ಮತ್ತೋರ್ವ ಮಹಿಳೆಗೆ ಸಿಗುತ್ತಾ BSY ಸಂಪುಟದಲ್ಲಿ ಸ್ಥಾನ ?

By Kannadaprabha News  |  First Published Dec 14, 2019, 9:59 AM IST


ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಓರ್ವ ಸಚಿವೆ ಇದ್ದು ಇದೀಗ ಮತ್ತೋರ್ವ ಮಹಿಳೆಗೂ ಸಚಿವ ಸ್ಥಾನ ಸಿಗುತ್ತಾ..? ಇದೀಗ ಸಚಿವ ಸ್ಥಾನಕ್ಕೆ ಆಗ್ರಹ ಹೆಚ್ಚಿದೆ. 


ಚಿತ್ರದುರ್ಗ [ಡಿ.14]:  ಯಾದವ ಸಮುದಾಯದ ಏಕೈಕ ಶಾಸಕಿಯಾಗಿರುವ ಹಿರಿಯೂರು ಕ್ಷೇತ್ರದ ಪೂರ್ಣಿಮಾ ಶ್ರೀನಿವಾಸ್‌ಗೆ ಸಚಿವ ಸ್ಥಾನ ನೀಡಬೇಕೆಂದು ಚಿತ್ರದುರ್ಗ ಗೊಲ್ಲಗಿರಿ ಮಹಾಸಂಸ್ಥಾನದ ಕೃಷ್ಣ ಯಾದವಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ. 

ನಗರದ ಹೊರವಲಯದಲ್ಲಿರುವ ಯಾದವನಂದ ಗುರುಪೀಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡಬೇಕೆಂದು ಕಳೆದ ತಿಂಗಳೇ ಯಾದವ ಸಮುದಾಯದ ನಿಗಮ ಮುಖ್ಯಮಂತ್ರಿ ತೆರಳಿ ಮನವಿ ಸಲ್ಲಿಸಿದ್ದರು.

Tap to resize

Latest Videos

undefined

ಸೋತವರನ್ನೂ ಮಂತ್ರಿ ಮಾಡ್ಬೇಕಂದ್ರೆ BSY ಮುಂದಿರವ 2 ಆಯ್ಕೆಗಳು...

ಆ ವೇಳೆ ಉಪಚುನಾವಣೆ ಮುಗಿದ ನಂತರ ಸ್ಥಿರ ಸರ್ಕಾರ ಬಂದರೆ ಸಚಿವ ಸ್ಥಾನ ನೀಡಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದ್ದರು. ಇದೀಗ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನ ಗಳಿಸುವ ಮೂಲಕ ಸರ್ಕಾರ ಸುಭದ್ರಗೊಂಡಿದ್ದು, ಮುಖ್ಯಮಂತ್ರಿಗಳು ಕೊಟ್ಟಭರವಸೆಯಂತೆ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.

click me!