಕ್ತ ಸಮಯವಲ್ಲ' ವಾರ್ನಿಂಗ್‌ ನೀಡಿದ IMD
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?