ಯದುವೀರ್ ನಗರದ ಹಲವೆಡೆ ಭೇಟಿ ಮತಯಾಚನೆ : ನಾಗರೀಕರೊಡನೆ ಸಂವಾದ

By Sujatha NR  |  First Published Mar 26, 2024, 10:51 AM IST

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ಕೃಷ್ಣದತ್ತ ಚಾಮರಾಜ ಒಡೆಯರ್  ಅವರು ನಗರದ ವಿವಿಧೆಡೆ ಭೇಟಿ ನೀಡಿ ಮತಯಾಚಿಸಿದರು.


ಮೈಸೂರು :  ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ಕೃಷ್ಣದತ್ತ ಚಾಮರಾಜ ಒಡೆಯರ್  ಅವರು ನಗರದ ವಿವಿಧೆಡೆ ಭೇಟಿ ನೀಡಿ ಮತಯಾಚಿಸಿದರು.

ಬೆಳಗ್ಗೆ ಚಾಮುಂಡಿಬೆಟ್ಟದ ತಪ್ಪಲಿನ ಪಿಂಜರಾಪೋಲ್ಸೊಸೈಟಿಗೆ ಭೇಟಿ ನೀಡಿದ ಅವರು ಗೋವುಗಳ ರಕ್ಷಣೆ ಮತ್ತು ಆರೋಗ್ಯದ ಕುರಿತು ಮಾಹಿತಿ ಪಡೆದರು. ನಂತರ ಸರಸ್ವತಿಪುರಂನ ವಿಜಯ ವಿಠಲ ಶಾಲೆಗೆ ತೆರಳಿ ಪಕ್ಷದ ಪ್ರಮುಖರು ಮತ್ತು ನಾಗರೀಕರೊಡನೆ ಸಂವಾದ ನಡೆಸಿದರು. ನಂತರ ನೆರಂಬಳ್ಳಿ ಕಲ್ಯಾಣ ಮಂಟಪದಲ್ಲಿ ನಡೆದ ಪ.ಪಂಗಡ ಮೋರ್ಚಾದ ಮುನ್ನಡೆ ಸಮಾವೇಶದಲ್ಲಿ ಪಾಲ್ಗೊಂಡರು.

Latest Videos

undefined

ನಂತರ ಕುವೆಂಪುನಗರದ ಜೋಡಿ ಬಸವೇಶ್ವರ ರಸ್ತೆಯಲ್ಲಿ ಕಚೇರಿ ಉದ್ಘಾಟಿಸಿದರು. ಸಂಜೆ ಕೆಸರೆಯ ಕೆಪಿಟಿಸಿಎಲ್ಸಮುದಾಯ ಭವನದಲ್ಲಿ ಕಾರ್ಯಕರ್ತರೊಡನೆ ಸಭೆ ನಡೆಸಿದರು.

ದೂರದೃಷ್ಟಿಯ ಆಡಳಿತಕ್ಕೆ ಮೋದಿ ಬೆಂಬಲಿಸಿ

ಮೈಸೂರು (ಮಾ.17): ದೇಶದ ಅಭಿವೃದ್ಧಿಗಾಗಿ, ಮುಂದಿನ ನೂರು ವರ್ಷದ ದೂರದೃಷ್ಟಿಯ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು. ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕ್ರತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ಮಾಜಿ ಸಚಿವ ಸಾ.ರಾ. ಮಹೇಶ್‌ ಅವರ ಕಚೇರಿಗೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರನ್ನು ಪ್ರವಾಸಿ ಕೇಂದ್ರ ಮತ್ತು ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಕೆಲಸ ಮಾಡಬೇಕು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಸುಧಾರಣೆಯಾಗಿದೆ. 

ಮೈಸೂರು ಸಂಸ್ಥಾನದ ಆಡಳಿತ ಇದ್ದಾಗ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಅಂತೆಯೇ ಮೋದಿ ಅವರು ನೂರು ವರ್ಷಗಳ ದೂರದೃಷ್ಟಿಯ ಯೋಜನೆ ರೂಪಿಸಿದ್ದಾರೆ. ಅದಕ್ಕಾಗಿ ನಾವೆಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು. ಸ್ವಚ್ಛ ಭಾರತದ ಜತೆಗೆ ಶ್ರೇಷ್ಠ ಭಾರತದ ನಿರ್ಮಾಣವಾಗಬೇಕು. ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ಬದಲಾವಣೆ ಆಗಬೇಕು. ಮೈಸೂರಿನ ಅಭಿವೃದ್ಧಿಯ ಬಗ್ಗೆ ಹೆಚ್ಚು ಗಮನಹರಿಸಲಾಗುವುದು. ಬಿಜೆಪಿ ಹೈಕಮಾಂಡ್ ಜನ ಸೇವೆ ಮಾಡಲು ಅವಕಾಶ ನೀಡಿದೆ. ಜೆಡಿಎಸ್‌ ನಾಯಕರು ತಮ್ಮೊಂದಿಗೆ ಕೈ ಜೋಡಿಸಿ ಕೆಲಸ ಮಾಡಬೇಕು ಎಂದು ಅವರು ಕೋರಿದರು. ಚುನಾವಣೆ ಪ್ರಚಾರದ ವೇಳೆ ಎಲ್ಲರನ್ನೂ ಭೇಟಿಯಾಗುತ್ತೇನೆ. ಈಗಾಗಲೇ ಎಲ್ಲಾ ನಾಯಕರನ್ನು ಭೇಟಿ ಆಗುತ್ತಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವಾಗ ಯಾವುದೇ ರೀತಿಯ ಮನೋಭಾವ ಇರಬಾರದು ಎಂದರು.

ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವುದು ಕಾಂಗ್ರೆಸ್ ಸರ್ಕಾರ: ಸಚಿವ ಸಂತೋಷ್‌ ಲಾಡ್

ಮಾಜಿ ಸಚಿವ ಸಾ.ರಾ. ಮಹೇಶ್ ವಾತನಾಡಿ, ಈ ಸಂದರ್ಭದಲ್ಲಿ ನಾವು ನಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಮೈತ್ರಿ ಅಭ್ಯರ್ಥಿ ಆಗಿರುವ ಕಾರಣ ಒಗ್ಗಟ್ಟನ್ನು ಕಾಪಾಡಿಕೊಂಡು ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಜನಬೆಂಬಲ ದೊರಕುವಂತೆ ಮಾಡಬೇಕು. 2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. ಕಳೆದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರು ಬೆನ್ನಿಗೆ ಚೂರಿ ಹಾಕಿದ್ದರಿಂದ ಬಿಜೆಪಿಗೆ ಮತ ನೀಡಿದರು. ಮಂಡ್ಯದಲ್ಲಿ ಮಾಡಿದ ಕೆಲಸ ಮೈಸೂರು ಕ್ಷೇತ್ರದಲ್ಲಿ ನಡೆಯಲಿದೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಹೀಗಿದ್ದರೂ, ಪರಿಗಣಿಸದ ಕಾರಣ ಮತದಾನದ ದಿನದಂದು ಜೆಡಿಎಸ್‌ಕಾರ್ಯಕರ್ತರು ಬಿಜೆಪಿ ಬೆಂಬಲಿಸಿ ಮತಚಲಾವಣೆ ಮಾಡಿದ್ದಾಗಿ ಹೇಳಿದರು.

click me!