ಯಾದಗಿರಿಯಲ್ಲಿ ಜಾತಿ ನಿಂದನೆ ಭೀತಿಗೆ ಜೀವ ಕಳಕೊಂಡ ಮಗ, ಪುತ್ರನ ಸಾವಿನಿಂದ ಹೃದಯಾಘಾತಕ್ಕೆ ತಂದೆ ಬಲಿ

Published : Jul 10, 2025, 03:16 PM IST
 Yadgir

ಸಾರಾಂಶ

ಜಾತಿ ನಿಂದನೆ ಪ್ರಕರಣದ ಭಯದಿಂದ ಮಹೆಬೂಬ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿನಿಂದ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಡಗೇರದಲ್ಲಿ ನಡೆದ ಈ ಘಟನೆ ತೀವ್ರ ಆಘಾತವನ್ನುಂಟು ಮಾಡಿದೆ.

ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಆರೆಸ್ಟ್ ಆಗುವ ಭಯದಿಂದ ಮಹೆಬೂಬ್ (22) ಎಂಬ ಯುವಕ ಆತ್ಮ*ಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿನ ಸುದ್ದಿ ಕೇಳಿ ಶಾಕ್‌ ಆದ ತಂದೆ ಹೃದಯಾಘಾತಕ್ಕೆ ಒಳಗಾಗಿ ಯುವಕನ ತಂದೆ ಸೈಯದ್ ಅಲಿ (50) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ವಡಗೇರ ಪಟ್ಟಣದ ಜಮೀನಿನ ದಾರಿ ಸಂಬಂಧ ಒಂದು ವಾರದ ಹಿಂದೆ ಮಹೆಬೂಬ್‌ಗೆ ದಲಿತ ಕುಟುಂಬದ ಜೊತೆ ಜಗಳ ಸಂಭವಿಸಿತ್ತು. ಈ ಜಗಳವನ್ನು ಗ್ರಾಮಸ್ಥರು ಹಿರಿಯರ ಮೊದಲು ನ್ಯಾಯ ಪಂಚಾಯತಿಯಲ್ಲಿ ಬಗೆಹರಿಸಿದರು. ಆದರೆ, ಬಳಿಕ ಬೇರೆ ಊರಿನಿಂದ ಬಂದ ದಲಿತ ಮುಖಂಡರು ಮಹೆಬೂಬ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲು ಮುಂದಾದರು.

ಜಾತಿ ನಿಂದನೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಮಹೆಬೂಬ್‌ಗೆ ಬೆದರಿಕೆ ಹಾಕಲಾಗಿದ್ದು, ಈ ಕಾರಣಕ್ಕೆ ಅವನು ಬಲವಾದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ. ಕೇಸ್ ದಾಖಲಾಗಿದರೆ ತಮ್ಮ ಗೌರವ ಹೋಗಿ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಭಯದಿಂದ ಮಹೆಬೂಬ್ ನಿನ್ನೆ ತನ್ನನ್ನು ಮರಕ್ಕೆ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾನೆ.

ಮಗನ ಆತ್ಮ*ಹತ್ಯೆಯ ಸುದ್ದಿ ತಿಳಿದ ತಕ್ಷಣವೇ ಶಾಕ್‌ಗೆ ಒಳಗಾದ ತಂದೆ ಸೈಯದ್ ಅಲಿ, ತುರ್ತುವಾಗಿ ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲಿಸಲ್ಪಟ್ಟರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸ್ ತನಿಖೆ ಮುಂದುವರಿದಿದೆ.

 

PREV
Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಬೆಂಗಳೂರಿನ ಹಲವೆಡೆ ಡಿ.6, 8ಕ್ಕೆ ಪವರ್ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?