ಮೈಸೂರಿನ ರಾಜಬೀದಿಯಲ್ಲಿ ಯಮ ಗದೆ ಹಿಡಿದು ಜನರನ್ನು ಹೆದರಿಸಿದರೆ ಹಿಂದಿನಿಂದ ಕಿಂಕರರೂ ಬಂದಿದ್ದಾರೆ. ಗದೆ ಹಿಡಿದ ಯಮ ಜನರನ್ನು ಗದರಿದ್ದಾನೆ. ಏನಾಯ್ತು..? ಇಲ್ಲಿ ಓದಿ.
ಮೈಸೂರು(ಜೂ.18): ಮೈಸೂರಿನ ರಾಜಬೀದಿಯಲ್ಲಿ ಯಮ ಗದೆ ಹಿಡಿದು ಜನರನ್ನು ಹೆದರಿಸಿದರೆ ಹಿಂದಿನಿಂದ ಕಿಂಕರರೂ ಬಂದಿದ್ದಾರೆ. ಗದೆ ಹಿಡಿದ ಯಮ ಜನರನ್ನು ಗದರಿದ್ದಾನೆ.
ಎಲ್ಲೆಡೆ ಮಾಸ್ಕ್ ಡೇ ಆಚರಿಸುತ್ತಿದ್ದು, ಈ ನಿಟ್ಟಿನಲ್ಲಿ ಮೈಸೂರು ನರಸಿಂಹರಾಜ ಸಂಚಾರ ಪೊಲೀಸರು ವಿಶೇಷ ಕಾರ್ಯಕ್ರಮ ಮಾಡಿದ್ದಾರೆ. ಎಷ್ಟು ಹೇಳಿದರೂ ಕ್ಯಾರೇ ಅನ್ನದ ಜನರಿಗೆ ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ.
undefined
ಕೊರೋನಾ ಜೀವ ರಕ್ಷಕ ಇಂಜೆಕ್ಷನ್‌ಗೆ ಕೇವಲ 10ರೂ!
ರೋಡಿಗಿಳಿದ ಯಮ, ಕಿಂಕರರು ರಾಜಬೀದಿಗಳಲ್ಲಿ ಗದೆ ಹಿಡಿದು ಜನರನ್ನು ಬೆದರಿಸಿದರು. ಮಾಸ್ಕ್ ದಿನಾಚರಣೆ ಹಿನ್ನೆಲೆ ಮೈಸೂರು ನರಸಿಂಹರಾಜ ಸಂಚಾರ ಪೊಲೀಸರಿಂದ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಲಾಯಿತು.
ಯಮನ ವೇಷತೊಟ್ಟ ಗೃಹ ರಕ್ಷಕ ದಳದ ಸ್ವಾಮಿಗೌಡ, ಕಿಂಕರನ ವೇಷ ಧರಿಸಿದ ಪೊಲೀಸ್ ಪೇದೆ ಎಂ.ಸತೀಶ್, ಗೃಹ ರಕ್ಷಕ ದಳದ ಆರ್.ಲಕ್ಷ್ಮಿನಾರಾಯಣ, ಯಮ, ಕಿಂಕರರಿಗೆ ಮಾಸ್ಕ್ ತೊಡಿಸಿದರು.
ಮಾಸ್ಕ್ ಡೇ: ಸಿಎಂ ಜೊತೆ ಸೆಲೆಬ್ರಿಟಿಗಳ ಸಾಥ್, ಇಲ್ಲಿವೆ ಫೋಟೋಸ್
ನರಸಿಂಹರಾಜ ಸಂಚಾರ ಪೊಲೀಸ್ ಠಾಣೆ ಪೊಲೀಸರಿಂದ ಪ್ರಯತ್ನ ನಡೆದಿದ್ದು, ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ನಡೆಸಲಾಯಿತು. ಮಾಸ್ಕ್ ಧರಿಸದ ದ್ವಿಚಕ್ರ ವಾಹನ ಸವಾರರನ್ನು ಯಮ ಅಡ್ಡಗಟ್ಟಿದ. ಮಾಸ್ಕ್ ಕಟ್ಟಿದ ನಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸಂಚಾರ ಪೊಲೀಸರು, ಪೌರಕಾರ್ಮಿಕರಿಂದ ಬೈಕ್ ರ್ಯಾಲಿ ನಡೆಯಿತು.
#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್