ಲೋಕಸಭಾ ಚುನಾವಣೆಗೆ ತುಮಕೂರು ಸರ್ವಸನ್ನದ್ಧ

By Kannadaprabha NewsFirst Published Mar 19, 2024, 10:51 AM IST
Highlights

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಎಲ್ಲಾ ರೀತಿಯ ಕ್ರಮಗಳನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಲೋಕಸಭಾ ಚುನಾವಣೆಯ ಸಹಾಯಕ ಚುನಾವಣಾಧಿಕಾರಿ ಗೌರವಕುಮಾರ ಶೆಟ್ಟಿ ತಿಳಿಸಿದ್ದಾರೆ.

 ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಎಲ್ಲಾ ರೀತಿಯ ಕ್ರಮಗಳನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಲೋಕಸಭಾ ಚುನಾವಣೆಯ ಸಹಾಯಕ ಚುನಾವಣಾಧಿಕಾರಿ ಗೌರವಕುಮಾರ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಾರ್ಚ್ 28 ರಂದು ಅಧಿಸೂಚನೆ ಹೊರಡಲಿದ್ದು, ಏಪ್ರಿಲ್ 4 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏ.5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 8 ಕೊನೆಯ ದಿನವಾಗಿದೆ, ಏಪ್ರಿಲ್ 26 ರಂದು ಮತದಾನ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ ಎಂದರು.

ಗ್ರಾಮಾಂತರದ ದಲ್ಲಿ ಒಟ್ಟು 212511 ಮತದಾರರಿದ್ದು, ಇವರಲ್ಲಿ 104514 ಪುರುಷರು, 107983 ಮಹಿಳೆಯರು ಹಾಗೂ 13 ಇತರೆ ಮತದಾರರಿದ್ದು, 223 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 212511 ಮತದಾರದಲ್ಲಿ 18-19 ವರ್ಷದ ಹೊಸ ಮತದಾರರ ಸಂಖ್ಯೆ 4505 ಇದ್ದು, ವಿಕಲಚೇತನ ಮತದಾರರ ಸಂಖ್ಯೆ 2877 ಇದೆ. ಹಾಗೆಯೇ 85 ವರ್ಷ ಮೀರಿದ ಸುಮಾರು 2964 ಮತದಾರರು, 94 ಸೇವಾ ಮತದಾರರಿದ್ದಾರೆ.ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್‌ಒಗಳ ಮೂಲಕ ಅಂಗವಿಕಲ ಮತ್ತು 85 ವರ್ಷ ಮೇಲ್ಪಟ್ಟ ಮತದಾರರಿಗೆ ಫಾರಂ ನಂ 12 ಡಿ ಕಳುಹಿಸುತ್ತಿದ್ದು, ಮನೆಯಲ್ಲಿಯೇ ಮತದಾನ ಮಾಡಲು ಇಚ್ಚಿಸುವವರು 12ಡಿ ಫಾರಂ ತುಂಬಿ ತಮ್ಮ ಆಯ್ಕೆಯನ್ನು ತಿಳಿಸಬಹುದು. ಒಮ್ಮೆ 12 ಡಿ ಆಯ್ಕೆ ಮಾಡಿದರೆ ಬದಲಾವಣೆಗೆ ಅವಕಾಶ ಇಲ್ಲ ಎಂದು ಗೌರವಕುಮಾರಶೆಟ್ಟಿ ಸ್ಪಷ್ಟಪಡಿಸಿದರು.

ತುಮಕೂರು ಗ್ರಾಮಾಂತರದ ಕೆಸರುಮಡು ಗ್ರಾಮದ ಮತಗಟ್ಟೆ ಸಂಖ್ಯೆ 138,139 ಮತ್ತು 140 ನ್ನು ವಲ್ಲರಬಲ್ ಮತಗಟ್ಟೆಗಳೆಂದು ಗುರುತಿಸಿದ್ದು,ಬಾದಿತ 9 ಕುಟುಂಬಗಳ 23 ಮಂದಿ ಮತದಾರರಿದ್ದು, ಇವರಿಗೆ ಧೈರ್ಯ ತುಂಬಿ,ಭಯ ಮುಕ್ತ ವಾತಾವರಣ ನಿರ್ಮಿಸಲು ಎಲ್ಲಾ ಪ್ರಯತ್ನ ಕೈಗೊಳ್ಳುತ್ತೇವೆ. ಕ್ಷೇತ್ರದಲ್ಲಿ 107 ಕ್ರಿಟಿಕಲ್ ಮತಗಟ್ಟೆಗಳಿದ್ದು, ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ, ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಗೌರವಕುಮಾರಶೆಟ್ಟಿ ಸ್ಪಷ್ಟಪಡಿಸಿದರು.

