ಹೈ.ಕ ಭಾಗದ ನಡೆದಾಡುವ ದೇವರು ಮಾತಾ ಮಾಣಿಕೇಶ್ವರಿ ಲಿಂಗೈಕ್ಯ

By Suvarna News  |  First Published Mar 7, 2020, 10:33 PM IST

ಮಾತೆ ಮಾಣಿಕೇಶ್ವರಿ (87) ಇನ್ನಿಲ್ಲ| ಯಾನಾಗುಂದಿ ಬೆಟ್ಟದ ಗುಹೆಯಲ್ಲಿ ನೆಲಯೆಸಿದ್ದ ಮಾತೆ ಮಾಣಿಕೇಶ್ವರಿ ಅಮ್ಮ| ಅನ್ನ ನೀರು ಇಲ್ಲದೇ ಜೀವಿಸಿ ವಿಜ್ಞಾನಕ್ಕೆ ಸವಾಲಾಗಿದ್ದ ಮಾಣಿಕೇಶ್ವರಿ ಅಮ್ಮ|


ಕಲಬುರಗಿ, [ಮಾ.07]: ಹೈದರಾಬಾದ್ ಕರ್ನಾಟಕ ಭಾಗದ ನಡೆದಾಡುವ ದೇವರು, ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಸಂಸ್ಥಾನದ ಪೀಠಾಧಿಪತಿ ಮಾತಾ ಮಾಣಿಕೇಶ್ವರಿ (87) ಲಿಂಗೈಕ್ಯರಾಗಿದ್ದಾರೆ.

ಮಾತಾ ಮಾಣಿಕೇಶ್ವರಿ ಅಮ್ಮನವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಮಠದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು [ಶನಿವಾರ] ಲಿಂಗೈಕ್ಯರಾಗಿದ್ದಾರೆ.

Latest Videos

undefined

ಮಾತಾ ಮಾಣಿಕೇಶ್ವರಿ ಅಮ್ಮನವರು ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ್ದರು. ಅವರು ಶಿವರಾತ್ರಿಯಂದು ಭಕ್ತರಿಗೆ ಕೊನೆಯದಾಗಿ ದರ್ಶನ ಕೊಟ್ಟಿದ್ದರು. ಅಮ್ಮನವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ದೇವಸ್ಥಾನಕ್ಕೆ ಭಕ್ತರು ದೌಡಾಯಿಸುತ್ತಿದ್ದಾರೆ. 

,ಅನ್ನ ನೀರಿಲ್ಲದೇ ಬದುಕಿದ ಜಗತ್ತಿನ ಏಕೈಕ ಜೀವಿ ಅವರು, ಬರೀ ದೈವಿ ಸ್ವರೂಪಿ ಮಾತ್ರವಲ್ಲ.. ಸಾಕ್ಷಾತ್ ದೇವರೇ ಅವರು. ಅಗಲಿಕೆ ಅಸಂಖ್ಯ ಭಕ್ತ ಸಮೂಹಕ್ಕೆ ಅಘಾತ ತಂದಿದೆ ಎಂದು ಮಾಣಿಕೇಶ್ವರಿ ಅಮ್ಮನವರ ನಿಧನಕ್ಕೆ ಸೇಡಂ ಶಾಸಕ ರಾಜಕುಮಾರ ಪಾಟೀಲ್ ಸೇಡಂ ಕಂಬನಿ ಮಿಡಿದಿದ್ದಾರೆ.

1934, ಜುಲೈ 26ರಂದು ತಂದೆ-ತಾಯಿಗೆ 4ನೇ ಮಗಳಾಗಿ ಜನಿಸಿದ್ದ ಮಾಣಿಕೇಶ್ವರಿ, 9ನೇ ವಯಸ್ಸಿನಲ್ಲೇ ಬಾಲ್ಯ ವಿವಾಹವಾಗಿದ್ದರು.

click me!