ಗಣಪತಿ ಮೂರ್ತಿ ಇಟ್ಟು ಭಾವೈಕ್ಯತೆ ಸಂದೇಶ ಸಾರಿದ ಅಬ್ದುಲ್ ನಬಿ ಕುಟುಂಬ!

By Gowthami K  |  First Published Sep 3, 2022, 5:03 PM IST

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಅಬ್ದುಲ್ ನಬಿ ಕುಟುಂಬ ತಮ್ಮ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ  ಮಾಡಿ ಪೂಜೆ ಮಾಡುತ್ತಿದ್ದಾರೆ. ಈ ಮೂಲಕ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದ್ದಾರೆ.


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಸೆ.3): ರಾಜ್ಯದಲ್ಲಿ ಧರ್ಮ ದಂಗಲ್ ಜೋರಾಗಿಯೇ ನಡಿತಾ ಇದೆ. ಇದರಿಂದಾಗಿ ರಾಜ್ಯದಲ್ಲಿ ಧರ್ಮ ಧರ್ಮದ ನಡುವೆ ಸಂಘರ್ಷ ನಡೆಯುವ ಘಟನೆ ನಡೆಯುತ್ತಿವೆ. ಗಣೇಶನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನ ಹಾಗೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಾಕಷ್ಟು ಚರ್ಚೆಯಾಗಿ, ಹಿಂದೂ-ಮುಸ್ಲಿಂರ ನಡುವೆ ಧರ್ಮ ದಂಗಲ್ ನಡೆದಿತ್ತು. ಈಗ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಅಬ್ದುಲ್ ನಬಿ ಕುಟುಂಬ ತಮ್ಮ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ  ಮಾಡಿ ಪೂಜೆ ಮಾಡುತ್ತಿದ್ದಾರೆ. ದೋರನಹಳ್ಳಿ ಗ್ರಾಮದ ಮುಸ್ಲಿಂ ಕುಟುಂಬವು ಮನೆಯಲ್ಲಿ ವಿಘ್ನೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಿ  ಮಾನವರು ನಾವೆಲ್ಲ ಒಂದೇ, ಜಾತಿ ಬೇರೆಯಾದರು ನಾವು ಒಂದಾಗಿರಬೇಕೆಂಬ ಸಂದೇಶ ಸಾರಿದ್ದಾರೆ. ಭಾರತೀಯರು ನಾವೆಲ್ಲರೂ ಒಂದೇ. ಭಾರತ ವೈವಿಧ್ಯತೆಯಲ್ಲಿ ಏಕತೆಯ ರಾಷ್ಟ್ರ ಆದ್ರೆ ಇತ್ತೀಚಿನ ದಿನಗಳಲ್ಲಿ ಧರ್ಮ-ಧರ್ಮಗಳ ನಡುಗೆ ಗಲಾಟೆ, ಕಲಹ ಹೆಚ್ಚಾಗಿದೆ. ಆದ್ರೆ ದೋರನಹಳ್ಳಿಯ ಅಬ್ದುಲ್ ನಬಿ ಎಂಬ ಮುಸ್ಲಿಂ ಮನೆಯಲ್ಲಿ ಹಿಂದು ಹಬ್ಬ ಆಚರಣೆ ಮಾಡುವ  ಮೂಲಕ ನಾವೆಲ್ಲ ಒಂದೆ ಎಂಬ ಸಂದೇಶ ಸಾರಲಾಗಿದೆ.

Tap to resize

Latest Videos

undefined

 ಮುಸ್ಲಿಂ ಸಮುದಾಯದ ಮನೆಯಲ್ಲಿ ವಿಘ್ನೇಶ್ವರನ ಮೂರ್ತಿ ಪ್ರತಿಷ್ಠಾಪನೆ ಮಾಡಿ ನಿತ್ಯ ಪೂಜೆ ಸಲ್ಲಿಸುವ ಮೂಲಕ ಸಾಮರಸ್ಯದ ಸಂದೇಶ ಸಾರುತ್ತಿದೆ ಅಬ್ದುಲ್ ನಬಿ ಕುಟುಂಬ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಹೊಟೇಲ್ ಹೊಂದಿರುವ ಅಬ್ದುಲ್ ನಬಿ ಅವರು, ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಹಿಂದು ದೇವರ ಪೂಜೆ ಮಾಡಿ ಭಕ್ತಿ ಪರಕಾಷ್ಠೆ ಮೆರೆಯುತ್ತಿದ್ದಾರೆ.

ನಾಲ್ಕು ವರ್ಷದಿಂದ ಗಣೇಶನ‌ ಪೂಜೆ..!
ಅಬ್ದುಲ್ ನಬಿ ಅವರು ದೋರನಹಳ್ಳಿ ಗ್ರಾಮದಲ್ಲಿ ಎಲ್ಲಾ ಜಾತಿ ಜನಾಂಗದವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ನಾವೆಲ್ಲರೂ ಕೂಡಿ ಇರೋಣ. ಮಾನವರು ನಾವೆಲ್ಲ ಒಂದೇ ಎಂಬ ತತ್ವದಲ್ಲಿ ಜೀವನ ಸಾಧಿಸಬೇಕೆಂದು ತತ್ವದಲ್ಲಿ ಹಾದಿಯಲ್ಲಿ ಜೀವನ ನಡೆಸಿಕೊಂಡು ಬಂದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅಬ್ದುಲ್ ನಬಿ ಅವರು ವಿಘ್ನೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಗಣೇಶನ ಹಬ್ಬ ಆಚರಣೆ ಮಾಡಿಕೊಂಡು ಬಂದಿದ್ದಾರೆ. 

