ಕುಸ್ತಿ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಪ್ರಾಚೀನ ಕಲೆ: ಸಿ.ಟಿ.ರವಿ

By Govindaraj S  |  First Published Jan 16, 2023, 8:44 PM IST

ಕುಸ್ತಿ ಸಂಸ್ಕೃತಿಯ ಪ್ರತೀಕ. ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಪ್ರಾಚೀನ ಯುದ್ಧ ಕಲೆ. ಇಂತಹ ಕಲೆಯನ್ನು ಸಂರಕ್ಷಿಸಲು ಸಲುವಾಗಿ ಜಿಲ್ಲಾ ಹಬ್ಬದಲ್ಲಿ ಕುಸ್ತಿ ಸ್ಪರ್ಧೆ ಆಯೋಜಿಸಿ ಸ್ಪರ್ಧಾಗಳುಗಳಿಗೆ ಪ್ರೇರೇಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು. 


ಚಿಕ್ಕಮಗಳೂರು (ಜ.16): ಕುಸ್ತಿ ಸಂಸ್ಕೃತಿಯ ಪ್ರತೀಕ. ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಪ್ರಾಚೀನ ಯುದ್ಧ ಕಲೆ. ಇಂತಹ ಕಲೆಯನ್ನು ಸಂರಕ್ಷಿಸಲು ಸಲುವಾಗಿ ಜಿಲ್ಲಾ ಹಬ್ಬದಲ್ಲಿ ಕುಸ್ತಿ ಸ್ಪರ್ಧೆ ಆಯೋಜಿಸಿ ಸ್ಪರ್ಧಾಗಳುಗಳಿಗೆ ಪ್ರೇರೇಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ನಗರದ ಬೈಪಾಸ್‌ ಸಮೀಪದ ಎಸ್‌ಎಸ್‌ಆರ್‌ಡಿ ಪ್ರಾಯೋಗಿಕ ಕಾಲೇಜು ಆಟದ ಮೈದಾನದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಕುಸ್ತಿ ಪಟುಗಳು ಕೇವಲ ದೇಹವನ್ನು ಹುರಿಗೊಳಿಸುವುದಲ್ಲದೇ ಸಂಕಷ್ಟದ ಸಮಯದಲ್ಲಿ ದೇಶದ ರಕ್ಷಣೆಗೂ ಬೆನ್ನೆಲುಬಾಗಿ ನಿಂತವರು. 

ಸೈನ್ಯವನ್ನು ತುಕಡಿಗಳೆಂದು ನಾವುಗಳು ಕರೆಯುತ್ತೇವೆ. ಆದರೆ ಒಂದು ಕಾಲದಲ್ಲಿ ಗ್ರಾಮಗಳಲ್ಲಿ ಸೈನಿಕರಿಗೆ ತರಬೇತಿ ನೀಡುವ ಕೇಂದ್ರವಾಗಿ ಕುಸ್ತಿ ಅಖಾಡಗಳು ಕಾರ್ಯ ನಿರ್ವಹಿಸಿದ್ದವು ಎಂದು ಹೇಳಿದರು. ಕುಸ್ತಿ ಕೇವಲ ಗ್ರಾಮೀಣ ಕ್ರೀಡೆ ಮಾತವಲ್ಲದೇ ದೇಹವನ್ನು ಹತೋಟಿಯಲ್ಲಿಡುವ ಸಾಧನ. ಒಂದು ಕಾಲದಲ್ಲಿ ದೇಶದ ಅನೇಕ ಭಾಗಗಳಲ್ಲಿ ಕುಸ್ತಿ ಅಖಾಡಗಳು ಕಾರ್ಯ ನಿರ್ವಹಿಸುತ್ತಿದ್ದವು. ಎಲ್ಲಾ ಗ್ರಾಮದ ಯುವಕರಿಗೆ ದೇಹ ಸದೃಢಗೊಳಿಸಲು ಮತ್ತು ನೈತಿಕವಾಗಿ ಮೌಲ್ಯದ ಶಿಕ್ಷಣವನ್ನು ಅಖಾಡದಲ್ಲಿ ಕಲಿಸಲಾಗುತ್ತಿತ್ತು ಎಂದು ತಿಳಿಸಿದರು. ಕುಸ್ತಿಪಟು ಅಖಾಡಕ್ಕೆ ಹೋಗುವ ಮುನ್ನ ಮಣ್ಣನ್ನು ಮುಟ್ಟಿನಮಸ್ಕರಿಸುವ ಆಧ್ಯಾತ್ಮಿಕ ಸಂಸ್ಕೃತಿ ನಮ್ಮಲ್ಲಿದೆ. 

