ಯಾದಗಿರಿಯ ರೇಷ್ಮೆ ಬೆಳೆಗಾರರಿಗೆ ಶಾಕ್, ಗೂಡು ಕಟ್ಟಬೇಕಾದ ರೇಷ್ಮೆ ಹುಳುಗಳು ಮಣ್ಣುಪಾಲು!

By Suvarna News  |  First Published Sep 16, 2022, 6:04 PM IST

ರೇಷ್ಮೆ ಹುಳುಗಳು ಗೂಡು ಕಟ್ಟಿ, ಅದೇ ಗೂಡನ್ನು ಲಕ್ಷಾಂತರ ರೂಪಾಯಿಗೆ ದೂರದ ರಾಮನಗರಕ್ಕೆ ಹೋಗಿ ಮಾರಾಟ ಮಾಡಿ ಲಾಭ ಪಡೆದುಕೊಳ್ಳಬೇಕಾಗಿದ್ದ ಯಾದಗಿರಿ ರೈತರು ಈಗ ಕಂಗಾಲಾಗಿದ್ದಾರೆ. ಲಕ್ಷಾಂತರ ರೂ ಹಾಕಿ ಕೈ ಸುಟ್ಟುಕೊಂಡಿದ್ದಾರೆ.


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಸೆ.16): ರೈತ ದೇಶದ ಬೆನ್ನೆಲುಬು. ಭೂ ತಾಯಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಾನೆ. ನಂಬಿದ ಭೂ ತಾಯಿ ಯಾವತ್ತು ರೈತನಿಗೆ ಮೋಸ ಮಾಡಲ್ಲ. ಯಾದಗಿರಿಯ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಸಾಲ ಸೋಲ  ಮಾಡಿ ರೇಷ್ಮೆ ಬೆಳೆಯನ್ನು ಚೆನ್ನಾಗಿಯೇ ಬೆಳೆದಿದ್ದಾರೆ, ಆದ್ರೆ ಈಗ ಗೂಡು ಕಟ್ಟಲು ರೇಷ್ಮೆ ಹುಳುಗಳನ್ನು ತಂದ ರೈತರಿಗೆ ಶಾಕ್ ಎದುರಾಗಿದೆ. ಗೂಡು ಕಟ್ಟಬೇಕಾದ ರೇಷ್ಮೆ ಹುಳುಗಳು ಮಸಣ ಸೇರಿವೆ. ಇದರಿಂದಾಗಿ ಗಿರಿನಾಡು ಯಾದಗಿರಿ ಜಿಲ್ಲೆಯ ರೈತರು ಅಧಿಕಾರಿಗಳು ಹಾಗೂ ರೇಷ್ಮೆ ಹುಳು ಸಾಕಾಣಿಕಾ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾದಗಿರಿಯಂತಹ ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಯುವುದೇ ಒಂದು ಸವಾಲಿನ ಕೆಲಸ, ಅಂತದ್ರಲ್ಲಿ ಹೇಗಾದರೂ ಮಾಡಿ ರೈತರು ರೇಷ್ಮೆ ಬೆಳೆಯನ್ನು ಬೆಳೆದಿದ್ದರು. ಏಳೆಂಟು ತಿಂಗಳಕಾಲ ರೇಷ್ಮೆ ಬೆಳೆಯನ್ನು ಬೆಳೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಬೇರೆಯವರ ಬಳಿ ಸಾಲ ಪಡೆದು ಅದಕ್ಕೆ ರಸಗೊಬ್ಬರ, ಕ್ರಿಮಿನಾಶಕವನ್ನು ಬಳಸಿ ಬೆಳೆ ಬೆಳೆದಿದ್ದರು, ಈಗ ಲಾಭ ನಿರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆಯ ರೈತರಿಗೆ ಆಘಾತ ಎದುರಾಗಿದೆ. ರೈತಾಪಿ ವರ್ಗದವರು ತಮ್ಮ ಕುಟಂಬಸ್ಥರೆಲ್ಲರೂ ಅದೇ ರೇಷ್ಮೆ ಬೆಳೆಯನ್ನು ನಂಬಿಕೊಂಡು ಜೀವನ ಸಾಗಿಸುವಂತ ಹಲವು ರೈತರಿಗೆ ಶಾಕ್ ಆಗಿದೆ. ಅತ್ತ ರೇಷ್ಮೆ ಬೆಳೆಯನ್ನು ಕಳೆದುಕೊಂಡು, ಇತ್ತ ದುಡ್ಡು ಕೊಟ್ಟು ರೇಷ್ಮೆ ಹುಳುಗಳನ್ನು ಖರೀದಿ ಮಾಡಿಕೊಂಡು ಬಂದಿದ್ದು, ಈಗ ಎಲ್ಲವೂ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಯಾದಗಿರಿ ಜಿಲ್ಲೆಯ ರೇಷ್ಮೆ ಬೆಳೆಗಾರರಿ ದಿಕ್ಕು ತೋಚದ ಪರಿಸ್ಥಿತಿ ಎದುರಾಗಿದೆ.

