ಹುಬ್ಬಳ್ಳಿ: ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ ಇಂದು ಉದ್ಘಾಟನೆ

By Kannadaprabha News  |  First Published Mar 12, 2023, 12:30 AM IST

ಈ ಪ್ಲಾಟ್‌ಫಾರ್ಮ್‌ನ ಕಾಮಗಾರಿ ಪೂರ್ಣಗೊಂಡು ಆಗಲೇ ಎರಡು ವರ್ಷ ಕಳೆದಿದ್ದು, ಕಾರ್ಯಾರಂಭ ಕೂಡ ಆಗಿದೆ. .20.1 ಕೋಟಿ ವೆಚ್ಚದಲ್ಲಿ 2019ರಲ್ಲಿ ಈ ಪ್ಲಾಟ್‌ಫಾರ್ಮ್‌ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. 2020ರ ಏಪ್ರಿಲ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಕೋವಿಡ್‌ನಿಂದಾಗಿ ಇದರ ಲೋಕಾರ್ಪಣಾ ಕಾರ್ಯಕ್ರಮ ನಡೆದಿರಲಿಲ್ಲ.


ಹುಬ್ಬಳ್ಳಿ(ಮಾ.12):  ಇಲ್ಲಿನ ‘ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ’ದಲ್ಲಿ ನಿರ್ಮಾಣವಾಗಿರುವ ‘ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌’ನ್ನು ಪ್ರಧಾನಿ ನರೇಂದ್ರ ಮೋದಿ ಇಂದು(ಭಾನುವಾರ) ಧಾರವಾಡ ಐಐಟಿ ಕಾರ್ಯಕ್ರಮದಲ್ಲೇ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಪ್ಲಾಟ್‌ಫಾರ್ಮ್‌ 1.5 ಕಿ.ಮೀ. ಉದ್ದವಿದೆ. 2020ರಲ್ಲೇ ಇದರ ಕಾಮಗಾರಿ ಪೂರ್ಣಗೊಂಡಿದೆ. ಕೋವಿಡ್‌ ಕಾರಣ ಉದ್ಘಾಟನೆಯಾಗಿರಲಿಲ್ಲ. ಈ ಪ್ಲಾಟ್‌ಫಾರ್ಮ್‌ ಬಳಸಿ ಏಕಕಾಲಕ್ಕೆ ಎರಡು ದಿಕ್ಕಿಗೆ ರೈಲುಗಳು ಸಂಚರಿಸಬಹುದು.

ಮಧ್ಯಾಹ್ನ 3.15ಕ್ಕೆ ಹೆಲಿಕಾಪ್ಟರ್‌ ಮೂಲಕ ಧಾರವಾಡ ಐಐಟಿ ನೂತನ ಕ್ಯಾಂಪಸ್‌ಗೆ ಅವರು ಬಂದಿಳಿಯಲಿದ್ದು, ಐಐಟಿಯ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಈ ಪ್ಲಾಟ್‌ಫಾರಂ ಲೋಕಾರ್ಪಣಾ ಕಾರ್ಯಕ್ರಮ ಕೂಡ ನಡೆಯಲಿದೆ.

Latest Videos

undefined

ವಿಶ್ವನಾಯಕ ನರೇಂದ್ರ ಮೋದಿಗೆ ಉಡುಗೊರೆ ಕೊಡಲು ಸಿದ್ಧವಾಗಿದೆ ಕಲಘಟಗಿ ತೊಟ್ಟಿಲು!

ಈ ಪ್ಲಾಟ್‌ಫಾರ್ಮ್‌ನ ಕಾಮಗಾರಿ ಪೂರ್ಣಗೊಂಡು ಆಗಲೇ ಎರಡು ವರ್ಷ ಕಳೆದಿದ್ದು, ಕಾರ್ಯಾರಂಭ ಕೂಡ ಆಗಿದೆ. .20.1 ಕೋಟಿ ವೆಚ್ಚದಲ್ಲಿ 2019ರಲ್ಲಿ ಈ ಪ್ಲಾಟ್‌ಫಾರ್ಮ್‌ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. 2020ರ ಏಪ್ರಿಲ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಕೋವಿಡ್‌ನಿಂದಾಗಿ ಇದರ ಲೋಕಾರ್ಪಣಾ ಕಾರ್ಯಕ್ರಮ ನಡೆದಿರಲಿಲ್ಲ.

ಈ ರೈಲ್ವೆ ನಿಲ್ದಾಣದ 1ನೇ ಪ್ಲಾಟ್‌ಫಾರಂ, 550 ಮೀಟರ್‌ ಉದ್ದವಿತ್ತು. ಇದನ್ನು ವಿಸ್ತರಿಸಿ 10 ಮೀ.ಅಗಲದೊಂದಿಗೆ 1,505 ಮೀಟರ್‌ವರೆಗೆ (1.5 ಕಿ.ಮೀ.) ವಿಸ್ತರಿಸಲಾಗಿದೆ. ಇದು ಜಗತ್ತಿನಲ್ಲೇ ಅತಿ ಉದ್ದದ ಪ್ಲಾಟ್‌​ಫಾರಂ ಆಗಿ ಹೊರಹೊಮ್ಮಿದೆ. ಈವರೆಗೂ ಈಶಾನ್ಯ ರೈಲ್ವೆ ವಲಯದ ಗೋರಖಪುರ ನಿಲ್ದಾಣದಲ್ಲಿರುವ 1,366 ಮೀಟರ್‌ (1.36 ಕಿಮೀ) ಉದ್ದದ ಪ್ಲಾಟ್‌ಫಾರ್ಮ್‌ ಅತಿ ಉದ್ದದ ಪ್ಲಾಟ್‌ಫಾರ್ಮ್‌ ಎಂಬ ಖ್ಯಾತಿಗೆ ಒಳಗಾಗಿತ್ತು. ಏಕಕಾಲಕ್ಕೆ ಎರಡು ರೈಲುಗಳು ವಿರುದ್ಧ ದಿಕ್ಕಿಗೆ ಸಂಚರಿಸಲು ಅನುಕೂಲವಾಗುವಂತೆ ಈ ಪ್ಲಾಟ್‌ಫಾರ್ಮ್‌ ವಿನ್ಯಾಸಗೊಳಿಸಲಾಗಿದೆ.

click me!