Tap to resize

Latest Videos

ಬಿಜೆಪಿ ಸರ್ಕಾರವಿದ್ದರೂ ಅಭಿವೃದ್ಧಿಗೆ ಶಾಸಕನಾಗಿ ದುಡಿದಿದ್ದೇನೆ: ಟಿ.ಡಿ.ರಾಜೇಗೌಡ

ಕಸರತ್ತಿಗೂ ಮುನ್ನ ಕೆಲವು ಪರಂಪರೆ ಪಾಲಿಸಿ ಅಖಾಡಕ್ಕಿಳಿಯುವುದು ಭಾರತೀಯ ಕುಸ್ತಿ ಸಂಸ್ಕೃತಿಯಲ್ಲಿ ಅಡಗಿದೆ ಎಂದು ಪ್ರತಿಪಾದಿಸಿದರು. ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಹೆಚ್‌.ಡಿ.ರಾಜೇಶ್‌ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕುಸ್ತಿಪಟುಗಳು ಹೊಸತನದ ವಾತಾವರಣದಲ್ಲಿ ಭಾಗವಹಿಸುವುದು ಅತಿಮುಖ್ಯ. ಸೋಲು, ಗೆಲುವು ಸರಿ ಸಮಾನವಾಗಿ ತೆಗೆದುಕೊಳ್ಳಬೇಕು. ಸ್ಪರ್ಧೆಯಲ್ಲಿ ಗಳಿಸಿದ ಅನುಭವಗಳನ್ನು ಸ್ಪೂರ್ತಿಯಾಗಿಸಿಕೊಳ್ಳಬೇಕು ಎಂದು ಹೇಳಿದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ ನಗದು, ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ, ದ್ವೀತಿಯ ಸ್ಥಾನದವರಿಗೆ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ, ತೃತೀಯ ಸ್ಥಾನ ಗಳಿಸಿದವರಿಗೆ ನಗದು, ಕಂಚಿನ ಪದಕ, ಪ್ರಶಸ್ತಿ ಮತ್ತು ಚತುರ್ಥ ಸ್ಥಾನಗಳಿಸಿದವರಿಗೆ ನಗದು, ಕಂಚಿನ ಪದಕ, ಪ್ರಶಸ್ತಿಪತ್ರ ಮತ್ತು ಭಾಗವಹಿಸಿದ ಎಲ್ಲಾ ಕುಸ್ತಿಪಟುಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಗುವುದು ಎಂದರು.

ಕುಸ್ತಿ ತರಬೇತುದಾರ ನಾಗರಾಜ್‌ ಮಾತನಾಡಿ, ಸ್ಪರ್ಧೆಯಲ್ಲಿ 14 ರಿಂದ 19 ವರ್ಷದ ಯುವಕ- ಯುವತಿಯರು ಹಾಗೂ ಪುರುಷ, ಮಹಿಳೆಯರಿಗಾಗಿ ಎಂಟು ವಿಭಾಗಗಳಲ್ಲಿ ಆಯೋಜಿಸಿರುವ ಸ್ಪರ್ಧೆಯಲ್ಲಿ ಆಯಾ ವಯಸ್ಸಿನ ಪಟುಗಳಿಗೆ ದೇಹತೂಕದ ಅಂದಾಜಿನಲ್ಲಿ ಸ್ಪರ್ಧೆ ನಡೆಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್‌, ಜಿಪಂ ಸಿಇಓ ಜಿ. ಪ್ರಭು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲವಳ್ಳಿ, ದೈಹಿಕ ಶಿಕ್ಷಕರಾದ ಮುನಿಸ್ವಾಮಿ, ನಾಗರಾಜ್‌, ಕುಮಾರಸ್ವಾಮಿ, ಹಿರಿಯ ಕುಸ್ತಿಪಟುಗಳಾದ ಬೀರೂರು ಹೊನ್ನಪ್ಪ, ರಾಜೇಶ್‌, ಮಂಜು ಹಾಜರಿದ್ದರು.

ಸಿದ್ದರಾಮರ ಚಿಂತನೆಯಂತೆ ಬಿಜೆಪಿ ಕೆಲಸ: ಸಿಎಂ ಬೊಮ್ಮಾಯಿ

ಗುಡ್ಡಗಾಡು ಓಟ, ಹಿರಿಯರ ಸ್ಪರ್ಧೆಯಿಂದ ಯುವಕರಿಗೆ ಉತ್ಸಾಹ: ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಯುವಕರು ಸೇರಿದಂತೆ ಹಿರಿಯ ವೃದ್ದರು ಅತ್ಯಂತ ಕ್ರಿಯಾಶೀಲರಾಗಿ ಭಾಗವಹಿಸಿ ದೇಹಕ್ಕೆ ವಯಸ್ಸಾಗಿದೆಯೇ ಹೊರತು ಮನಸ್ಸಿಗಲ್ಲ ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿರುವುದು ಅತ್ಯಂತ ಸಂತಸದ ವಿಷಯ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ನಗರದ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ಗುಡ್ಡಗಾಡು ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ 45 ರಿಂದ 70ರ ಆಸುಪಾಸಿನ ಹಿರಿಯ ನಾಗರೀಕರು ಭಾಗವಹಿಸಿರುವುದು ಅತ್ಯಂತ ಖುಷಿಯ ಸಂಗತಿ ಎಂದರು. ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಹೆಚ್‌.ಡಿ.ರಾಜೇಶ್‌ ಮಾತನಾಡಿ, ಉತ್ಸವದ ಪ್ರಯುಕ್ತ ಗ್ರಾಮೀಣ ಕ್ರೀಡೆಗಳಾದ ಕೆಸರುಗದ್ದೆ ಓಟ, ಗಂಡ ಹೆಂಡತಿಯನ್ನು ಹೊತ್ತು ಓಡುವ ಸ್ಪರ್ಧೆ ಸೇರಿದಂತೆ ವಿವಿಧ ರೀತಿಯ ಕ್ರೀಡೆಗಳನ್ನು ನಗರದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.

click me!