Yadgir ಅಂಚೆ ಸಿಬ್ಬಂದಿಯಿಂದಲೇ ಫಲಾನುಭವಿಗಳಿಗೆ 1 ಕೋಟಿ 27 ಲಕ್ಷ ರೂ. ವಂಚನೆ!

By Suvarna News  |  First Published Jun 18, 2022, 5:10 PM IST
  • ಸತ್ತವರ ಹೆಸರಿನಲ್ಲಿ ಪಿಂಚಣಿ ಹಣ ಲೂಟಿ! 
  • ಅಂಚೆ ಸಿಬ್ಬಂದಿಯಿಂದಲೇ ಫಲಾನುಭವಿಗಳಿಗೆ ಮಹಾ ಮೋಸ..!
  • 293 ಫಲಾನುಭವಿಗಳಿಗೆ 1 ಕೋಟಿ 27 ಲಕ್ಷ ರೂ. ವಂಚಿಸಿದ ಖದೀಮರು

ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಜೂನ್ 18): ಸರಕಾರ ವೃದ್ದರಿಗೆ, ವಿಧವೆಯರಿಗೆ ಆರ್ಥಿಕ ಸಹಾಯ ನೀಡಲು ಪಿಂಚಣೆ, ವೃಧ್ಯಾಪ್ಯವೇತನ ಹಾಗೂ ವಿಧವಾವೇತನ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಸರಕಾರದ ಪಿಂಚಣಿ ಯೋಜನೆ ಹಣವನ್ನೇ ಫಲಾನುಭವಿಗಳ ಹೆಸರಿನಲ್ಲಿ ಸರಕಾರಿ ನೌಕರರು ಲೂಟಿ ಮಾಡಿ ಮೋಸ ಮಾಡುವ ಕೆಲಸ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಫಲಾನುಭವಿಗಳ ಹೆಸರಿನಲ್ಲಿ ಹಣ ಗೊಲ್ ಮಾಲ್ ಮಾಡಿದ್ದಾರೆ. 

Tap to resize

Latest Videos

undefined

ಸತ್ತವರ ಹೆಸರಿನಲ್ಲಿ ಮಹಾ ಲೂಟಿ..!
ಮೋಸ ಹೋಗುವವರು ಎಲ್ಲಿತನಕ ಇರ್ತಾರೋ, ಅಲ್ಲಿಯವರೆಗೂ ಮೋಸ ಮಾಡುವವರು ಇದ್ದೆ ಇರ್ತಾರೆಬ ಮಾತಿನಂತೆ ಗೋಗಿ ಗ್ರಾಮದ ಹಲವಾರು ಜನ ಮಹಾ ಮೋಸಕ್ಕೆ ಒಳಗಾಗಿದ್ದಾರೆ. ಕೆಲ ಸತ್ತವರು ಹಾಗೂ ಬದುಕಿದವರ ಫಲಾನುಭವಿಗಳ ಹೆಸರಿನಲ್ಲಿ ಪಿಂಚಣಿ, ವೃದ್ಧಾಪ್ಯವೇತನ, ಅಂಗವಿಕಲರು ಹಾಗೂ ವಿಧವಾ ವೇತನದ ಹಣವನ್ನು ಇಬ್ಬರೂ ಖದೀಮರು ಗುಳುಂ ಮಾಡಿದ್ದಾರೆ. ಈ ಇಬ್ಬರೂ ಕಿರಾತಕರು ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಳಬಟ್ಟಿ ಅಂಚೆ ಕಚೇರಿಯಲ್ಲಿ ಶಾಖೆಯ ಅಂಚೆ ಪಾಲಕನಾಗಿ ಸರದಾರ ನಾಯಕ ಹಾಗೂ ಸಹಾಯಕ ಶಾಖೆ ಅಂಚೆ ಪಾಲಕನಾಗಿ ತ್ರಿಶೂಲ್ ಕಾರ್ಯನಿರ್ವಹಿಸುತ್ತಿದ್ದರು.

Uttara Kannada; ಪಿಯುಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

293 ಫಲಾನುಭವಿಗಳಿಗೆ 1.27 ಕೋಟಿ ರೂ. ಫಂಗನಾಮ..!
ಗೋಗಿ ಗ್ರಾಮದ ಹಲವಾರು ವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ಈ ಹಣದಿಂದಲೇ ಜೀವನ ನಡೆಸುತ್ತಿದ್ದರು. ಆದ್ರೆ ಸರದಾರ ನಾಯಕ ಹಾಗೂ ತ್ರಿಶೂಲ್ ಈ ಇಬ್ಬರೂ ಖದೀಮರು ಆ ಬಡವ, ವೃದ್ಧರ ಹೊಟ್ಟೆಯ ಒಡೆಯುವ ಕೆಲಸ ಮಾಡಿದ್ದಾರೆ. 2021 ಸೆಪ್ಟೆಂಬರ್ 14 ರಿಂದ 2022 ಮೇ ರ ವರೆಗಿನ ಸರಕಾರದಿಂದ ಪಾವತಿಯಾದ ಹಣವನ್ನು ಲೂಟಿ ಮಾಡದ್ದಾರೆ. ಸುರಪುರ ಅಂಚೆ ಉಪವಿಭಾಗದ ವ್ಯಾಪ್ತಿಯ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ  ಬಳಬಟ್ಟಿ ಅಂಚೆ ಕಚೇರಿಯ ಅಂಚೆ ನೌಕರರಿಬ್ಬರು 1 ಕೋಟಿ 27 ಲಕ್ಷ ರೂ. ಅಡಿಟ್ ಮಾಡುವಾಗ ಲೂಟಿಗೈದಿದ್ದಾರೆ. ಸತ್ತವರ ಹೆಸರಿನಲ್ಲಿ ಕೂಡ ಖದೀಮರು ಗ್ಯಾಂಗ್ ಹಣ ಕೊಳ್ಳೆ ಹೊಡೆದಿದ್ದಾರೆ. ಕೆಲ ಫಲಾನುಭವಿಗಳು ಮೃತಪಟ್ಟಿದ್ದು ಸತ್ತವರ ಹೆಸರಿನಲ್ಲಿ ಹಣ ದೋಚಲಾಗಿದೆ. 