Tap to resize

Latest Videos

undefined

ಗೂಡು ಕಟ್ಟಬೇಕಾದ ಹುಳುಗಳು ಮಣ್ಣುಪಾಲು!
ರೇಷ್ಮೆ ಹುಳುಗಳು ಗೂಡು ಕಟ್ಟಿ, ಅದೇ ಗೂಡನ್ನು ಲಕ್ಷಾಂತರ ರೂಪಾಯಿಗೆ ದೂರದ ರಾಮನಗರಕ್ಕೆ ಹೋಗಿ ಮಾರಾಟ ಮಾಡಿ ಲಾಭ ಪಡೆದುಕೊಳ್ಳಬೇಕಾಗಿದ್ದ ರೈತರಿಗೆ ಫಲ ಮಾತ್ರ ಶೂನ್ಯ ಸಿಕ್ಕಿದ್ದು, ರೈತರು ಗೂಡು ಕಟ್ಟದ ರೇಷ್ಮೆ ಹುಳುಗಳನ್ನು ಯಾದಗಿರಿಯ ರೈತರು ಮಣ್ಣಲ್ಲಿ ಮುಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾದಗಿರಿಯ ಹಲವು ರೇಷ್ಮೆ ಬೆಳೆಗಾರರು ರೇಷ್ಮೆ ಹುಳುಗಳನ್ನು ಕಲಬುರಗಿಯ ಸಿದ್ದಬಸವೇಶ್ವರ ಖಾಸಗಿ ಚಾಕಿ ಹುಳು ಸಾಕಾಣಿಕಾ ಕೇಂದ್ರದಲ್ಲಿ ಹುಳು ತಂದಿದ್ದರು. ಈ ಹುಳುಗಳು ಸಾಮಾನ್ಯವಾಗಿ 15 ದಿನಗಳಲ್ಲಿ ಗೂಡು ಕಟ್ಟಬೇಕಾಗಿತ್ತು, ಆದ್ರೆ 20 ದಿನಗಳು ಕಳೆದ್ರೂ ಕೂಡ ಗೂಡು ಕಟ್ಟಿಲ್ಲ. ಇದರಿಂದಾಗಿ 15 ಕ್ಕೂ ಹೆಚ್ಚು ರೇಷ್ಮೆ ಬೆಳೆಗಾರರು ಸಂಕಷ್ಟ ಪಡುವಂತಾಗಿದೆ.

 Chikkaballapur: ಕೋವಿಡ್‌ ವೇಳೆ ಶೇ. 20ರಷ್ಟು ರೇಷ್ಮೆ ಉತ್ಪಾದನೆ ಹೆಚ್ಚಳ

ಕಂಪನಿಯವರನ್ನ ಕೇಳಿದ್ರೆ ರೇಷ್ಮೆ ಮೊಟ್ಟೆಗಳೇ ಡೂಪ್ಲಿಕೇಟ್ ಎಂದು ರೈತರು ಶಂಕೆ ವ್ಯಕ್ತಪಡಿಸಿದ್ದಾರೆ. ನಾವು ಪ್ರತಿವರ್ಷ ರೇಷ್ಮೆಯನ್ನು ಬೆಳೆಯುತ್ತೇವೆ, ಬಂದಂತಹ ಅಲ್ಪಸ್ವಲ್ಪ ಲಾಭದ ಆಸೆಯನ್ನು ಇಟ್ಟುಕೊಂಡು ಈ ಬಾರಿಯೂ ಮಾಡಿದ್ದೇವೆ. ಈ ಸಲ ತುಂಬಾ ಕಷ್ಟಪಟ್ಟು ತಪ್ಪಲನ್ನು ಶೇಖರಣೆ ಮಾಡಿ, ಖರ್ಚು ವೆಚ್ಚ ಮಾಡಿದ್ದೇವೆ. ಆದ್ರೆ ಈಗ ಕೆಲವು ವ್ಯತ್ಯಾಸಗಳಿಂದ ರೇಷ್ಮೆ ಹುಳುಗಳು ಗೂಡು ಕಟ್ಟಿಲ್ಲ ಇದರಿಂದಾಗಿ ನಮ್ಮ ಕುಟುಂಬವನ್ನೇ ಚಿಂತೆಗಿಡು ಮಾಡಿದೆ, ಇದನ್ನು ಇಲಾಖೆಯವ್ರೆ ಮೆಂಟೆನೆನ್ಸ್ ಮಾಡ್ತಾರೆ, ನಾವು ಇಲಾಖೆಯವ್ರ ಭರವಸೆಯ ಮೇಲೆ ತರುತ್ತೇವೆ ಆದ್ರೆ ಈಗ ರೇಷ್ಮೆ ಹುಳಗಳನ್ನ ತಿಪ್ಪಗೆ ಚೆಲ್ಲುವ ಪರಿಸ್ಥಿತಿ ಬಂದಿದೆ. ಈಗ ಸಂಬಂಧಪಟ್ಟ ಇಲಾಖೆಯವ್ರು ರೈತರಿಗೆ ದೈರ್ಯ ಬಿಡದಂತೆ ಇರಲು ಇನ್ಸ್ ರೇನ್ಸ್ ವ್ಯವಸ್ಥೆ ಮಾಡಬೇಕು ಎಂದು ಏಷ್ಯಾನೆಟ್ ಸುವರ್ಣ ಬಳಿ ರೈತ ಬೀಮರಾಯ ಕಂಚಗಾರಹಳ್ಳಿ ನೋವು ತೊಡಿಕೊಂಡರು.

