ಶಿವಮೊಗ್ಗ: ಮೀನಾಕ್ಷಿ ಭವನದಲ್ಲಿ ದೋಸೆ ಸವಿದ ಮೈಸೂರಿನ ಮಹಾರಾಜರು..!

By Girish Goudar  |  First Published Jan 4, 2023, 8:49 PM IST

ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಮೀನಾಕ್ಷಿ ಭವನದ ಮಾಲೀಕರು, ಸಿಬ್ಬಂದಿ ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲಿ ತಮ್ಮ ಬೆಳಗಿನ ಉಪಹಾರವನ್ನು ಡಿವಿಎಸ್ ಆಡಳಿತ ಮಂಡಳಿಯೊಂದಿಗೆ ಸೇರಿ ಸವಿದರು.


ಶಿವಮೊಗ್ಗ(ಜ.04):  ಶಿವಮೊಗ್ಗದ ದೇಶೀಯ ವಿದ್ಯಾ ಶಾಲಾ ಸಮಿತಿಯ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಇಂದು(ಬುಧವಾರ) ಮೈಸೂರು ಮಹಾ ಸಂಸ್ಥಾನದ ಮಹಾರಾಜ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ನಗರದ ಹೆಸರಾಂತ ಹೋಟೆಲ್ ಮೀನಾಕ್ಷಿ ಭವನಕ್ಕೆ ಭೇಟಿ ನೀಡಿ ಡಿವಿಎಸ್ ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ದೋಸೆ ಸವಿದಿದ್ದಾರೆ. 

ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬೆಳಗಿನ ಉಪಹಾರಕ್ಕೆಂದು ಡಿವಿಎಸ್ ಆಡಳಿತ ಮಂಡಳಿಯ ಸದಸ್ಯರು ಮೀನಾಕ್ಷಿ ಭವನದ ದೋಸೆಯ ಕುರಿತು ಹೇಳಿದಾಗ ಯಾವ ಆಡಂಬರ, ಬಿಗುಮಾನ ಪ್ರದರ್ಶಿಸದೆ ಸರಳವಾಗಿ ಅಲ್ಲಿಗೇ ಹೋಗಿ ತಿಂದು ಬರೋಣ ಎಂದು ಹೊರಟಿದ್ದರು. 

Tap to resize

Latest Videos

ದಾವಣಗೆರೆಯ ಪುಟ್ಟ ಗ್ರಾಮಕ್ಕೆ Mysuru Wadiyar ಭೇಟಿ

ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಮೀನಾಕ್ಷಿ ಭವನದ ಮಾಲೀಕರು, ಸಿಬ್ಬಂದಿ ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲಿ ತಮ್ಮ ಬೆಳಗಿನ ಉಪಹಾರವನ್ನು ಡಿವಿಎಸ್ ಆಡಳಿತ ಮಂಡಳಿಯೊಂದಿಗೆ ಸೇರಿ ಸವಿದಿದ್ದಾರೆ.

ಅಂಜನಾದ್ರಿ ಬೆಟ್ಟವೇರಿ ಆಂಜನೇಯನ ದರ್ಶನ ಪಡೆದ ಮೈಸೂರು ರಾಜವಂಶಸ್ಥ ಯಧುವೀರ ಒಡೆಯರ್ ದಂಪತಿ! 

ಕಳೆದ ವರ್ಷ ಜೂ.27 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಮ್ಮ ಧರ್ಮಪತ್ನಿ ತ್ರಿಷಿಕಾ ಮತ್ತು ಕುಟುಂಬದ ಇನ್ನಿಬ್ಬರು ಸದಸ್ಯರೊಂದಿಗೆ ಭೇಟಿ ನೀಡಿದ್ದರು. ರಾಜವಂಶಸ್ಥ ದಂಪತಿ ಬೆಟ್ಟದ 575 ಮೆಟ್ಟಿಲುಗಳನ್ನು ಹತ್ತಿ ಹನುಮನ ದರ್ಶನ ಪಡೆದಿದ್ದರು. ಹನುಮನಿಗೆ ಪೂಜೆ ಸಲ್ಲಿಸಿದ ಬಳಿಕ ಯುದುವೀರ್ ಅಲ್ಲಿನ ಅರ್ಚಕರು ಮತ್ತು ದೇವಸ್ಥಾನ ಟ್ರಸ್ಟ್ ನ ಕೆಲ ಸದಸ್ಯರೊಂದಿಗೆ ಒಂದೆರಡು ನಿಮಿಷಗಳ ಕಾಲ ಮಾತನಾಡಿದ್ದರು. ಹಂಪಿಗೆ ಭೇಟಿ ನೀಡಿದ್ದ ಕುಟುಂಬವು ಅಲ್ಲಿಂದ ಅಂಜನಾದ್ರಿ ಬೆಟ್ಟಕ್ಕೆ ತೆರಳಿತ್ತು. 

click me!