ಯಾದಗಿರಿ: ದಿನಕ್ಕೆ 3 ಬಾಟಲ್‌ ಸ್ಟಿಂಗ್‌ ಜ್ಯೂಸ್‌ ಕುಡೀತಿದ್ದವ ಕಿಡ್ನಿ ಫೇಲಾಗಿ ಸಾವು!

Kannadaprabha News   | Kannada Prabha
Published : Jun 14, 2026, 05:00 AM IST
A young man from Yadgir who drank 3 bottles of Sting Juice a day died of kidney failure!

ಸಾರಾಂಶ

sting juice side effects ದಿನಕ್ಕೆ 3ರಿಂದ 4 ಬಾಟಲಿ ಸ್ಟಿಂಗ್‌ ಜ್ಯೂಸ್‌(Sting Juice) ಕುಡಿಯುತ್ತಿದ್ದ ಯುವಕ(young man)ನೊಬ್ಬ ಕಿಡ್ನಿ ವೈಫಲ್ಯವಾಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ(Yadgir) ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ(Narayanapur)ದಲ್ಲಿ ನಡೆದಿದೆ.

 ಸಾವಿಗೆ ಅತಿಯಾದ ಕೆಫೇನ್‌ ಸೇವನೆ ಕಾರಣ

 ಹುಣಸಗಿ(ಯಾದಗಿರಿ) (ಜೂ.14): ದಿನಕ್ಕೆ 3ರಿಂದ 4 ಬಾಟಲಿ ಸ್ಟಿಂಗ್‌ ಜ್ಯೂಸ್‌(Sting Juice) ಕುಡಿಯುತ್ತಿದ್ದ ಯುವಕ(young man)ನೊಬ್ಬ ಕಿಡ್ನಿ ವೈಫಲ್ಯವಾಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ(Yadgir) ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ(Narayanapur)ದಲ್ಲಿ ನಡೆದಿದೆ.

ಅತಿಯಾದ ಸ್ಟಿಂಗ್ ಜ್ಯೂಸ್ ಸೇವನೆ

ಬಾಲು ದೇಸಾಯಿ(Baalu desai) (19) ಮೃತ ಯುವಕ. ಈ ಯುವಕ ಕಳೆದ ಹಲವು ದಿನಗಳಿಂದ ಸ್ಟಿಂಗ್‌ ಜ್ಯೂಸ್‌ ಅನ್ನು ಅತಿಯಾಗಿ ಸೇವನೆ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಬಾಲು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಪ್ರತಿದಿನ 3 ರಿಂದ 4 ಬಾಟಲಿ ಸ್ಟಿಂಗ್‌ ಜ್ಯೂಸ್‌ ಕುಡಿಯುತ್ತಿದ್ದ. ಕುಟುಂಬಸ್ಥರು ಮತ್ತು ಸ್ನೇಹಿತರು ಅಷ್ಟೊಂದು ಸ್ಟಿಂಗ್‌ ಜ್ಯೂಸ್‌ ಕುಡಿಯುವುದು ಒಳ್ಳೆಯದಲ್ಲ ಎಂದು ತಿಳಿ ಹೇಳಿದ್ದರೂ ಆತ ಕೇಳಿರಲಿಲ್ಲ. 

ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅತಿಯಾದ ಕೆಫೇನ್ ಹಾಗೂ ರಾಸಾಯನಿಕಗಳ ಸೇವನೆಯಿಂದ ಕಿಡ್ನಿ ವೈಫಲ್ಯ ಉಂಟಾಗಿ ಸಾವನ್ನಪ್ಪಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

PREV
Read more Articles on
click me!

Recommended Stories

Karnataka weather: ರಾಜ್ಯದಲ್ಲಿ ಮುಂಗಾರು ಚುರುಕು: 4 ಜಿಲ್ಲೇಲಿ ಭಾರೀ ಮಳೆ, ಸಿಡಿಲಿಗೆ ರೈತ ಸಾವು!
Jagadish Shettar: ಬೆಳಗಾವಿ, ಕಳಸಾ-ಬಂಡೂರಿ, ರೈಲ್ವೆ ಯೋಜನೆಗಳ ಬಗ್ಗೆ ಸಂಸದ ಶೆಟ್ಟರ್ ನೀಡಿದ ಭರವಸೆ ಏನು?