Kolar: ಜಿಲ್ಲೆಯಲ್ಲಿ ಚಿನ್ನಕ್ಕಿಂತ ರೇಷ್ಮೆಯೇ ದುಬಾರಿ, ರೈತರ ಮುಖದಲ್ಲಿ ಮಂದಹಾಸ

15 ಕ್ಕೂ ಹೆಚ್ಚು ರೇಷ್ಮೆ ಬೆಳೆಗಾರರಿಗೆ ಸಂಕಷ್ಟ
ಯಾದಗಿರಿ ಜಿಲ್ಲೆಯಲ್ಲಿ ಶಹಾಪುರ ಹಾಗೂ ಯಾದಗಿರಿ ತಾಲೂಕಿನಲ್ಲಿ ಹೆಚ್ಚಾಗಿ ರೇಷ್ಮೆ ಬೆಳೆಯುತ್ತಾರೆ. ಈಗಾಗಲೇ ಸಾಕಷ್ಟು ಸಲ ರೇಷ್ಮೆ ಬೆಳೆದು ಸಕ್ಸಸ್ ಆಗಿದ್ದ ರೈತರಿಗೆ ಈಗ ಆಹಾರವಾಗಿದೆ. ಹೇಗಾಯ್ತಲ ಎಂಬ ನೋವು ಇವರಿಗೆ ಕಾಡ್ತಾ ಇದೆ. 100 ಕೆ.ಜಿ ಮೊಟ್ಟೆಗಳು ಗೂಡು ಕಟ್ಟಿದ್ರೆ 15 ದಿನಗಳಲ್ಲಿ ನಾವು ರಾಮನಗರಕ್ಕೆ ಮಾರಾಟ ಮಾಡಲು ಹೋಗಬೇಕಾಗಿತ್ತು. ಈಗ ಗೂಡು ಕಟ್ಟಬೇಕಾದ ಹುಳುಗಳು ಸಾವಿಗೀಡಾಗುತ್ತಿವೆ ಇದನ್ನು ಅಧಿಕಾರಿಗಳಿಗೆ ಕೇಳಿದ್ರೆ 9 ಸಾವಿರ ಮೊಟ್ಟೆಗಳ ಲಾಟ್ ಪ್ರಾಬ್ಲಂ ಇದೆ ಜೊತೆಗೆ ಕೆಲವು ಅಧಿಕಾರಿಗಳು ಮಳೆಯಿಂದ ಈ ತರ ಸಮಸ್ಯೆಯಾಗಿದೆ ಅಂತ ಹೇಳ್ತಾರೆ. ಅಧಿಕಾರಿಗಳು ರೈತರ ಸುಳ್ಳು ಸುಳ್ಳು ಸಮಜಾಯಿಸಿ ಕೊಡ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಡಿಸುತ್ತಿದ್ದಾರೆ. ಇದರಿಂದಾಗಿ ಯಾದಗಿರಿ ಜಿಲ್ಲೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ರೈತರಿಗೆ ಕನಿಷ್ಠ 2 ಲಕ್ಷಕ್ಕೂ ಹೆಚ್ಚು ನಷ್ಠ ಆಗಿದೆ. ಹಾಗಾಗಿ ರೈತರಿಗೆ ಸರ್ಕಾರ ಪರಿಹಾರ ಒದಗಿಸಿಕೊಡಬೇಕಾಗಿದೆ.

click me!