ಇಂದು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತದಾನಕ್ಕೆ ಅಗತ್ಯವಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ ರೈಡಮೈಸ್ ನಡೆಯಲಿದ್ದು,ತುಮಕೂರು 133 ವಿಧಾನಸಭಾ ಕ್ಷೇತ್ರದ ಮತಯಂತ್ರಗಳು ವಿಜಯನಗರದ ಸರ್ವೋದಯ ಕಾಲೇಜಿನ ಸ್ಟ್ರಾಂಗ್ ರೂಮ್ ಗೆ ಸ್ಥಳಾಂತರಗೊಳ್ಳಲಿವೆ. ಚುನಾವಣೆಯ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡ ನಂತರ ಉಳಿದ ಕೆಲಸ ಪ್ರಾರಂಭವಾಗಲಿದೆ. ಪೊಲೀಸ್ ಇಲಾಖೆ,ಆರ್ ಡಿಪಿಆರ್ ಇಲಾಖೆಯ ಸಹಯೋಗದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಸಿದ್ಧತೆ ಕೈಗೊಂಡಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ತುಮಕೂರು ತಹಸೀಲ್ದಾರ್ ಸಿದ್ದೇಶ್.ಎಂ, ಪೊಲೀಸ್ ನೋಡಲ್ ಅಧಿಕಾರಿ ಡಿವೈಎಸ್ಪಿ ಚಂದ್ರಶೇಖರ್.ಕೆ.ಆರ್ ಹಾಗೂ ತಾಪಂ ಇಒ ಉಪಸ್ಥಿತರಿದ್ದರು.

ನೀತಿ ಸಂಹಿತೆ ಜಾರಿ, ಐದು ಚೆಕ್ ಪೋಸ್ಟ್ ಗಳ ಸ್ಥಾಪನೆ

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಈಗಾಗಲೇ ಐದು ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ.ಕಸಬಾ ಪಶ್ಚಿಮದಲ್ಲಿ ಮಲ್ಲಸಂದ್ರ,ಉರ್ಡಿಗೆರೆ ಹೋಬಳಿ ಯಲ್ಲಿ ಚಾಸ್‌ಟೋಲ್ ಕ್ಯಾತ್ಸಂದ್ರ ಮತ್ತು ಕುರುವೇಲು,ಗೂಳೂರು ಹೋಬಳಿಯಲ್ಲಿ ಹೊನ್ನುಡಿಕೆ,ಬೆಳ್ಳಾವಿ ಹೋಬಳಿ, ಯಲ್ಲಿ ದೊಡ್ಡವೀರನಹಳ್ಳಿ ಗೇಟ್ ನಲ್ಲಿ ಚೆಕ್ ಪೋಸ್ಟ್ಗಳನ್ನು ಪೊಲೀಸ್ ಸಹಕಾರದಲ್ಲಿ ತೆರೆಯಲಾಗಿದೆ.ಇದರ ಜೊತೆಗೆ ತಲಾ ೧೫ ಜನರನ್ನು ಒಳಗೊಂಡ ಐದು ಪ್ಲೆಯಿಂಗ್ ಸ್ಕಾ÷್ವಡ್,ಎಸ್‌ಎಸ್.ಟೀಮ್, ವಿಡಿಯೋ ಸರ್ವೆಲೆನ್ಸ್ ಟೀಮ್ ವಿಡಿಯೋ ವಿವಿಂಗ್ ಟೀಮ್ ಹಾಗೂ ಅಕೌಂಟ್ ಟೀಮ್ ಸಹ ಕೆಲಸ ಮಾಡುತ್ತಿವೆ.ಚುನಾವಣೆಗೆ ಸಂಬಂಧಿಸಿದಂತೆ ದೂರುಗಳಿದ್ದರೆ 0816-2006574೪ಗೆ ಕರೆ ಮಾಡಿ ತಿಳಿಸಬಹುದು. ಇಲ್ಲವೇ ಸಿವಿಹ್ಜಿಲ್ ಅಪ್ ಮೂಲ ಸಹ ತಿಳಿಸಬಹುದು. ದೂರು ದಾಖಲಾದ 100 ನಿಮಿಷ ಒಳಗೆ ಸಮಸ್ಯೆಗೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

click me!