ಪ್ರಾದೇಶಿಕ ಸಾರಿಗೆ ಕಚೇರಿ ಸಿಬ್ಬಂದಿ ಮಾಡಿದ ಎಡವಟ್ಟು| ಡಿಎಲ್ ಹೊಂದಿರುವವರು ತಮ್ಮ ಹೆಸರು, ವಿಳಾಸ ಚೆಕ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ| ನಿಮ್ಮ ಡ್ರೈವಿಂಗ್ ಲೈಸನ್ಸ್ ನಂಬರ್ ನಲ್ಲಿ ಮತ್ತೊಬ್ಬರ ಹೆಸರು ನಮೂದಾಗಿರಬಹುದು| ಐಡಿ ಕಾರ್ಡ್ ಮೇಲೆ ಒಬ್ಬರ ಹೆಸರು ಸರ್ವರ್ ನಲ್ಲಿ ಮತ್ತೊಬ್ಬರ ಹೆಸರು ಬಂದಿದೆ| ಡಿಜಿಟಲ್ ಲಾಕರ್ ನಲ್ಲಿ ದಾಖಲೆ ಸೇವ್ ಮಾಡುವಾಗ ಬೆಳಕಿಗೆ ಬಂದ ಪ್ರಕರಣ|
ಯಾದಗಿರಿ:(ಸೆ.25) ಪ್ರಾದೇಶಿಕ ಸಾರಿಗೆ ಕಚೇರಿ ಸಿಬ್ಬಂದಿ ಎಡವಟ್ಟಿನಿಂದ ಚಾಲನಾ ಪರವಾನಗಿ ಹೊಂದಿರುವ ಪ್ರತಿಯೊಬ್ಬರು ತಮ್ಮ ಹೆಸರು, ವಿಳಾಸ ಚೆಕ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ನಿಮ್ಮ ಡ್ರೈವಿಂಗ್ ಲೈಸನ್ಸ್ ನಂಬರ್ ನಲ್ಲಿ ಮತ್ತೊಬ್ಬರ ಹೆಸರು ನಮೂದಾಗಿರಬಹುದು ಹೌದು, ಯಾದಗಿರಿಯಲ್ಲಿ ಐಡಿ ಕಾರ್ಡ್ ಮೇಲೆ ಒಬ್ಬರ ಹೆಸರು ಸರ್ವರ್ ನಲ್ಲಿ ಮತ್ತೊಬ್ಬರ ಹೆಸರು ಬಂದಿರುವುದರಿಂದ ಮಲ್ಲಯ್ಯ ಎಂಬುವರು ಪರದಾಡುತ್ತಿದ್ದಾರೆ.
ಕಚೇರಿ ಸಿಬ್ಬಂದಿ ಮಾಡಿದ ಎಡವಟ್ಟು
undefined
ಡಿಜಿಟಲ್ ಲಾಕರ್ ನಲ್ಲಿ ದಾಖಲೆ ಸೇವ್ ಮಾಡುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಡಿಜಿಟಲ್ ಲಾಕರ್ ನಲ್ಲಿ ದಾಖಲೆ ಸೇವ್ ಮಾಡಲು ನಂಬರ್ ಫೀಡ್ ಮಾಡಲಾಗಿತ್ತು, ಡಿಎಲ್ ನಲ್ಲಿ ಮಲ್ಲಯ್ಯ ಹೆಸರು, ಸರ್ವರ್ ನಲ್ಲಿ ಶರಣಪ್ಪ ಅನ್ನೋರ ಹೆಸರು ಬಂದಿದೆ. ಹೀಗೆ ಎರಡು ಹೆಸರು ಇರೋದ್ರಿಂದ ಡಿಜಿಟಲ್ ಲಾಕರ್ ನಲ್ಲಿ ಡಿಎಲ್ ತಿರಸ್ಕೃತಗೊಂಡಿದೆ.
ಪರದಾಡುತ್ತಿರುವ ಮಲ್ಲಯ್ಯ
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಬಗ್ಗೆ ಮಲ್ಲಯ್ಯ ಅವರು ಆರ್ ಟಿ ಒ ಕಚೇರಿಗೆ ವಿಚಾರಿಸಿದಾಗ ಡಿಎಲ್ ಸರೆಂಡರ್ ಮಾಡಿ ಹೊಸ ಡಿಎಲ್ ಪಡೆಯಲು ಸೂಚಿಸಿದ್ದಾರೆ. ಹಾಗಾಗಿ ಕಚೇರಿ ಸಿಬ್ಬಂದಿ ಮಾಡಿದ ಎಡವಟ್ಟಿಗೆ ಮಲ್ಲಯ್ಯ ಅವರು ಪರದಾಡುತ್ತಿದ್ದಾರೆ.
ಹೀಗಾಗಿ ಡಿಎಲ್ ಹೊಂದಿರುವವರು ಕೂಡಲೇ ತಮ್ಮ ಹೆಸರು, ವಿಳಾಸ ಪರಿಶೀಲನೆ ಮಾಡಿಕೊಳ್ಳುವುದು ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ದರೆ ನಿಮಗೂ ಕೂಡ ಮುಂದೆ ಇಂತಹ ಸನ್ನಿವೇಶ ಎದುರಾಗಬಹುದು