ಹಿಂದೂ ಧರ್ಮವನ್ನು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಮುಸ್ಲಿಂ ಹಬ್ಬ ಆಚರಣೆ ಮಾಡಿಕೊಂಡು ಬರುವ ಜೊತೆ ಹಿಂದು ಹಬ್ಬಗಳನ್ನು ಕೂಡ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಮನೆಯ ಕುಟುಂಬಸ್ಥರೆಲ್ಲರೂ ಪೂಜೆ ಸಲ್ಲಿಸುತ್ತಾರೆ. ಮಕ್ಕಳು ಕೂಡ ಗಣೇಶನ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಜಾತಿ ಬೇರೆಯಾದರು ನಾವೆಲ್ಲ ಮಾನವರು ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲು  ಬರಬೇಕೆಂದು ಅಬ್ದುಲ್ ನಬಿ ಅವರ ಮಾತಾಗಿದೆ. ಅಬ್ದುಲ್ ನಬಿ ಅವರು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಿರುವದಕ್ಕೆ ಅಬ್ದುಲ್ ಸ್ನೇಹಿತರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನಾವೆಲ್ಲ ಒಂದೇ, ವಿಶ್ವಾಸದಿಂದ ಬದುಕಬೇಕು: ನಬಿ
ಈ ಬಗ್ಗೆ ಅಬ್ದುಲ್ ನಬಿ ಅವರು ಮಾತನಾಡಿ, ನಾವೆಲ್ಲರೂ ಒಂದೇ ಜಾತಿ ಬೇರೆಯಾದ್ರು ಪ್ರತಿ ವಿಶ್ವಾಸದಿಂದ ಬದುಕಬೇಕು. ನಾವು ನಮ್ಮ ಸಮುದಾಯದ ಹಬ್ಬದ ಜೊತೆ ಹಿಂದು ಹಬ್ಬ ಕೂಡ ಆಚರಣೆ ಮಾಡಿಕೊಂಡು ಬರುತ್ತಿದ್ದೆವೆ. ನಾಲ್ಕು ವರ್ಷದಿಂದ ಕೂಡ ಮನೆಯಲ್ಲಿ ಗಣೇಶ ಮೂರ್ತಿ ಕೂಡಿಸಿ ಪೂಜೆ ಮಾಡಿಕೊಂಡು ಬರುತ್ತಿದ್ದೇವೆ ಎಂದರು.

Vijayanagara; ವೀರ ಸಾವರ್ಕರ್ ಫೋಟೋ ಇಟ್ಟು ಗಣೇಶ ಪ್ರತಿಷ್ಠಾಪಿಸಿದ ಉರ್ದು ಶಾಲೆ

ಅಬ್ದುಲ್ ನಬಿ ಮನೆಗೆ ಬರುವ ಭಕ್ತಾದಿಗಳು
ಮುಸ್ಲಿಂ ಸಮುದಾಯದ ಅಬ್ದುಲ್ ನಬಿ ಅವರು ಶ್ರದ್ಧಾ ಭಕ್ತಿಯಿಂದ ಗಣೇಶನ ಭಕ್ತರಾಗಿ ಪೂಜೆ ಮಾಡಿಕೊಂಡು ಬರುತ್ತಿರುವದನ್ನು ಅರಿತು ಸುತ್ತಮುತ್ತಲಿನ ಜನರು ಕೂಡ ಆಗಮಿಸಿ, ಗಣೇಶನ ದರ್ಶನ ಪಡೆದು ಹೋಗುತ್ತಿದ್ದಾರೆ. ಅಬ್ದುಲ್ ನಬಿ ಅವರ ಸಾಮರಸ್ಯದ ಸಂದೇಶಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಅಬ್ದುಲ್ ಸ್ನೇಹಿತ ಹಯ್ಯಾಳಪ್ಪ ಮಾತನಾಡಿ, ಸಮಾಜದಲ್ಲಿ ಜಾತಿ-ಜಾತಿ ಸಂಘರ್ಷ ಬೇಡ ನಾವೆಲ್ಲ ಒಂದೆ ಎಂದು ಜೀವನ ನಡೆಸಬೇಕಿದೆ.

Ganesha Temples: ಕರ್ನಾಟಕದ ಅಷ್ಟ ವಿನಾಯಕ ದರ್ಶನ

 ಅಬ್ದುಲ್ ನಬಿ ಅವರು ತಮ್ಮ ಧರ್ಮದ ಹಬ್ಬ ದ ಸಂಪ್ರದಾಯ ಜೊತೆ ಹಿಂದು ಹಬ್ಬ ಆಚರಣೆ ಮಾಡಿಕೊಂಡು ‌ಬರುತ್ತಾರೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆಂದರು. ರಾಜ್ಯದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿವಾದದ ನಡುವೆ ಮುಸ್ಲಿಂ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ನಾವೆಲ್ಲ ಒಂದೆ ಎಂಬ ಸಂದೇಶ ಸಾರಿರುವ ಅಬ್ದುಲ್ ನಬಿ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ.

click me!