293 ಫಲಾನುಭವಿಗಳ ಹೆಸರಿನಲ್ಲಿ 8 ಸಿಮ್ ಬಳಸಿ ಹಣ ದರೋಡೆ
ಗೋಗಿ ಗ್ರಾಮದ 8 ಜನ ಪರಿಚಯಸ್ಥರ ಹೆಸರಿನಲ್ಲಿ 8 ಮೊಬೈಲ್ ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡಿ ಸಿಮ್ ಕಾರ್ಡ್ ಉಪಯೋಗಿಸಿ ಸದರಿ ನಂಬರ್ ಗಳಿಂದ ಲಿಂಕ್ ಮಾಡಿದ ಐಪಿಪಿಬಿ ಖಾತೆಗಳನ್ನು ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಳಬಟ್ಟಿ ಶಾಖಾ ಅಂಚೆ ಕಚೇರಿಯಲ್ಲಿ ತೆರೆದು ಮೋಸದಿಂದ ಹಣ ವರ್ಗಾವಣೆ ಮಾಡಿ ಫಲಾನುಭವಿಗಳ ಜೊತೆ ಅಂಚೆ  ಇಲಾಖೆಗೆ  ವಂಚನೆ ಮಾಡಲಾಗಿದೆ.

ಮೋಸ ಮಾಡಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸುರಪುರ ಉಪವಿಭಾಗದ ಅಂಚೆ ನಿರೀಕ್ಷಕ ಸಹನ್ ಕುಮಾರ ಗೋಗಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ‌. ಅಂಚೆ ನೌಕರರಾದ ಸರದಾರ ನಾಯಕ ಹಾಗೂ ತ್ರಿಶೂಲ್ ಹಾಗೂ ಸರದಾರ ನಾಯಕ ಅವರ ಮಾವ ಹಾಗೂ ಅಳಿಯನ ವಿರುದ್ಧ ದೂರು ದಾಖಲಾಗಿದೆ.

2nd PUC Result Toppers List; ದ‌ಕ‌ ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್, ಕಲಾ ವಿಭಾಗದಲ್ಲಿ

ಸರದಾರ ನಾಯಕ  ಮಾವ ಗುರುರಾಜ ಹಾಗೂ ಅಳಿಯ ನಿಲೇಶ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿ ಹಣ ಲೂಟಿ ಮಾಡಲಾಗಿದೆ. ಸರದಾರ ನಾಯಕ ತನ್ನ ಹಾಗೂ ಸಂಬಂಧಿಕರ ಖಾತೆಗೆ 77 ಲಕ್ಷ ರೂ ಹಣ ವರ್ಗಾವಣೆ ಮಾಡಿ ಮೋಸ ಮಾಡಿದ್ದಾನೆ.ಅದೆ ರೀತಿ ಅಂಚೆ ನೌಕರರ ತ್ರಿಶೂಲ್ ತನ್ನ ಬ್ಯಾಂಕ್ ಖಾತೆಗೆ 49 ಲಕ್ಷ  ಹಣ ವರ್ಗಾವಣೆ ಮಾಡಿಕೊಂಡು ಹಣ ವಿತ್ ಡ್ರಾ ಮಾಡಿ ಮೋಸ ಮಾಡಿದ್ದಾನೆ.

ಪ್ರಕರಣ ದಾಖಲಾಗುವ ಮುನ್ನವೇ ಆರೋಪಿ ಆತ್ಮಹತ್ಯೆ
293 ಫಲಾನುಭವಿಗಳಿಗೆ ಮಹಾ ಮೋಸ ಮಾಡಿದ ಇಬ್ಬರೂ ಮೋಸಗಾರರು ಬಿಂದಾಸ್ ತೀರ್ಗಾಡ್ತಿದ್ರು, ಈ ವಿಷಯ ತಿಳಿಯುತ್ತಿದ್ದಂತೆ ಸುರಪುರ ಉಪ ವಿಭಾಗ ನಿರೀಕ್ಷಕ ಸಹನ್ ಕುಮಾರ ಖದೀಮರ ವಿರುದ್ಧ ಪ್ರಕರಣ ದಾಖಲು ಮಾಡಲು ಮುಂದಾದ ವಿಷಯ ತಿಳಿಯುತ್ತಿದ್ದಂತೆ, ಉಪ ಅಂಚೆ ಪಾಲಕ ತ್ರೀಶೂಲ್ ಜೂನ್ 10 ರಂದು ಶಹಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೈಲು ಸೇರುವ ಆತಂಕ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌. ಪ್ರಕರಣ ದಾಖಲಾಗುತ್ತಿದ್ದಂತೆ ಗೋಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಿಂಚಣಿ ಹಣ ಖಾತೆಗೆ ಜಮಾ ಆಗುತ್ತದೆ ಎಂದು ನಂಬಿದ ಫಲಾನುಭವಿಗಳು ಹಣ ಖಾತೆಗೆ ಜಮಾ ಆಗದೆ ಕಂಗಲಾಗಿದ್ದಾರೆ. ಫಲಾನುಭವಿಗಳು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ‌.

click me!